ಜಿಲ್ಲಾ ಬಂದ್​ ಬಂಬಲಿಸಿ ಪ್ರತಿಭಟನೆ

ಕೋಲಾರ ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ವಿವಿಧ ಸಂ ಸಂಸ್ಥೆಗಳ ಮುಖಂಡರು ಸೋಮವಾರ ಜಿಲ್ಲಾ ಬಂದ್​ ಬೆಂಬಲಿಸಿ ಪ್ರತಿಭಟನೆ ನಡೆಸಿದರು.
ಕೋಲಾರ ನಗರದ ಬಸ್​ ನಿಲ್ದಾಣದ ವೃತ್ತದಲ್ಲಿ ವಿವಿಧ ಸಂ ಸಂಸ್ಥೆಗಳ ಮುಖಂಡರು ಸೋಮವಾರ ಜಿಲ್ಲಾ ಬಂದ್​ ಬೆಂಬಲಿಸಿ ಪ್ರತಿಭಟನೆ ನಡೆಸಿದರು.
Published on
ಕೋಲಾರ: ಹಣ್ಣಿನ ರಾಜ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಸೋಲಾರ ಕರೆ ನೀಡಿದ್ದ, ಜಿಲ್ಲಾ ಬಂದ್​ಗೆ ಕೋಲಾರದಲ್ಲಿ ವಿವಿಧ ಸಂ ಸಂಸ್ಥೆಗಳು ಮುಖಂಡರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನಗರ ಬಸ್​ ನಿಲ್ದಾಣದ ವೃತ್ತದಲ್ಲಿ ಬೆಳಗ್ಗೆ 8030ಕ್ಕೆ ಜಮಾಯಿಸಿದ್ದ ರೈತ ಸಂ, ಜೆಡಿಎಸ್​ ಮುಖಂಡರು ರಸ್ತೆಗೆ ಮಾವಿನ ಕಾಯಿ ಸುರಿದು ಸುಮಾರು ಮೂರು ತಾಸಿಗೂ ಅಧಿಕ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ರೈತರ ನೆರವಿಗೆ ಧಾವಿಸಲು ರ್ನಿಲಕ್ಷ$್ಯ ತೋರುತ್ತಿರುವ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಗ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ ಸಮಯದಲ್ಲಿ ಕೆಲ ವಾಹನ ಚಾಲಕರು ಮುಂದೆ ಹೋಗಲು ಪ್ರತಿಭಟನಾಕಾರರನ್ನು ಮನವಿ ಮಾಡಿದರು. ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಚಾಲಕರು ಮಾತಿಕನ ಚಕಮಕಿ ಬೆಳೆಸಿಕೊಂಡರು. ಆಗ ಪೊಲೀಸರು ಮಧ್ಯ ಪ್ರವೇಶಿಸಿ ವಾಹನ ಸವಾರರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವೊಲಿಸಿದರು.
