ಮಾಲೂರು ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ನಿಂದ ಉಚಿತವಾಗಿ ನಾಲ್ಕು ಕೊಳವೆ ಬಾವಿಯನ್ನು ಕೊರೆಯಲು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಭಾನುವಾರ ಚಾಲನೆ ನೀಡಿದರು. ಶಾಸಕ ಕೆ ವೈ ನಂಜೇಗೌಡ, ದೇವಾಲಯ ಟ್ರಸ್ಟ್ ಅಧ್ಯಕ್ಷ ಪಿ.ವೆಂಕಟೇಶ್,
ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಶೇ.100 ತೃಪ್ತಿ ತಂದಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ತಿಳಿಸಿದರು.
ನೂತನ ಬಸ್ ನಿಲ್ದಾಣ, ್ಲೆ$ಓವರ್ ಕಾಮಗಾರಿ, ಇಂದಿರಾ ಕ್ಯಾಂಟಿನ್ಅನ್ನು ಭಾನುವಾರ ವೀಕ್ಷಿಸಿ, ಶ್ರೀ ಮಾರಿಕಾಂಬಾ ಟ್ರಸ್ಟ್ನಿಂದ ನಗರದಲ್ಲಿ ಉಚಿತವಾಗಿ ನಾಲ್ಕು ಕೊಳವೆ ಬಾವಿ ಕೊರೆಸುವುದಕ್ಕೆ ಚಾಲನೆ ನೀಡಿದರು.
ನಂತರ ಅಧಿಕಾರಿಗಳಸಭೆಯಲ್ಲಿ ಮಾತನಾಡಿದ ಡಿಸಿ, ಅಧಿಕಾರಿಗಳು, ಗುತ್ತಿಗೆದಾರರು ನಗರಸಭೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಮಾಡುತ್ತಿರುವುದು ಖಾತರಿಯಾಗಿದೆ. ಬಸ್ ನಿಲ್ದಾಣ ಕಾಮಗಾರಿ ಗುಣಮಟ್ಟದಿಂದ ಕೂಡಿದೆ. ನಗರಸಭೆ ಆಸ್ತಿಗಳನನ್ನು ವಶಕ್ಕೆ ಪಡೆದು ಸಾರ್ವಜನಿಕರಿಗಾಗಿ ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂದು ಚರ್ಚಿಸಲಾಗುವುದು. ಕೆಲವು ಆಸ್ತಿಗಳು ತೆರಿಗೆಗೆ ಹಾಗೂ ನೀರಿನ ತೆರಿಗೆಗೆ ಬಂದಿಲ್ಲ. ಅದನ್ನು ಸಹ ನಗರಸಭೆಯ ವ್ಯಾಪ್ತಿಗೆ ತರಲು ಕ್ರಮ ತೆಗೆದುಕೊಳ್ಳಲಾಗುವುದು. ಈ ಕುರಿತು ಮತ್ತೊಂದು ಸಭೆ ಕರೆಯಲಾಗುವುದು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಟೆಂಡರ್ ಪೂರ್ಣಗೊಂಡ ಬಳಿಕ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೇಲ್ಸೇತುವೆ ಕಾಮಗಾರಿ ಮಾಡುವಾಗ ರಸ್ತೆಯಲ್ಲಿನ ಕಟ್ಟಡ ತೆರವುಗೊಳಿಸಿ ಕಾಮಗಾರಿ ನಡೆಸಬೇಕು.ಕೆರೆಗಳನ್ನು ಸಂರಕ್ಷಿಸಿ, ಒತ್ತುವರಿದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ತಾಕೀತು ಮಾಡಿದರು.
ಜಿಲ್ಲಾಡಳಿತ ಕಚೇರಿಗಳಲ್ಲಿ ಸರ್ಕಾರದ ಅಭಿವೃದ್ಧಿ ಕಡತಗಳ ವಿಲೇ ತಡವಾಗುತ್ತಿರುವ ದೂರು ಬಂದಿದ್ದು, ಮುಂದೆ ಈ ರೀತಿ ಆಗಬಾರದೆಂದು ಅಧಿಕಾರಿಗಳಿಗೆ ಸೂಚಿಸಿ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಯಾವುದೇ ಭಾಗದಲ್ಲಾದರೂ ಕುಡಿಯುವ ನೀರಿಗೆ ಸಮಸ್ಯೆ ಕಂಡು ಬಂದರೆ ಸ್ಥಳಿಯ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಮಾಡಿ ಪ್ರಸ್ತಾವನೆ ಕಳುಹಿಸಿದರೆ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಕಟ್ಟಡ ನಿಮಾರ್ಣಕ್ಕೆ ನಕ್ಷೆಯೊಂದಿಗೆ ಪರವಾನಗಿ ನೀಡಬೇಕು. ಉದ್ಯಮ ಪರವಾನಗಿ ನಿಗದಿಗೊಳಿಸಬೇಕು, ರಾಜ ಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಕ್ರಮ ಆಸ್ತಿ ವಜಾ ಮಾಡಿ, ಅಕ್ರಮ ದಂಧೆಗಳನ್ನು ಬಗ್ಗು ಬಡೆಯಬೇಕು ಎಂದು ನಗರಸಭೆಯ ಆಯುಕ್ತರಿಗೆ ತಿಳಿಸಿದರು.
ತಹಸೀಲ್ದಾರ್ ಎಂ.ವಿ.ರೂಪಾ, ತಾಪಂ ಇಒ ಕೃಷ್ಣಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ನರಸಿಂಹ, ನಗರಸಭೆ ಆಯುಕ್ತ ಮಹದೇವ, ಮಾರಿಕಾಂಬಾ ದೇವಾಲಯ ಸಮಿತಿ ಅಧ್ಯಕ್ಷ ಪಿ. ವೆಂಕಟೇಶ್, ಸಮಿತಿ ಸದಸ್ಯರಾದ ಎ.ವೈ. ಗೋವಿಂದಪ್ಪ, ಎಂ.ವಿ. ಹನುಮಂತಯ್ಯ, ಎಂ.ಬಿ. ನಂಜುಂಡಪ್ಪ, ತಬಲಾ ನಾರಾಯಣಪ್ಪ, ಜಗನ್ನಾಥ್ ಇದ್ದರು.
ಕುಡಿಯುವ ನೀರಿಗೆ ತೊಂದರೆಯಾಗದಿರಲಿ:ಶಾಸಕ ಕೆ ವೈ ನಂಜೇಗೌಡ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಕೆ ಮಾಡುತ್ತಿರುವುದರಿಂದ ರಸ್ತೆ ಕಾಮಗಾರಿ ಮಾಡಲು ತೊಂದರೆಯಾಗುತ್ತಿದೆ. ಬರಗಾಲ ಪ್ರಾರಂಭವಾಗುತ್ತಿದ್ದು ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಮಾಲೂರಿನ ದೊಡ್ಡಕೆರೆ ಕಾಮಗಾರಿಯೂ 36 ಕೋಟಿ ರೂ.ಗಳಲ್ಲಿ ನಡೆಯುತ್ತಿದ್ದು, ಯೋಜನಾ ಪ್ರಾಧಿಕಾರದಿಂದ 30 ಕೋಟಿ ಪಡೆಯಲಾಗಿದೆ. 1.45 ಕೋಟಿ ರೂ. ವೆಚ್ಚದಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.