2026 ಅಕ್ಟೋಬರ್ 1ಕ್ಕೆ ಅನುಗುಣವಾಗಿ ನಡೆಯುತ್ತಿರುವ 3ನೇ ಹಂತದ ಪರಿಷ್ಕರಣೆಯಲ್ಲಿ ಜೂನ್ 30 ರಿಂದ ಜುಲೈ 29ರವರೆಗೆ ಗಣತಿ ಕಾರ್ಯ ಚಾಲ್ತಿಯಲ್ಲಿರುತ್ತದೆ. ಜಿಲ್ಲೆಯ 12,95,265 ಮತದಾರರ ಅನುಕೂಲಕ್ಕಾಗಿ ಎಲ್ಲಾ 1,538 ಮತಗಟ್ಟೆಗಳನ್ನು, ಮತದಾರರ ಸಹಾಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಬಿಎಲ್ಒಗಳು ಸಂಗ್ರಹಿಸಿದ 92,956 ನಮೂನೆಗಳನ್ನು ಈಗಾಗಲೇ ಆಪ್ ಮೂಲಕ ಯಶಸ್ವಿಯಾಗಿ ಡಿಜಿಟೈಸ್ ಮಾಡಲಾಗಿದೆ ಎಂದರು.