ಅಂಗವಿಲಕರ ಸಮಸ್ಯೆ, ಪಿಂಚಣಿ, ಭೂ ದಾಖಲೆ ತಿದ್ದುಪಡಿ, ಪೌತಿ ಖಾತೆ, ಪಡಿತರ ಚೀಟಿ, ಸರ್ವೇ, ಕಟ್ಟಿದ ಮನೆಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಎನ್‌ಒಸಿ, ನಿವೇಶನ, ವಸತಿ, ಕುಡಿಯುವ ನೀರು, ಬೀದಿ ದೀಪ, ಚರಂಡಿ ಸಮಸ್ಯೆ, ಶುದ್ಧ ನೀರಿನ ಘಟಕ ದುರಸ್ತಿ, ಜೆಜೆಎಂ ಕಾಮಗಾರಿಯಿಂದ ರಸ್ತೆ ಹಾನಿ, ಮನೆಗೆ ನೀರಿನ ಸಂಪರ್ಕ ಕಲ್ಪಿಸದಿರುವುದು ಸೇರಿದಂತೆ ನಾನಾ ಸಮಸ್ಯೆಗಳು ಸಲ್ಲಿಕೆ ಆದವು. ಅಂಗವಿಕಲರ ತ್ರಿಚಕ್ರವಾಹನ, ವಿಧವಾವೇತನಕ್ಕಾಗಿ ಅರ್ಜಿಗಳು ಸಲ್ಲಿಕೆಯಾದರೆ ಸ್ಥಳದಲ್ಲೇ ಮಂಜೂರು ಮಾಡಿ ಅನುಕೂಲ ಕಲ್ಪಿಸಿದ್ದು ಕಂಡು ಕಂಡುಬಂದಿತು.