ಟೀಕೆ ಮಾಡುವವರಿಗೆ ಜನ ಉತ್ತರಿಸಿ

ಕೋಲಾರ ನಗರಲ್ಲಿ ನಿರ್ಮಾಣ ಮಾಡಲಾಗಿರುವ ತುರ್ತು ನಿಗಾ ಟಕವನ್ನು ಸಚಿವರಾದ ದಿನೇಶ್​ ಗುಂಡೂರಾವ್​, ಬೈರತಿ ಸುರೇಶ್​ ಲೋಕಾರ್ಪಣೆ ಮಾಡಿದರು.
ಕೋಲಾರ ನಗರಲ್ಲಿ ನಿರ್ಮಾಣ ಮಾಡಲಾಗಿರುವ ತುರ್ತು ನಿಗಾ ಟಕವನ್ನು ಸಚಿವರಾದ ದಿನೇಶ್​ ಗುಂಡೂರಾವ್​, ಬೈರತಿ ಸುರೇಶ್​ ಲೋಕಾರ್ಪಣೆ ಮಾಡಿದರು.
Published on
ಕೋಲಾರ: ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸರ್ಕಾರವು ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಅಭಿವೃದ್ಧಿಯಲ್ಲೂ ಸಹ ಮುಂಚೂಣಿಯಲ್ಲಿದೆ. ಸರ್ಕಾರದಲ್ಲಿ ದುಡ್ಡು ಎಲ್ಲಿದೆ ಎಂದು ಟೀಕೆ ಮಾಡುವವರಿಗೆ ಅಭಿವೃದ್ಧಿಯೇ ಸಾಕ್ಷಿ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ, ತೀವ್ರ ನಿಗಾ ಟಕ, ಡಯಾಲಿಸೀಸ್​ ನೂತನ ಕಟ್ಟಡ, ನರಸಾಪುರ ಸಮುದಾಯ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರದಿಂದ ಏನ್​ ಕೆಲಸ ಆಗುತ್ತಿದೆ ಎಂಬುದು ಜನರಿಗೆ ಕಾಣುತ್ತಿದೆ. ಆದರೆ ವಿರೋಧ ಪಕ್ಷದವರಿಗೆ ಕಾಣುತ್ತಿಲ್ಲ. ವಿಕಾರಣ ಟೀಕೆ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜನ ಗುಣಮಟ್ಟದ ಚಿಕಿತ್ಸೆಗಾಗಿ ಬೆಂಗಳೂರಿಗೋ, ಬೇರೆ ಜಿಲ್ಲೆಗಳಿಗೋ ಹೋಗುವುದನ್ನು ತಪ್ಪಿಸಿ, ಸ್ಥಳಿಯವಾಗಿಯೇ ಅತ್ಯಾಧುನಿಕ ವೈದ್ಯಕಿಯ ಸೇವೆ ಒದಗಿಸುವುದು ಸರ್ಕಾರದ ಪ್ರಮುಖ ಆಶಯವಾಗಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದೇ ಸರ್ಕಾರದ ಗುರಿ. ಗೃಹ ಆರೋಗ್ಯ ಯೋಜನೆಯನ್ನು ಜಿಲ್ಲೆಯಿಂದಲೇ ಜಾರಿಗೆ ಮಾಡಿದ್ದು, ರಾಜ್ಯಾದ್ಯಂತ ಸುಮಾರು 1 ಕೋಟಿಗೂ ಅಧಿಕ ಮನೆಗಳ ತಪಾಸಣೆ ನಡೆದಿದೆ. ಜನರಲ್ಲಿ ಕಂಡು ಬರುವ ಕಾಯಿಲೆಗೆ ಪ್ರಾಥಮಿಕ ಹಂತದಲ್ಲಿಯೇ ಗುಣಪಡಿಸಿ ಆರೋಗ್ಯವಂತರನ್ನಾಗಿ ಮಾಡಲಾಗುತ್ತಿದೆ ಎಂದರು. 
