ಸರ್ಕಾರಿ ಶಾಲೆಗಳು ಉಳಿಯಲಿ. ಸ್ಥಳಿಯ ಕಾರ್ಖಾನೆಗಳಲ್ಲಿ ರೈತ ಮಕ್ಕಳಿಗೆ ಉದ್ಯೋಗ ಕಡ್ಡಾಯವಾಗಲಿ/ಕೆ.ನಾರಾಯಣಗೌಡ

Published on

ವಿಜಯವಾಣಿ ಸುದ್ದಿಜಾಲ ಕೋಲಾರ ಅನ್ನ ಕೊಡುವ ಭಾಷೆ ಕನ್ನಡ ಉಸಿರಾಗಲಿ. ಮಾತೃ ಭಾಷೆ ಕಲಿಸುವ ಸರ್ಕಾರಿ ಶಾಲೆಗಳು ಉಳಿಯಲಿ. ಸ್ಥಳಿಯ ಕಾರ್ಖಾನೆಗಳಲ್ಲಿ ರೈತ ಮಕ್ಕಳಿಗೆ ಉದ್ಯೋಗ ಕಡ್ಡಾಯವಾಗಲಿ ಎಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ತಿಳಿಸಿದರು. ೭೦ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಗತಿ ಪರ ರೈತ ಆಂಜಿನಪ್ಪರವರ ಕೃಷಿ ತೋಟದಲ್ಲಿ ತಾಯಿ ಭುವನೇಶ್ವರಿಗೆ ವಂದನೆ ಸಲ್ಲಿಸಿ ಮಾತನಾಡಿ ನಮಗೆ ಅನ್ನ ಕೊಡುವ ಭಾಷೆ ಕನ್ನಡ. ಮನುಷ್ಯ ಯಾವಾಗಲು ಅನ್ನ ನೀಡುವ ಭಾಷೆಯನ್ನು ಬಹು ಬೇಗನೆ ಕಲಿಯುತ್ತಾನೆ. ಕನ್ನಡ ಭಾಷೆ ರಾಜ್ಯದಲ್ಲಿನ ನೆಲೆಸಿರುವವರಿಗೆ ಅಗತ್ಯವಾಗಿದೆ. ಕನ್ನಡ ಭಾಷೆಗೆ ಪ್ರಾಚೀನ ಇತಿಹಾಸವಿದೆ. ಇಂದು ಕನ್ನಡ ಹಾಗೂ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹೋರಾಟ ಅಗತ್ಯವಿದೆ. ನಾವೆಲ್ಲ ಕನ್ನಡ ಹಾಗೂ ಸರ್ಕಾರಿ ಶಾಲೆಗಳನ್ನು ಮರೆತರೆ ನಮ್ಮ ಬದುಕಿಗೆ ಉಳಿಗಾಲವಿಲ್ಲ ಎಂದರು. ಕನ್ನಡ ಲಿಪಿಗೆ ೧೫೦೦ ವರ್ಷದ ಇತಿಹಾಸವಿದೆ. ಸಾವಿರಾರು ವರ್ಷಗಳ ಸಾಹಿತ್ಯ ಪರಾಂಪರೆ ಇರುವ ಏಕೈಕ ಭಾಷೆ ಕೇವಲ ನವೆಂಬರ್ ೧ ಕ್ಕೆ ಸೀಮಿತವಾಗಬಾರದು. ಕನ್ನಡವೇ ನಿತ್ಯ ಕನ್ನಡವೇ ಸತ್ಯ ಎಂಬAತೆ ಕನ್ನಡವನ್ನು ಉಳಿಸಿ ಬೆಳೆಸೋಣ ಎಂದು ಅಭಿಪ್ರಾಯ ಪಟ್ಟರು. ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಉದ್ಯೋಗ ಸರ್ಕಾರಿ ಬೇಕು, ವಿದ್ಯಾಭ್ಯಾಸ ಖಾಸಗಿ ಬೇಕು, ಇದು ಯಾವ ನ್ಯಾಯ. ನಮ್ಮ ಉಸಿರು ನಮ್ಮ ಬದುಕು ರೂಪಿಸಿರುವ ಕನ್ನಡ ಕಲಿಕೆ ಸರ್ಕಾರಿ ಉದ್ಯೋಗಕ್ಕೆ ಕಡ್ಡಾಯ ಕಾನೂನು ಜಾರಿಗೆ ಆಗಬೇಕೆಂದು ಸರ್ಕಾರಗಳನ್ನು ಒತ್ತಾಯಿಸಿದರು. ರೈತರ ಕೃಷಿ ಜಮೀನು ಪಡೆದು ನಮ್ಮ ಗಾಳಿ ಪರಿಸರ, ಆರೋಗ್ಯ ನೀರು ಪಡೆದು ಕಾರ್ಖಾನೆ ಸ್ಥಾಪನೆ ಮಾಡುವ ಕೈಗಾರಿಕೋದ್ಯಮಗಳು ಮೊದಲು ಕೊಟ್ಟ ಮಾತು ತಪ್ಪಿ ರೈತ ಮಕ್ಕಳಿಗೆ ಸ್ಥಳಿಯರಿಗೆ ಉದ್ಯೋಗ ನೀಡದೆ ಹೊರ ರಾಜ್ಯದ ಕಾರ್ಮಿಕರಿಗೆ ಉದ್ಯೋಗವನ್ನು ಮಾರಾಟಕ್ಕಿಟ್ಟಿದ್ದರೂ ಸಮಸ್ಯೆ ಬಗ್ಗೆ ಸಂಬAದಪಟ್ಟವರು ಮೌನವಾಗಿರುವ ಮೂಲಕ ರೈತ ಮಕ್ಕಳ ತಾಳ್ಮೆಯನ್ನು ಕೆದಕುತ್ತಿರುವುದು ಯಾವ ನ್ಯಾಯ ನಮ್ಮ ಉದ್ಯೋಗಕ್ಕಾಗಿ ಕೈಗಾರಿಕೆಗಳ ವಿರುದ್ದ ರೈತ ಸಂಘ ಸೆಟೆದು ನಿಲ್ಲಬೇಕೆಂದು ರೈತ ಮಕ್ಕಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ರೈತ ಮುಂಖಡರಾದ ಗೀರಿಶ್, ಪುತ್ತೇರಿ ರಾಜು, ಚಂದ್ರಪ್ಪ, ಹನುಮಯ್ಯ, ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net