Rajiv Gandhi, who laid the foundation for modern India.
Published on:
Copied
Follow Us
ಕೆಜಿಎಫ್:
ಕಳೆದ 26 ವರ್ಷದಿಂದ ಮುಚ್ಚಲ್ಪಟ್ಟಿದ್ದ ಮಾಜಿ ಪ್ರಧಾನಿ ದಿ.ರಾಜೀವ್ಗಾಂಧಿ ಪುತ್ಥಳಿ ಕೊನೆಗೂ ಅವರ 82ನೇ ಜಯಂತಿಯಂದು ಶಾಸಕಿ ರೂಪಕಲಾ ಅವರು ಲೋಕಾರ್ಪಣೆಗೊಳಿಸಿದರು.
ನಗರದ ಆಂಡ್ರಸನ್ಪೇಟೆ ಬಸ್ ನಿಲ್ದಾಣದಲ್ಲಿ 26 ವರ್ಷದ ಹಿಂದೆ ರಾಜೀವ್ ಗಾಂಧಿ ಪ್ರತಿಮೆ ಸ್ಪಾಪನೆ ಮಾಡಲಾಗಿತ್ತು. ಆದರೆ ಕಾಂಗ್ರೆಸ್ನ ಗುಂಪುಗಾರಿಕೆಯಿಂದ ಉದ್ಘಾಟನೆ ಭಾಗ್ಯ ದೊರೆತಿರಲಿಲ್ಲ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಹಿದ್ ಷಹಜಾದ್ ರಾಜೀವ್ ಗಾಂಧಿ ಜನ್ಮ ದಿನಕ್ಕೆ ಪ್ರತಿಮೆ ಉದ್ಘಾಟಿಸಲು ಸ್ವಂತ ಖರ್ಚಿನಿಂದ ತಯಾರಿ ಮಾಡಿಕೊಂಡು ಶಾಸಕಿ ರೂಪಕಲಾ ಅವರಿಂದ ಲೋಕಾರ್ಪಣೆಗೊಳಿಸಿದ್ದಾರೆ.
ಶಾಸಕಿ ರೂಪಕಲಾ ಮಾತನಾಡಿ, ದೇಶದಲ್ಲಿ ಯುವಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ವಿಜ್ಞಾನ ಮತ್ತು ತಂತ್ರಜ್ಞಾನ ೇತ್ರಕ್ಕೆ ಉತ್ತೇಜನ ನೀಡುವುದು ಹಾಗೂ ದೇಶ ಆಧುನಿಕತೆಯತ್ತ ಕೊಂಡೊಯ್ಯುವಲ್ಲಿ ರಾಜೀವ್ಗಾಂಧಿ ಪಾತ್ರ ಮಹತ್ವದ್ದು. ಯುವಶಕ್ತಿಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದ ನಾಯಕ, ಆಧುನಿಕ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನ, ಶಿಕ್ಷಣ ಮತ್ತು ಸಂವಹನ ೇತ್ರಗಳ ಅಭಿವೃದ್ಧಿಗೆ ನೀಡಿದ ಆದ್ಯತೆ ದೇಶದ ಪ್ರಗತಿಗೆ ಹೊಸ ದಿಕ್ಕು ನೀಡಿತು. ರಾಜೀವ್ಗಾಂಧಿ ಆದರ್ಶಗಳು ಹಾಗೂ ದೇಶದ ಅಭಿವೃದ್ಧಿಯ ಕನಸುಗಳನ್ನು ಯುವ ಜನತೆ ಅರಿತುಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಆದಾಯ ಪ್ರಮಾಣ ಪತ್ರದ ಮಿತಿ 32 ಸಾವಿರಕ್ಕೆ ಮಿತಿಗೊಳಿಸಿರುವುದರಿಂದ ೇತ್ರದಲ್ಲಿ 14 ಸಾವಿರಕ್ಕಿಂತಲೂ ಹೆಚ್ಚು ಬಡವರಿಗೆ ಪಿಂಚಣಿ ಸ್ಥಗಿತಗೊಂಡಿರುವುದನ್ನು ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪ ಮಾಡಿದಾಗ ಸರಿಯಾಗಿ ಅರ್ಥವಾಗಲಿಲ್ಲ. ನಂತರ ಸಚಿವರ ಕಚೇರಿಗೆ ತೆರಳಿ ಮನವರಿಕೆ ಮಾಡಿಕೊಟ್ಟ ಹಿನ್ನಲೆಯಲ್ಲಿ ಸಮಸ್ಯೆ ಬಗೆಹರಿಸಲು ಭರವಸೆ ನೀಡಿದ್ದಾರೆ ಎಂದರು.
ಜಿಪಂ ಮಾಜಿ ಸದಸ್ಯ ಶಾಹಿದ್ ಮಾತನಾಡಿ, ಶಾಸಕಿ ರೂಪಕಲಾ ಅವರ ಮಾರ್ಗದರ್ಶನದಿಂದ ಗುತ್ತಿಗೆದಾರರು ಸ್ಫಾಪನೆ ಮಾಡುವದಕ್ಕಿಂತ ಕಾರ್ಯಕರ್ತರು ಪ್ರತಿಮೆಯ ಕೆಲಸ ಪೂರ್ಣಗೊಳಿಸಿದರೆ ಪ್ರತಿಮೆಗೆ ಗೌರವ ಸಿಗಲಿದೆ ಎಂದು ಕಿವಿಮಾತ ಪ್ರತಿಮೆ ಅನಾವರಣಗೊಳಿಸಲು ಪ್ರೇರಣೆಯಾದರು ಎಂದರು.
ಕೆ.ಸಿ.ಮುರಳಿ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಲಾರೆನ್ಸ್, ನಗರಸಭೆ ಮಾಜಿ ಸದಸ್ಯರಾದ ವೇಣುಗೋಪಾಲ್, ಕರುಣಾಕರನ್, ಮಗಿ, ಶಶಿಕುಮಾರ್, ವಿಷ್ಣುಕಾಂತ್ ಇದ್ದರು.