ನಗರ ವಿವಿಧ ಉದ್ಯಾನವನ, ರಸ್ತೆ ವಿಭಜಕ, ರೈಲ್ವೆ ನಿಲ್ದಾಣ, ಬಿಇಒ, ಬಿಆರ್‌ಸಿ ಕಚೇರಿ ಆವರಣ. ಜೂನಿಯರ್ ಕಾಲೇಜು ಮೈದಾನ, ಹಳೇ ಡಿಸಿ ಕಚೇರಿ ಆವರಣ, ಅಬಕಾರಿ ಇಲಾಖೆ, ರಸ್ತೆ ಬದಿ, ಶಾಲಾ-ಕಾಲೇಜು, ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಕಳೆದ 10 ವರ್ಷಗಳಿಂದ 1,500ಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಿ ಪೋಷಿಸುತ್ತಿದ್ದಾರೆ. ನಾಟಿ ಮಾಡಿರುವ ಗಿಡಕ್ಕೆ ಪಾತಿ ಮಾಡುವುದು, ಗೊಬ್ಬರ, ಟೀಗಾರ್ಡ್ ಹಾಕುವುದು, ಇತರ ಪೋಷಣೆ ಮಾಡುವ ಸಂರಕ್ಷಣೆ ಮಾಡುವ ಸೇವಾ ಕಾರ್ಯದಲ್ಲಿ ಸ್ವಯಂ ಸೇವಕರು ತೊಡಗಿಸಿಕೊಂಡಿದ್ದಾರೆ.