ಸಿರಿಧಾನ್ಯ, ತೈಲ ಬೆಳೆ ಉತ್ತೇಜಿಸಿ

 ಕೋಲಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿ.ಪಂ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ ಮಾತನಾಡಿದರು.
ಕೋಲಾರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿ.ಪಂ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ ಮಾತನಾಡಿದರು.
Published on
ಕೋಲಾರ: ಬೆಳೆ ಮಾಡುವ ವಿಚಾರದಲ್ಲಿ ರೈತನೆ ವಿಜ್ಞಾನಿ, ಕಾಲಕ್ಕೆ ತಕ್ಕಂತೆ ಬೆಳೆ ನಾಟಿ ಮಾಡುವ ಹಾಗೂ ವೈಜ್ಞಾನಿಕವಾಗಿ ಉತ್ತಮ ಆಹಾರ ಉತ್ಪಾದಿಸುವ ಕುರಿತು ಸೂಕ್ತ ಮಾಹಿತಿಯನ್ನು ಅಧಿಕಾರಿಗಳು ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಪ್ರವಿಣ್​ ಪಿ.ಬಾಗೇವಾಡಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಭದ್ರ ಮತ್ತು ಪೌಷ್ಟಿಕ ಅಭಿಯಾನ ಕಾರ್ಯಕಾರಿ ಸಮಿತಿ ಹಾಗೂ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆ ಕಾಳು ಬೆಳೆ ಯೋಜನೆಯ ಜಿಲ್ಲಾ ಮಟ್ಟದ ಎಣ್ಣೆ ಕಾಳು ಅಭಿಯಾನ ಸಮಿತಿ ಸಭೆಯಲ್ಲಿ, ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಹಿಂದೆಯೆಲ್ಲ ತಂತ್ರಜ್ಞಾನವಿರಲಿಲ್ಲ, ಯಾವ ಕಾಲಕ್ಕೆ ಯಾವ ಬೆಳೆ ನಾಟಿ ಮಾಡಬೇಕು, ಗೊಬ್ಬರ ನೀಡುವುದು, ನೀರು ಹಾಯಿಸುವ ಕೆಲಸ ಮಾಡಿ, ಉತ್ತಮ ಇಳುವರಿ ತೆಗೆಯುತ್ತಿದ್ದರು. ಇದೀಗ ಅದೆಲ್ಲ ಬದಲಾಗಿದೆ. ವಿಷ ಮಿಶ್ರತ ಆಹಾರ ಉತ್ಪಾದನೆಯಾಗುತ್ತಿದೆ. ಈ ಕುರಿತು ಜಾಗೃತಿ ಮೂಡಿಸಿ ವಿಷ ಮುಕ್ತ ಆಹಾರ ಉತ್ಪಾದನೆಗೆ ಉತ್ತೇಜನ ನೀಡಬೇಕು ಎಂದು ಸೂಚಿಸಿದರು.
ಶ್ರೀಮಂತ ರೈತರು ಆರ್ಥಿಕ ಲಾಭದಲ್ಲಿ ಇರುತ್ತಾರೆ, ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಆಹಾರ ಉತ್ಪಾದನೆ ಮಾಡಿ ಮಾರುಕಟ್ಟೆಗೆ ಸರಬರಾಜು ಮಾಡುವ ಕಾಯದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅವರ ಸಬಲೀಕರಣಕ್ಕಾಗಿ ಇಲಾಖೆಗಳಿಂದ ಕ್ರಮ ಆಗಬೇಕು ಎಂದು ಎಚ್ಚರಿಸಿದರು.
ಈ ಸಾಲಿನಲ್ಲಿ ಮಳೆ ತಡವಾಗಿ ಅಭಾವ ಆಗುವ ಸಂಭವವಿದೆ. ಈ ಅವಧಿಯಲ್ಲಿ ರೈತರು ಯಾವ ಬೆಳೆ ನಾಟಿ ಮಾಡಿದರೆ ಸೂಕ್ತ ಎಂಬುದನ್ನು ಅಧಿಕಾರಿಗಳು ರೈತರ ಬಳಿಗೆ ಹೋಗಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಸುರತ ಬೇಟಿ ನಿರ್ಮಾಣ ಮಾಡಿಸಲು ಸೂಚನೆ ನೀಡಲಾಗಿದೆ. ಇದರ ನಡುವೆಯೂ ಪ್ರಾಣ ಹಾನಿ ಸಂಭವಿಸಿದರೆ ಕೃಷಿ ಇಲಾಖಧಿಕಾರಿಗಳನ್ನು ಹೊಣೆ ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುತ್ತದೆ, ಇನ್ನು ಯಾರು ಬಾಕಿ ಉಳಿಸಿಕೊಂಡಿದ್ದಾರೊ ಅಂತಹವರನ್ನು ಭೇಟಿ ಮಾಡಿ ಬೇಲಿ ನಿರ್ಮಾಣ ಮಾಡಿಕೊಳ್ಳಲು ತಿಳಿ ಹೇಳಿ ಎಂದು ಎಚ್ಚರಿಕೆ ನೀಡಿದರು.
