ಪ್ರಗತಿ ಸಾಧನೆ ಮಾಡದ ಅಧಿಕಾರಿಗಳಿಗೆ ತರಾಟೆ

ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್​ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿದರು. ಎಸ್​.ಎಂ.ಮಂಗಳಾ, ಶ್ರೀನಿವಾಸ್​ ಇದ್ದರು.
ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್​ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿದರು. ಎಸ್​.ಎಂ.ಮಂಗಳಾ, ಶ್ರೀನಿವಾಸ್​ ಇದ್ದರು.
Published on
ಕೋಲಾರ: ಸಮಾಜದಲ್ಲಿ ಉದ್ಬವಿಸಿರುವ ನಿರುದ್ಯೋಗ ನಿಮೂರ್ಲನೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಬಗ್ಗೆ ಸಮರ್ಪಕವಾಗಿ ಅರಿವು ಮೂಡಿಸಿದ್ದರೆ ಪ್ರಗತಿ ಸಾಧನೆ ಮಾಡಬಹುದುತ್ತು, ಆದರೆ ಅಧಿಕಾರಿಗಳ ವಿಳಂಭದಿಂದ ಪ್ರಗತಿ ಹಿನ್ನಡೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್​ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಗತಿ ನೋಡುತ್ತಿದ್ದರೆ ನಿರೀತ ಮಟ್ಟದಲ್ಲಿ ಸಾಧನೆಯಾಗಿಲ್ಲ. ಯೋಜನೆಗಳ ಉದ್ದೇಶವನ್ನು ಜನರಿಗೆ ತಲುಪಿಸುವ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಒಬ್ಬ ವ್ಯಕ್ತಿಗೆ ಒಳ್ಳೆವರಾಗಿ ಅಂತ ಹೇಳುತ್ತಾರೆ ಹೊರತು, ಹೇಗೆ ಆಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವುದಿಲ್ಲ. ಈಗ ಆ ಕೆಲಸ ಆಗಬೇಕಾಗಿದ್ದು ಸೂಕ್ತ ಮಾರ್ಗದರ್ಶನ ನೀಡಬೇಕು, ಜಾರಿಯಾಗಿರುವ ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಜನರಿಗೆ ತಲುಪಿಸಿದ್ದರೆ ನಿರುದ್ಯೋಗ ಯುವಕ, ಯುವತಿಯರು ಅದರ ಪ್ರಯೋಜನ ಪಡೆದುಕೊಂಡು ಬದುಕು ರೂಪಿಸಿಕೊಳ್ಳುತ್ತಿದ್ದರು ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಶ್ರೀನಿವಾಸ್​ ಮಾತನಾಡಿ, ಜಿಲ್ಲೆಯಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸ್ಕೀಲ್​ ಸ್ಕೂಲ್​ ತರಬೇತುದಾರ ಕಾರ್ಯಕ್ರಮ ಜಾರಿ ಮಾಡಲು ಕ್ರಮವಹಿಸಲಾಗಿದೆ ಎಂದರು.
ಪಿಎಂ ವಿಶ್ವ ಕರ್ಮ ಯೋಜನೆ, ಡೇ ನಲ್ಮ್​, ಸಿಡಾನ್​, ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹಾಗೂ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ಕಾಲೇಜುಗಳಲ್ಲಿ ಕೌಶಲ ತರಬೇತಿ ನಡೆಸಲಾಗುತ್ತಿದೆ. ಇದಕ್ಕೆ ಸರ್ಕಾರದಿಂದಲೇ ನಿಗಧಿಯಾಗಿರುವ ವಿಷಯಗಳು ಕುರಿತು ತರಬೇತಿ ನೀಡಲಾಗುವುದು ಎಂದು ಹೇಳಿದರು.
2024&25ನೇ ಸಾಲಿನಲ್ಲಿ ಹಮ್ಮಿಕೊಂಡಿದ್ದ ನೇರ ಸಂದರ್ಶನ ಹಾಗೂ ಮಿನಿ ಉದ್ಯೋಗ ಮೇಳಗಳಲ್ಲಿ ಒಟ್ಟು 1020 ಮಂದಿ ಅಭ್ಯರ್ಥಿಗಳು ಪಾಲ್ಗೊಂಡಿದ್ದು, ಆ ಪೈಕಿ 428 ಮಂದಿ ಉದ್ಯೋಗ ದೊರತಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್​.ಎಂ.ಮಂಗಳಾ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಲತಾ, ನಗರ ಕೋಶ ಯೋಜನಾಧಿಕಾರಿ ಅಂಬಿಕಾ ಮತಿತರರು ಹಾಜರಿದ್ದರು.
* ಚಾಲ್ತಿಯಲ್ಲಿರುವ ವಿಷಯ ಬಗ್ಗೆ ತರಬೇತಿ ನೀಡಿ
ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಮಾತನಾಡಿ, ಸಮಾಜದಲ್ಲಿ ಉದ್ಯೋಗ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇದ್ದು, ಅದು ಯಾವುದು ಎಂದು ಗುರುತಿಸಿದೀರ. ಕೇವಲ ಅಂಕಿಅಂಶ ಓದಿದರೆ ಸಾಲದು, ಚಾಲ್ತಿಯಲ್ಲಿರುವ ಕೆಲಸಗಳ ಕುರಿತು ತರಬೇತಿ ನೀಡಬೇಕಾಗಿದೆ ಎಂದರು.
