ಅಧಿಕಾರಿ ವಿರುದ್ಧ ರಾಜೀವ್​ ಗೌಡ ವರ್ತನೆ ಸರಿಯಲ್ಲ

ದಿನೇಶ್​ ಗುಂಡೂರಾವ್​
ದಿನೇಶ್​ ಗುಂಡೂರಾವ್​
Published on
ಕೋಲಾರ: ಶಿಢ್ಲಘಟ್ಟ ನಗರಸಭೆ ಆಯುಕ್ತೆ ಅಮೃತ ಗೌಡ ಅವರಿಗೆ ಕಾಂಗ್ರೆಸ್​ ಮುಖಂಡ ರಾಜೀವ್​ ಗೌಡ ಬೆದರಿಕೆ ಹಾಕಿದ್ದು, ಅವರ ಪರವಾಗಿ ನಾವ್ಯಾರು ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖಂಡರು ಅಧಿಕಾರಿಗಳ ವಿರುದ್ಧ ಮಾತನಾಡುವುದು, ಬೆದರಿಕೆ ಹಾಕುವುದು ಸರಿಯಲ್ಲ. ಇದನ್ನು ನಾವ್ಯಾರು ಸಹಿಸುವುದಿಲ್ಲ. ದೂರು ದಾಖಲಾಗಿದೆ. ಮುಖಂಡನ ವರ್ತನೆ ಖಂಡಿಸಿ ಪಕ್ಷದಿಂದ ನೊಟೀಸ್​ ನೀಡಲಾಗಿದೆ ಎಂದು ತಿಳಿಸಿದರು.
ರಾಜೀವ್​ ಗೌಡ ಅವರು ಯಾಕೆ ಹೀಗೆ ವರ್ತಿಸಿದರು ಅನ್ನೋದು ಗೊತ್ತಿಲ್ಲ. ಆದರೆ ಇಂತಹದಕ್ಕೆ ಪಕ್ಷ ಸಹನೆ ತೋರುವುದಿಲ್ಲ, ಅದು ನಮ್ಮ ಸ್ಪಷ್ಟ ನಿಲುವು ಎಂದರು.
ಡಿಐಜಿಪಿ ರಾಮಚಂದ್ರರಾವ್​ ರಾಸಲೀಲೆ ಪ್ರಕರಣಕ್ಕೆ ಪತ್ರಿಕ್ರಿಯೆಸಿ, ಒಬ್ಬ ಅಧಿಕಾರಿ, ಸರ್ಕಾರಿ ಕಚೇರಿಯಲ್ಲಿ ಹೀಗೆ ಮಾಡಿದ್ದಾರೆ ಅನ್ನೋ ಆರೋಪ ಇದೆ. ಅವರ ವೈಯಕ್ತಿಕ ವಿಚಾರವಾಗಿದೆ. ಈಗಾಗಲೆ ತನಿಖೆ ಮಾಡಲಾಗುತ್ತಿದೆ, ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ತಿಳಿಸಿದರು.
ಈಗಾಗಲೇ ಇಲಾಖೆ ಅವರನ್ನ ಅಮಾನತು ಮಾಡಿದೆ. ಇಂತಹ ಘಟನೆಗಳಾದಾಗ ಸರ್ಕಾರ ಏನ್​ ಕ್ರಮ ಕೈಹೊಳ್ಳುತ್ತೆ ಅನ್ನೋದು ಮುಖ್ಯ, ನಮ್ಮ ಸರ್ಕಾರ ಅವರ ವಿರುದ್ಧ ಅಮಾನತು ಮಾಡಿ, ತನಿಖೆಗೂ ಆದೇಶ ಮಾಡಿದೆ ಎಂದು ಹೇಳಿದರು.
ಜಿಡಿಎ ಸೇರಿದಂತೆ ಸ್ಥಳಿಯ ಸಂಸ್ಥೆಗಳಲ್ಲಿ ಬ್ಯಾಲೇಟ್​ ಪೇಪರ್​ ಬಳಕೆ ವಿಚಾರ ಕುರಿತು ತಪ್ಪೇನಿಲ್ಲ ಬ್ಯಾಲೇಟ್​ ಪೇಪರ್​ ಬಳಸಿ ಕೊಳ್ಳಬಹುದು. ಇಡೀ ವಿಶ್ವದಲ್ಲಿ ಎಲ್ಲಾ ಕಡೆ ಬ್ಯಾಲೇಟ್​ ಪೇಪರ್​ನಲ್ಲಿ ಮಾಡಬೇಕು, ಯಾವುದೇ ಚುನಾವಣೆಯಲ್ಲಿ ಬ್ಯಾಲೇಟ್​ ಬಳಕೆ ಮಾಡಬಾರದು ಅಂತೇನಿಲ್ಲ. ಇಷ್ಟು ದಿನ ಬ್ಯಾಲೇಟ್​ ಪೇಪರ್​ ಮೂಲಕ ಮಾಡಿ ಅಂತ ಕೇಳಿದ್ದೀವಿ, ಅದರ ಪ್ರಕಾರವೇ ಈ ಚುನಾವಣೆಯಲ್ಲಿ ಬ್ಯಾಲೇಟ್​ ಪೇಪರ್​ ಬಳಸಲಾಗುತ್ತೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅಧಿಕಾರಿ ಹಂಚಿಕೆ ಕುರಿತು ಮಾತನಾಡಿ, 140 ಶಾಸಕರು ನನ್ನ ಪರವಾಗಿದ್ದಾರೆ ಎಂಬ ಡಿಕೆಶಿ ಹೇಳಿಕೆ ವಿಚಾರದಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾಗಿರುವುದರಿಂದ ಶಾಸಕರು, ಕಾರ್ಯಕರ್ತರು, ಮುಖಂಡರು ಎಲ್ಲರೂ ಅವರೊಂದಿಗೆ ಇದ್ದೇವೆ. ಯಾಕೆ ಎಂದರೆ ನಮ್ಮಲ್ಲಿ ಯಾವ ವ್ಯತ್ಯಾಸ ಇಲ್ಲ, ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net