ಸಚಿವ ಸ್ಥಾನಕ್ಕಾಗಿ ಭುಗಿಲೆದ್ದ ಆಕ್ರೋಶ

ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಸ್​ ನಿಲ್ದಾಣ ಸಮೀಪ ಕೆಜಿಎಫ್​ ರಸ್ತೆಯಲ್ಲಿ ಬೆಂಬಲಿಗರು ಮತ್ತು ಮುಖಂಡರು ಟಯರ್​ ಸುಟ್ಟು ರಸ್ತೆ ಬಂದ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೆ.ಚಂದ್ರಾರೆಡ್ಡಿ, ಅ.ನಾ.ಹರೀಶ್​, ಅಣ್ಣಾದೊರೈ, ಶಂಶುದ್ದೀನ್​ ಬಾಬು, ಗುಲ್ಲಹಳ್ಳಿ ನಾಗರಾಜ್​, ಎಸ್​.ಎ.ಪಾರ್ಥಸಾರತಿ, ಷಫಿ, ಭಾಗ್ಯಮ್ಮ ಇದ್ದರು.
ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬಸ್​ ನಿಲ್ದಾಣ ಸಮೀಪ ಕೆಜಿಎಫ್​ ರಸ್ತೆಯಲ್ಲಿ ಬೆಂಬಲಿಗರು ಮತ್ತು ಮುಖಂಡರು ಟಯರ್​ ಸುಟ್ಟು ರಸ್ತೆ ಬಂದ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಕೆ.ಚಂದ್ರಾರೆಡ್ಡಿ, ಅ.ನಾ.ಹರೀಶ್​, ಅಣ್ಣಾದೊರೈ, ಶಂಶುದ್ದೀನ್​ ಬಾಬು, ಗುಲ್ಲಹಳ್ಳಿ ನಾಗರಾಜ್​, ಎಸ್​.ಎ.ಪಾರ್ಥಸಾರತಿ, ಷಫಿ, ಭಾಗ್ಯಮ್ಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಸ್ಥಾನಕ್ಕಾಗಿ ಭುಗಿಲೆದ್ದ ಆಕ್ರೋಶ
ಸಚಿವ ಸ್ಥಾನಕ್ಕಾಗಿ ಭುಗಿಲೆದ್ದ ಆಕ್ರೋಶ

ಬಂಗಾರಪೇಟೆ:

ಶಾಸಕ ಎಸ್​.ಎನ್​.ನಾರಾಯಣಸ್ವಾಮಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹೈಕಮಾಂಡ್​ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್​ ಹಾಗೂ ವಿವಿಧ ಸಂಘ-&ಸಂಸ್ಥೆಗಳು ಗುರುವಾರ ಕರೆ ನೀಡಿದ್ದ ಬಂಗಾರಪೇಟೆ ಬಂದ್​ಗೆ ಭಾಗಶ@ ಬೆಂಬಲ ವ್ಯಕ್ತವಾಯಿತು.

ಪ್ರಮುಖ ಬಜಾರ್​ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಅಂಗಡಿ- ಮುಂಗಟ್ಟು, ಹೋಟೆಲ್​, ಚಿತ್ರಮಂದಿರಗಳನ್ನು ಸಂಪೂರ್ಣ ಬಂದ್​ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರೆ, ವಾಹನ ಸಂಚಾರ, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಕಾಂಗ್ರೆಸ್​ ಮುಖಂಡರು ಮತ್ತು ಕಾರ್ಯಕರ್ತರು ಅಂಬೇಡ್ಕರ್​ ವೃತ್ತದಲ್ಲಿ ಜಮಾಯಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಎಸ್​.ಎನ್​.ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿದ ಹೈಕಮಾಂಡ್​ ವಿರುದ್ಧ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಬಂಗಾರಪೇಟೆಯಲ್ಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ಬೇಸರ ತಂದಿದೆ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ರಾಜ್ಯಮಟ್ಟದ ಸಂಘಟನೆಯಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದಾರೆ ಎಂದರು.

ಬಂದ್​ ವೇಳೆ ಕಾಂಗ್ರೆಸ್​ ಕಾರ್ಯಕರ್ತರರು ಮತ್ತು ಬಿಜೆಪಿಯ ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್​ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಸಮೀಪದ ಮಹೇಶ್​ ಮಾಲೀಕತ್ವದ ಪೆಟ್ರೋಲ್​ ಬಂಕ್​ ಎದುರು ಕೆಜಿಎಫ್​ ಮುಖ್ಯ ರಸ್ತೆ ಬಂದ್​ ಮಾಡಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದುದನ್ನು ಪ್ರಶ್ನಿಸಿದಾಗ ವಾಗ್ವಾದ ನಡೆಯಿತು. ಪೊಲೀಸ್​ ಇನ್​ಸ್ಪೆಕ್ಟರ್​ ರವಿಕುಮಾರ್​ ಗುಂಪು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪೆಟ್ರೋಲ್​ ಬಂಕ್​ನಂತಹ ಅಗತ್ಯ ಸೇವೆ ಸ್ಥಗಿತಗೊಳಿಸುವುದು, ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡುವುದು ಸಮರ್ಥನೀಯವಲ್ಲ. ಇದು ಸ್ವಯಂಪ್ರೇರಿತ ಬಂದ್​ ಆಗಿದ್ದರೆ ಜನರು ಇಚ್ಛೆಯಿಂದಲೇ ಪಾಲ್ಗೊಳ್ಳಬೇಕಿತ್ತು. ಆದರೆ ಅಂಗಡಿ-, ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುವುದು, ರಸ್ತೆ ಬಂದ್​ ಮಾಡುವುದು, ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್​ ಅಸಮಾಧಾನ ಹೊರಹಾಕಿದರು.

06 ಬಿಪಿಟಿ 01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net