ಬೋಟಿಕ್​ ಇತ್ತೀಚಿನ ದಿನಗಳಲ್ಲಿ ಟೆಕ್ಸ್​ ಟೈನ್ಸ್​ ಆಗಿ ಬೆಳೆಯುತ್ತಿದೆ. ಈ ಬಗ್ಗೆ ಎಂದಾದರೂ ತರಬೇತಿ ನೀಡಿದೀರ. ಅರಿವು ಮೂಡಿಸುವ ಮೂಲಕ ಸಾಲ ಸೌಲಭ್ಯ ಕೊಡಿಸಿದರೆ ಅನುಕೂಲವಾಗುತ್ತದೆ. ಕೌಶಲ್ಯ ತರಬೇತಿ ನೀಡುವ ಅವಶ್ಯಕತೆ ಇದೆ, ಪ್ರಯೋಗಿಕ ತರಬೇತಿ ನೀಡುವವರು ಯಾರು, ಸಾರ್ವಜನಿಕರಿಗೆ ದೊರೆಯುತ್ತಿಲ್ಲ, ಶಾಲಾ ಕಾಲೇಜಿಗೆ ಹೋಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಡೇ ನಲ್ಮ್​ ಯೋಜನೆಯಡಿ ಪ್ರಗತಿ ಕಾಣದೆ ಇರುವುದಕ್ಕೆ ಗರಂ ಅದ ಡಿಸಿ, ಯೋಜನೆಯ ನೋಡಲ್​ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಯೋಜನೆ ಇರೊದು ಬಡವರಿಗೆ ಸಹಾಯ ಮಾಡಲು, ನಾನು ಬಂದು ಫುಡ್​ ಜೋನ್​ ಸೇರಿದಂತೆ ವಿವಿಧ ಜಾಗಗಳನ್ನು ಗುರುತಿಸಬೇಕೆ..?, ಪಿಡಿ ಅವರು ಪರಿಶೀಲನೆ ಮಾಡಿ ಪ್ರಗತಿ ಸಾಧನೆ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಅರಿವು ಇಲ್ಲದೆ ಇದ್ದರೆ ಹೇಗೆ ಎಂದು ಕಿಡಿಕಾರಿದರು.
* ಪರ್ಯಾಯ ಜಾಗ ಕಲ್ಪಿಸಿ
ಬೀದಿಬದಿ ವ್ಯಾಪಾರಿಗಳಿಗೆ ಪಾರ್ಯಯ ವ್ಯವಸ್ಥೆ ಮಾಡದೆ ತೆರವು ಮಾಡುವ ಆಗಿಲ್ಲ. ಆದರೆ ಯಾವುದೇ ಸ್ಥಳಿಯ ಸಂಸ್ಥೆಯಿಂದ ಜಾಗ ಗುರುತಿಸುವ ಕೆಲಸ ನಡೆದಿಲ್ಲ. ಡೇ ನಲ್ಮ್​ ಯೋಜನೆಯ ಬಗ್ಗೆ ಅರಿವು ಮೂಡಿಸಿದ್ದರೆ ಸಾಕಷ್ಟು ಮಂದಿ ಸಾಲ ಪಡೆದು ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಮುಂದಾಗುತ್ತಿದ್ದರು. ಆದರೆ ನಿಮ್ಮ ವಿಲಂಭದಿಂದ ಖಾಸಗಿ ಲೇವಾದೇವಿದಾರರು ಸಾಲ ನೀಡಿ ರಕ್ತ ಹೀರುತ್ತಿರುತ್ತಾರೆ. ಇದನೆಲ್ಲ ನಿಮೂರ್ಲನೆ ಮಾಡಬೇಕು ಎಂದು ಡಾ.ಎಂ.ಆರ್​.ರವಿ ತಿಳಿಸಿದರು.
ಬೀದಿಬದಿ ವ್ಯಾಪಾರಿಗಳು 7,291 ಇಟ್ಟು, ಇವರೆಲ್ಲ ಪ್ರತಿಯೊಬ್ಬರು ವಿಮೆ ನೋಂದಣಿಯಾಗಬೇಕು. ಅಗದಿದ್ದರೆ ಅರಿವು ಮೂಡಿಸಬೇಕು. ನಿರಾಕರಿಸಿದರೆ ತಿಳಿ ಹೇಳಬೇಕು ಎಂದು ಸೂಚಿಸಿದರು.
ಮಸೀದಿ, ರಸ್ತೆ ಪಕ್ಕದಲ್ಲಿ, ದೇವಾಲಯಗಳಲ್ಲಿ ಮಲಗಿರುವ ಬಗ್ಗೆ ಮಾಹಿತಿ ಪಡೆಯಲು ರಾತ್ರಿ ವೇಳೆ ನಗರ ಪರ್ಯಟನೆ ಮಾಡಿ ಗುರುತಿಸಬೇಕು. ಅವರಿಗೆ ಯಾರು ಇಲ್ಲೆಂದರೆ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net