ಕಾರ್ಯಕ್ರಮದಲ್ಲಿ ಸಂಸದ ಎಂ.ಮಲ್ಲೇಶ್​ ಬಾಬು, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್​ ಅಹಮದ್​, ಎಂಎಲ್ಸಿಗಳಾದ ಎಂ.ಎಲ್​.ಅನಿಲ್​ ಕುಮಾರ್​, ಇಂಚರ ಗೋವಿಂದರಾಜು, ಇಲಾಖೆಯ ನಿರ್ದೇಶಕ ವಸಂತ ಕುಮಾರ್​, ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಜಿ.ಪಂ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ, ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್​, ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಎಚ್​.ಪಿ.ಎಸ್​, ತಹಶೀಲ್ದಾರ್​ ಡಾ.ಎಂ.ನಯನಾ, ಡಿಎಚ್​ಒ ಡಾ.ಶ್ರೀನಿವಾಸ್​, ಪ್ರಭಾರ ಡಿಎಸ್​ ಡಾ.ಜಗದೀಶ್​, ಮುಖಂಡ ಕೆ.ವಿ.ಗೌತಮ್​ ಉಪಸ್ಥಿತರಿದ್ದರು.
*  ಆರೋಗ್ಯ, ಶಿಕ್ಷಣದಲ್ಲಿ ಕ್ರಾಂತಿ
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಮಾತನಾಡಿ, ಜಿಲ್ಲೆಯ ಆರೋಗ್ಯ ಇಲಾಖೆಯಿಂದ ಜಿಲ್ಲೆಗೆ ಸುಮಾರು 100 ಕೋಟಿ ಅನುದಾನ ಸರ್ಕಾರದಿಂದ ಬಂದಿದೆ. ಆರೋಗ್ಯ, ಶಿಕ್ಷಣದಲ್ಲಿ ಕ್ರಾಂತಿ ಉಂಟಾಗಿದೆ ಎಂಬುದಕ್ಕೆ ಕೋಲಾರ ಮಾದರಿಯಾಗಿದೆ ಎಂದು ಹೇಳಿದರು.  
ಐದು ಗ್ಯಾರೆಂಟಿ ಯೋಜನೆಗಳು ಜನರ ಮನೆಮಾತಾಗಿದೆ. ನಮ್ಮ ಸರ್ಕಾರದಲ್ಲಿ ಸೋರಿಕೆ, ಲಂಚವತಾರವಿಲ್ಲ. ಬೇರೆ ಸರ್ಕಾರಗಳಲ್ಲಿ ದುರುಪಯೋಗ ನಡೆದು ಸೌಲಭ್ಯ ಜನರಿಗೆ ತಲುಪುತ್ತಿರಲಿಲ್ಲ ಎಂದು ತಿಳಿಸಿದರು. 
ಜಿಲ್ಲೆಗೆ ಎಪಿಎಂಸಿಗೆ 60 ಎಕರೆ ನೀಡಲು ಅಂತಿಮವಾಗಿದ್ದು ಕಡತ ವಿಲೇವಾರಿಯು ಸರ್ಕಾರದ ಮಟ್ಟದಲ್ಲಿ ಬಾಕಿಯಿದೆ. 30 ಎಕರೆ ಅವಶ್ಯಕತೆಯಿದ್ದು, ಅತಿ ಶ್ರೀದಲ್ಲೇ ಘೋಷಣೆ ಮಾಡಲಾಗುವುದು. ಅಂತರಗಂಗೆಯಿಂದ ಕೋಲಾರಮ್ಮ ಕೆರೆ ತನಕದ ಕಾಲುವೆ ನಿಮಾರ್ಣ ನಿರ್ಮಾಣಕ್ಕೆ 100 ಕೋಟಿ, ರಿಂಗ್​ ರಸ್ತೆ ನಿಮಾರ್ಣಕ್ಕೆ 200 ಕೋಟಿ ಸರ್ಕಾರ ಅನುದಾನ ಘೋಷಣೆ ಮಾಡಿದ್ದು, ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದರು.
* ಸರ್ಕಾರಿ ಮೆಡಿಕಲ್​ ಕಾಲೇಜು ಸ್ಥಾಪನೆ
ಪಿಪಿಪಿ ಮಾದರಿಯಲ್ಲಿ ಮೆಡಿಕಲ್​ಕಾಲೇಜು ನಿಮಾರ್ಣಕ್ಕೆ ಸರ್ಕಾರ ಅನುಮತಿ ನೀಡಿತ್ತು. ಆದರೆ ಯಾರು ಮುಂದೆ ಬಾರದ ಕಾರಣ ಅತಿ ಶ್ರೀದಲ್ಲೇ 23 ಎಕರೆಯಲ್ಲಿ ಸರ್ಕಾರಿ ಮೆಡಿಕಲ್​ ಕಾಲೇಜು ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗುವುದು ಎಂದು ಬೈರತಿ ಸುರೇಶ್​ ಭರವಸೆ ನೀಡಿದರು. 
ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ತುಂಬಿಸುವುದು ಖಚಿತ, ಕಾಂಗ್ರೆಸ್​ ಸೇರಿದಂತೆ ಬೇರೆ ಶಾಸಕರು ಅಭಿವೃದ್ಧಿ ಕೆಸಲಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದರೆ ಸರ್ಕಾರ ಅನುದಾನ ನೀಡಿದೆ ಎಂದರ್ಥ. ಇನ್ನೇನು ಅವರ ಮನೆಗಳಿಂದ ಹಣ ತಂದಿರೋದಲ್ಲ. ಜಿಲ್ಲೆಯ ಪ್ರತಿ ಕ್ಷೇತ್ರಕ್ಕೂ ಕನಿಷ್ಠ 1,000 ಕೋಟಿ ಅನುದಾನ ಸಿಕ್ಕಿದೆ ಎಂದು ತಿಳಿಸಿದರು. 
* ಸರ್ಕಾರದಿಂದ ಅನುದಾನ ಲಭ್ಯ
ಶಾಸಕ ಕೊತ್ತೂರು ಜಿ.ಮಂಜುನಾಥ್​ ಮಾತನಾಡಿ, ಜನ ಮುಖ್ಯವಾಗಿ ಕೇಳೊದು ಆಸ್ಪತ್ರೆ, ಶಿಕ್ಷಣ, ಉದ್ಯೋಗ, ರೈತರನ್ನು ಉಳಿಸಿ ಅಂತ. ಆರೋಗ್ಯ ಪ್ರತಿಯೊಬ್ಬರಿಗೂ ಬೇಕಾಗಿದ್ದಾಗಿದೆ. ಅದ್ದರಿಂದಲೇ ಸರ್ಕಾರದ ಮೇಲೆ ಒತ್ತಡ ತಂದು ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.
ಅಭಿವೃದ್ಧಿ ಮಾಡಲು ಕಷ್ಟ ಎಂಬುದು ಗೊತ್ತಿದೆ, ಆದರೆ ಸಚಿವರ ಸಹಕಾರದಿಂದ ನಿರೀೆಗೂ ಮೀರಿ ಅನುದಾನ ಸಿಗುತ್ತಿದೆ. ಕ್ರಿಯಾಶೀಲರಾದವರ ಬಗ್ಗೆ ಟೀಕಿ ಮಾಡುವುದು ಸಹಜ. ಆದಕ್ಕೆಲ್ಲ ಪ್ರತಿಕ್ರಿಯೆ ನೀಡುತ್ತಾರೆ ಹೋದರೆ ಕೆಲಸ ಹಿಂದೆ ಬೀಳುತ್ತದೆ. ಗುಣಮಟ್ಟದ ಕೆಲಸದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ. ಕೆಸಿ ರೆಡ್ಡಿ, ಶ್ರೀನಿವಾಸಗೌಡ, ಲತಿಫ್​ ಸಾಬ್​, ಎಂ.ವಿ.ಕೃಷ್ಣಪ್ಪ ಹಾದಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪಣತೊಟ್ಟಿದ್ದೇನೆ ಎಂದು ತಿಳಿಸಿದರು. 
* ಕಾರ್ಯಕ್ರಮಗಳ ವಿವಿರ
ನರಸಾಪುರದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ 12.39 ಕೋಟಿ ರೂ., ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 16 ಕೋಟಿ ರೂ. ವೆಚ್ಚದ ತೀವ್ರ ನಿಗಾ ಘಟಕ, 1.25 ಕೋಟಿ ರೂ. ವೆಚ್ಚದ ಡಯಾಲಿಸಿಸ್​ ಘಟಕ ಉದ್ಘಾಟನೆ. 
ಕೋಟ್​...
ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ 9 ವಿವಿಧ ಸೂಪರ್​ ಸ್ಪೇಷಲಿಸ್ಟ್​ ವೈದ್ಯರ ಹುದ್ದೆಗಳನ್ನು ಸೃಜನೆ ಮಾಡಲಾಗಿದ್ದು, ಅತಿ ಶ್ರೀದಲ್ಲೇ ನೇಮಕ ಮಾಡಿಕೊಳ್ಳಲಾಗುವುದು. ಆ ಮೂಲಕ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನರಿಗೆ ಕಲ್ಪಿಸಲಾಗುವುದು. 
- ದಿನೇಶ್​ ಗುಂಡೂರಾವ್​, ಆರೋಗ್ಯ ಸಚಿವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net