ಉನ್ನತ ಶಿಕ್ಷಣಕ್ಕೆ ನೆರವಾದ ಪಿಎಂ- ಉಷಾ

ಮುಳಬಾಗಿಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪಿಎಂ -ಉಷಾ ಯೋಜನೆ ಕಾರ್ಯಕ್ರಮವನ್ನು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ. ರವಿ ಉದ್ಘಾಟಿಸಿದರು. ನೋಡಲ್​ ಅಧಿಕಾರಿ ಡಾ. ಎಂ.ಎನ್​. ರಮೇಶ್​, ವಿವಿಧ ಕಾಲೇಜುಗಳ ಪ್ರಾಂಶುಪಾಲರಾದ ಎಂ. ಕೃಷ್ಣಪ್ಪ, ಡಾ.ರಮೇಶ್​ ನಾಯಕ್​, ನಾರಾಯಣ್​, ಸುಜಾತಾ, ಶ್ರೀಧರ್​, ಶ್ರೀನಿವಾಸ ಮೂರ್ತಿ, ಮಮತಾ, ಉಪನ್ಯಾಸಕರಾದ ಎಂ. ಉಮಾ, ಭಾಗ್ಯಲಕ್ಷ್ಮಿ, ವಸುಂಧರಾ, ಶಶಿಕಲಾ, ಲಾರೆನ್ಸ್​ ಪ್ರಸನ್ನ, ಟಿ.ಎಸ್​. ಶ್ರೀನಿವಾಸ್​, ಎಂ.ಎನ್​. ಮೂರ್ತಿ, ಎಂ. ಆದಿನಾರಾಯಣ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಉನ್ನತ ಶಿಕ್ಷಣಕ್ಕೆ ನೆರವಾದ ಪಿಎಂ- ಉಷಾ

ಮುಳಬಾಗಿಲು:

ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಜತೆಗೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಪಿಎಂ- ಉಷಾ ಯೋಜನೆ ಮಹತ್ವದ ಹೆಜ್ಜೆಯಾಗಿದೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಬಿ.ಕೆ.ರವಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪಿಎಂ -ಉಷಾ (ಪ್ರಧಾನಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ) ಯೋಜನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಬಲಪಡಿಸುವುದು, ಬೋಧನೆ- ಮತ್ತು ಕಲಿಕೆಯ ಗುಣಮಟ್ಟ ಹೆಚ್ಚಿಸುವುದು, ಎನ್​ಇಪಿ- 2020 ಶಿಫಾರಸುಗಳ ಅನುಷ್ಠ್ಠಾನಕ್ಕೆ ನೆರವು, ಸಂಶೋಧನೆ ಮತ್ತು ನವೀನತೆಗೆ ಉತ್ತೇಜನ ನೀಡುವುದು ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಗ್ರಾಮೀಣ ವಿದ್ಯಾರ್ಥಿಗಳು, ಮಹಿಳೆಯರು, ಎಸ್​ಸಿ, ಎಸ್​ಟಿ, ಒಬಿಸಿ, ಅಲ್ಪಸಂಖ್ಯಾತ ಹಾಗೂ ಅಂಗವಿಕಲರಿಗೆ ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ಸಹಕಾರಿಯಾಗಲಿದೆ ಎಂದರು.
2023&-24 ರಿಂದ 2025-&26ರ ಅವಧಿಗೆ ಪಿಎಂ -ಉಷಾ ಯೋಜನೆಯಡಿ 12,926.10 ಕೋಟಿ ರೂ.ಅನುದಾನ ನಿಗದಿಯಾಗಿದ್ದು, ಕೋಲಾರ ಉತ್ತರ ವಿಶ್ವವಿದ್ಯಾಲಯಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕೋಲಾರದಲ್ಲಿ ಮಹಿಳಾ ವಸತಿ ನಿಲಯ ನಿರ್ಮಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಯೋಜನೆಯ ವೆಚ್ಚ ಕೇಂದ್ರ ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಭರಿಸಲಿವೆ. ಇದು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಹಣ ನೀಡುವ ವಿದ್ಯಾರ್ಥಿವೇತನ ಯೋಜನೆಯಲ್ಲ, ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಅನುದಾನ ನೀಡುವ ಯೋಜನೆಯಾಗಿದೆ. ಜಿಲ್ಲೆಯ ಕೃಷಿ ಕುಟುಂಬಗಳ ಮಕ್ಕಳ ಉನ್ನತ ಶಿಕ್ಷಣದ ಕನಸಿಗೆ ಯೋಜನೆ ಬಲ ನೀಡಲಿದೆ ಎಂದರು.
ಪಿಎಂ -ಉಷಾ ನೋಡಲ್​ ಅಧಿಕಾರಿ ಡಾ. ಎಂ.ಎನ್​. ರಮೇಶ್​ ಮಾತನಾಡಿ, ಹೆಣ್ಣುಮಕ್ಕಳಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಹಾಗೂ ಸ್ವಾತಂತ್ರ್ಯ ದೊರೆಯುವುದು ಯೋಜನೆಯ ಆಶಯವಾಗಿದ್ದು, ಇದನ್ನು ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠ್ಠಾನಗೊಳಿಸಬೇಕು. ಜಿಲ್ಲೆಯ 10 ಕಾಲೇಜುಗಳಲ್ಲಿ ಕಾರ್ಯಾಗಾರ ನಡೆಸಿ ಜಾಗೃತಿ ಮೂಡಿಸುವ ಮೂಲಕ ಬದಲಾವಣೆಯ ಭಾರತ ನಿಮಾರ್ಣಕ್ಕೆ ಸಂಕಲ್ಪ ಮಾಡಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net