* ರ್ನಿಧಿಷ್ಟ ತೀರ್ಮಾನಕ್ಕೆ ಒತ್ತಾಯ
ಸಂಸದ ಎಂ.ಮಲ್ಲೇಶ್​ ಬಾಬು ಮಾತನಾಡಿ, ಮಾವು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಬಗ್ಗೆ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಹಾಗೂ ನಾನು ತೋಟಗಾರಿಗೆ ಸಚಿವರಿಗೆ ಪತ್ರ ಬರೆದು, ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಇದೀಗ ಭೂಪಾಲ್​ನಲ್ಲಿ ಇದ್ದು, ದೆಹಲಿಗೆ ಬಂದ ಕೂಡಲೇ ಬೆಲೆ ಘೋಷಣೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರವಿದ್ದು, ರ್ನಿಧಿಷ್ಟ ತೀರ್ಮಾನ ತೆಗೆದುಕೊಂಡು ಕೇಂದ್ರಕ್ಕೆ ತಿಳಿಸಿದಾಗ, ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ತೀರ್ಮಾನ ತೆಗೆದುಕೊಳ್ಳುತ್ತದೆ. ರಾಜ್ಯ ಮುಖ್ಯಮಂತ್ರಿ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
* ಸರ್ಕಾರದಿಂದ ಮೀನಾಮೇಷ
ಜೆಡಿಎಸ್​ ಮುಖಂಡ ಸಿಎಂಆರ್​ ಶ್ರೀನಾಥ್​ ಮಾತನಾಡಿ, ವರ್ಷಕ್ಕೊಮ್ಮೆ ಬರುವ ಮಾವು ಬೆಳೆಯನ್ನೇ ನಂಬಿ ಜಿಲ್ಲೆಯಲ್ಲಿ ಲಾಂತರ ಮಂದಿ ರೈತರು ಬದುಕು ಕಟ್ಟಿಕೊಂಡಿದ್ದಾರೆ. ನಾನಾಕಾರಣಗಳಿಂದ ಎರಡು ವರ್ಷಗಳಿಂದ ಬೆಲೆ ಕುಸಿದಿದ್ದು, ಇದಕ್ಕೆ ಕಾರಣ ಕಂಡು ಹಿಡಿದು ಸರ್ಕಾರ ಪರಿಹಾರ ಕಲ್ಪಿಸುವಲ್ಲಿ ವಿಲವಾಗಿದೆ ಎಂದು ಆರೋಪಿಸಿದರು.
ಇದು ನೆನ್ನೆ ಮೊನ್ನೆಯ ಸಮಸ್ಯೆಯಲ್ಲ, ಸತತ ಎರಡನೇ ವರ್ಷ ಮಾವು ಬೆಳೆಗಾರರು ಸಮಸ್ಯೆಗೆ ಸಿಲುಕಿದ್ದಾರೆ. ಈ ಬಗ್ಗೆ ಗಮನಕ್ಕೆ ಇದ್ದರು ಸಹ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆಗೆ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.
* 24 ತಾಸು ಗಡುವು
ರೈತ ಸಂದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಈಗಾಗಲೇ ಆಂದ್ರದಲ್ಲಿ ತೋತಾಪುರ ಒಂದು ಕೆಜಿಗೆ 4 ರೂ. ಬೆಲೆ ಘೋಷಣೆ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ಅಲ್ಲಿನ ಸಕ್ಕಾರ ರೈತರ ಬಗ್ಗೆ ಇರುವ ಕಾಳಜಿ, ಕಾಂಗ್ರೆಸ್​ ರಾಜ್ಯ ಸರ್ಕಾರಕ್ಕಿಲ್ಲದಂತೆ ಕಾಣುತ್ತಿದೆ. ರೈತರ ಪಾಲಿಗೆ ಕರ್ನಾಟಕದಲ್ಲಿ ಸರ್ಕಾರವು ಸತ್ತು ಹೋಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಮುಂದಿನ 24 ಗಂಟೆಗಳಲ್ಲಿ ಸರ್ಕಾರವು ಬೆಂಬಲ ಬೆಲೆ ಘೋಷಣೆ ಮಾಡಿ ಕ್ರಮತೆಗೆದುಕೊಳ್ಳಬೇಕು, ಯಾವುದೇ ರೀತಿ ಕ್ರಮಕ್ಕೆ ಒಂದಾಗದಿದ್ದರೆ ಜಿಲ್ಲೆಯಲ್ಲಿನ ಎಲ್ಲ ಶಾಸಕರ ಮನೆಗಳ ಮುಂದೆ ಮಾವು ಸುರಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೋಮುಲ್​ ನಿರ್ದೇಶಕ ಡಿ.ವಿ.ಹರೀಶ್​, ವಿವಿಧ ಸಂಟನೆಗಳ ಮುಖಡರಾದ ನರೇಶ್​ ಬಾಬು, ನಟರಾಜ್​, ಲೋಕೇಶ್​, ಗೋವಿಂದಪ್ಪ, ಶ್ರೀನಿವಾಸ್​, ಪುಟ್ಟರಾಜು ಮತಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net