ಉಪ ಕಾರ್ಯದರ್ಶಿ ಟಿ.ಕೆ.ರಮೇಶ್​ ಮಾತನಾಡಿ, ಹೈನೋದ್ಯಮ, ರೇಷ್ಮೆ, ಕೃಷಿ, ತೋಟಗಾರಿಕೆ ರೈತರ ಜೀವನಾಡಿಯಾಗಿದೆ. ಸಂಬಂಧಪಟ್ಟ ಇಲಾಖಧಿಕಾರಿಗಳಿಂದ ಮಾಹಿತಿ ನೀಡಿದೆ ಆದರೆ ಬದುಕನ್ನು ಹಸನು ಮಾಡಿಕೊಳ್ಳುತ್ತಾರೆ. ಇದಕ್ಕೆ ಪೂರವಾಗಿ ಅಧಿಕಾರಿಗಳ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು, ಜತೆಗೆ ಯೋಜನೆಗಳ ಪ್ರಯೋಜನ ತಲುಪಿಸಬೇಕು ಎಂದು ಸಲಹೆ ನೀಡಿದರು.
* ರೈತರಿಗೆ ನಿರಂತರ ತರಬೇತಿ
ಕೃಷಿ ಜಂಟಿ ನಿರ್ದೇಶಕಿ ಮಂಜುಳಾ ಮಾತನಾಡಿ, ಕಳೆದ ವಾರದಿಂದ ಜಿಲ್ಲೆಯಲ್ಲಿ ಶೇಂಗಾ, ತೊಗರಿ ನಾಟಿ ಆಗಬೇಕಿತ್ತು, ಇದುವರೆಗೂ ಮಳೆ ಆಗದೆ ಇರುವುದು ನಾಟಿಗೆ ತೊಂದರೆಯಾಗುತ್ತಿದೆ. ಜುಲೈ ತಿಂಗಳ ತನಕ ಅವಕಾಶವಿದ್ದು, ಮಳೆ ಆದರೆ ನಾಟಿ ಆಗುತ್ತದೆ, ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಮಳೆಯಾಶ್ರಿತ ಬೆಳೆ ನಾಟಿ ಮಾಡುತ್ತಾರೆ ಎಂದು ಹೇಳಿದರು.
ಒಂದು ವೇಳೆ ಮಳೆ ತಡವಾದರೆ ಆಗಸ್ಟ್​ ತನಕ ರಾಗಿ, ಅಲಸಂದೆ, ಅವರೆಗೆ ಅವಕಾಶವಿದೆ. ಜತೆಗೆ ಸಿರಿಧಾನ್ಯ ನಾಟಿಗೆ ರೈತರಿಗೆ ಉತ್ತೇಜನ ನೀಡಲಾಗುತ್ತಿದ್ದು, ಕೆಲವರು ಅಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಪೂರಕವಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ಅರಿವು ಮೂಡಿಸುವುದು, ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಜ್ಞಾನಿಗಳಿಂದ ತಬೇತಿ ಕೊಡಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
* ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತರಾಟೆ
ಇತ್ತಿಚಿಗೆ ನಡೆದ ಅಂತರಾಷ್ಟ್ರೀಯ ಯೋಗಾ ದಿನಾಚರಣೆಗೆ ಬಹುತೇಕ ಜಿಲ್ಲಾ ಮಟ್ಟದ ಅಧಿಕಾರಿಗಳು ಗೈರು ಆಗಿದ್ದರು, ಜತೆಗೆ ಸಭೆಗಳಿಗೂ ಹೆಚ್ಚು ಅಧಿಕಾರಿಗಳು ಗೈರು ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಸಮಸ್ಯೆಯೇನು ಎಂದು ಸಭೆಗೆ ಆಗಮಿಸಿದ್ದ ಅಧಿಕಾರಿಗಳನ್ನು ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ ತರಾಟೆಗೆ ತೆಗೆದುಕೊಂಡರು. ಇದು ಹೀಗೆ ಮುಂದುವರೆದರೆ ನಿಮ್ಮ ವರ್ತನೆ ಬಗ್ಗೆ ಸರ್ಕಾರಕ್ಕೆ ಬರೆದು ಕ್ರಮಕ್ಕೆ ಶಿಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net