ವಿದ್ಯುತ್​ ಖಾಸಗೀಕರಣಗೊಂಡರೆ ಜೇಬಿಗೆ ಕತ್ತರಿ

Privatization of electricity will cut into your pocket
Privatization of electricity will cut into your pocket
Published on
ವೇಮಗಲ್: ರಾಜ್ಯದಲ್ಲಿ ವಿದ್ಯುತ್​ ವಿತರಣಾ ಪರವಾನಗಿ ಖಾಸಗಿ ಕಂಪನಿಗೆ ನೀಡದಂತೆ, ಜತೆಗೆ ವಿದ್ಯುತ್​ ಕ್ಷೇತ್ರ ಖಾಸಗೀಕರಣಗೊಳಿಸದಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ವೇಮಗಲ್​, ನರಸಾಪುರ, ಕ್ಯಾಲನೂರು ಭಾಗದ ಹೋರಾಟಗಾರರು, ನೌಕರರ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ವೇಮಗಲ್​ ಬಯಲು ರಂಗಮಂದಿರದಿಂದ ಪ್ರಾರಂಭವಾದ ಹೋರಾಟ ಜಾಥಾ ರಾಮಶೆಟ್ಟಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ನಂತರ ಕುರುಗಲ್​ ಪಪಂ ಕಚೇರಿ ಮುಂದೆ ಪ್ರತಿಭಟಿಸಲಾಯಿತು.
ಹಸಿರು ಸೇನೆ ಯುವ ಘಟಕ ಅಧ್ಯಕ್ಷ ರಾಮುಶಿವಣ್ಣ ಮಾತನಾಡಿ, ವಿದ್ಯುತ್​ ಖಾಸಗೀಕರಣವಾದರೆ ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್​ ರದ್ದಾಗುತ್ತದೆ. ರೈತರ ಕೃಷಿ ಪಂಪ್​ಸೆಟ್​ಗಳಿಗೆ ಮೀಟರ್​ ಅಳವಡಿಸಿ ಬಡವರಿಗೆ ನೀಡುವ ವಿದ್ಯುತ್​ ಯೋಜನೆಗಳಾದ ಗೃಹಜೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಗಂಗಾ ಕಲ್ಯಾಣ ಯೋಜನೆಗಳು ರದ್ದಾಗುತ್ತವೆ. ಜತೆಗೆ ಸಣ್ಣ ಕೈಗಾರಿಕೆಗಳಿಗೆ ನೀಡುವ ರಿಯಾಯಿತಿ ದರದ ವಿದ್ಯುತ್​ ನಿಲ್ಲಲಿದೆ. ಕಾಲಾಂತರದಲ್ಲಿ ವಿದ್ಯುತ್​ ಬಳಕೆಯ ಮೇಲೆ ಹೆಚ್ಚಿನ ದರ ನಿಗದಿ ಮಾಡುತ್ತಾರೆ ಎಂದರು.
ವಿದ್ಯುತ್​ ಖಾಸಗೀಕರಣಗೊಂಡರೆ ಖಾಸಗಿ ಕಂಪನಿ ಹಿಡಿತದಲ್ಲಿರುತ್ತದೆ. ಈಗ ಕೃಷಿ ಪಂಪ್​ಸೆಟ್​ಗಳಿಗೂ ವಿದ್ಯುತ್​ ಬಳಕೆಗೆ ಮುಂಗಡ ಹಣ ಪಾವತಿ ಮಾಡಬೇಕಾಗುತ್ತದೆ ಎಂದರು.
ಜಿ.ನಾರಾಯಣಸ್ವಾಮಿ, ಎಂಐಸಿಟಿ ಮಂಜುನಾಥ್​, ಕಲ್ವಮಂಜಲಿ ಸಿ. ಶಿವಣ್ಣ, ಮಡಿವಾಳ ಮುನಿರಾಜು, ಕೃಷ್ಣಯ್ಯ, ಶಬೀರ್​, ಕೆಇಬಿ ಚಂದ್ರು, ಸುಧಾಕರ್​, ನಾಗರಾಜ್​, ರಮೇಶ್​, ಸತೀಶ್​, ವೆಂಕಟೇಶ್​, ನಾಗಭೂಷಣ್​, ಕೃಷ್ಣಪ್ಪ, ಬ್ಯಾಟಪ್ಪ, ಸಂಜೀವಯ್ಯ, ಆಂಜಿನಪ್ಪ, ಬೆಸ್ಕಾಂ ಅಸಿಸ್ಟೆಂಟ್​ ಇಂಜಿನಿಯರ್​ಗಳಾದ ಗುರಪ್ಪ, ಕೋಟ ರೆಡ್ಡಿ, ನಾಗರತ್ನ, ಆಲಿ, ಭಾಷಾ, ಚೌಡರೆಡ್ಡಿ, ಪ್ರಭಾಕರ್​, ಪಪಂ ಅಧ್ಯಕ್ಷ ಅನುಷಾ ಡಿ ಮುನಿರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net