ಎಂಆರ್​ಐ, ಸಿಟಿ ಸ್ಕ್ಯಾನ್​ ಉಚಿತವಲ್ಲ

ಸ್ಕ್ಯಾನ್​ಗಾಗಿ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಗೆ ಮುಂದಾಗಿರುವ ಜನ.
ಸ್ಕ್ಯಾನ್​ಗಾಗಿ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಗೆ ಮುಂದಾಗಿರುವ ಜನ.
Published on
ಕೋಲಾರ: ನಗರದ ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯಲ್ಲಿ ಖಾಸಗಿ ಸಹ ಭಾಗಿತ್ವದಡಿ ರೋಗಿಗಳಿಗೆ ಎಂಆರ್​ಐ-ಸಿಟಿ ಸ್ಕ್ಯಾನ್ ಸೇವೆಗೆ ದರ ನಿಗಧಿಪಡಿಸಿದ್ದು, ಬಡ ರೋಗಿಗಳು ಮತ್ತೆ ಹಣ ನೀಡಿ ಸೇವೆ ಪಡೆಯುವ ದುಸ್ಥಿತಿ ಎದುರಾಗಿದೆ.
2017-18ರಿಂದ ಉಚಿತವಾಗಿ ಸೇವೆ ನೀಡಲಾಗುತ್ತಿತ್ತು, ಈಗ ಟೆಂಡರ್​ ಪಡೆದುಕೊಂಡಿರುವ ಖಾಸಗಿ ಸಂಸ್ಥೆಗೆ ಸರ್ಕಾರದಿಂದ ಬಿಡೆಗಡೆಯಾಗದ ಕಾರಣ ದರ ನಿಗದಿಪಡಿಸಲಾಗಿದೆ.
2017-18ರಲ್ಲಿ ಟಕಗಳನ್ನು ಸ್ಥಾಪನೆ ಮಾಡಿದ್ದು, ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಒಂದು ತಿಂಗಳಿಗೆ ಎಂಆರ್​ಐ 600, ಸಿಟಿ 580 ಸ್ಕ್ಯಾನ್ ಮಾಡಲಾಗುತ್ತದೆ. ಇದೀಗ ಏಕಾಏಕಿಯಾಗಿ ದರ ನಿಗಧಿಪಡಿಸಿರುವುದರಿಂದ ಸೇವೆಯೂ ಸ್ಥಗಿತಗೊಂಡಿದೆ.
ಆರಂಭದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಉಚಿತ ರೋಗ ಪತ್ತೆ ಸೇವೆಗಳ ಕಾರ್ಯಕ್ರಮದಡಿ ಸೇವೆಯನ್ನು ಸಾರ್ವಜನಿಕರಿಗೆ ಒದಗಿಸಲಾಗುತ್ತಿತ್ತು. ಸಂಸ್ಥೆಯವರಿಗೆ ರಾಜ್ಯ ಸರ್ಕಾರವು ಸುಮಾರು 140 ಕೋಟಿ ರೂ.ಗಿಂತ ಹೆಚ್ಚು ಮೊತ್ತ ಈಗಾಗಲೇ ಸ್ಕ್ಯಾನ್ ಮಾಡಲಾಗಿರುವ ಪ್ರಕರಣಗಳಿಗೆ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಟಕಗಳ ನಿರ್ವಹಣೆಗೂ ತೊಂದರೆಯಾಗಿದ್ದು, ಆರಂಭದಲ್ಲಿ ಆಗಿರುವ ಒಪ್ಪಂದಂತೆ ದರ ನಿಗಧಿಪಡಿಸಿ ಸ್ಕ್ಯಾನ್ ಮಾಡಲು ಮೇಲಧಿಕಾರಿಗಳು ಸೂಚಿಸಿದ್ದು, ಉಚಿತ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಸರ್ಕಾರಕ್ಕೆ ಆಗತ್ತಿದ್ದ ಹೊರೆಯನ್ನು ಸಹ ಕಡಿಮೆ ಮಾಡಿಕೊಳ್ಳಲು ಜಿಲ್ಲಾ ಸ್ಪತ್ರೆಗಳಲ್ಲಿ ಅನಗತ್ಯವಾಗಿ ರೋಗಿಗಳನ್ನು ಸ್ಕ್ಯಾನ್​ಗೆ ಶಿಾರಸ್ಸು ಮಾಡುವುದು, ಅಗತ್ಯವಿಲ್ಲದಿದ್ದರೂ ಹಲವು ಭಾರಿ ಸ್ಕ್ಯಾನ್​ ಮಾಡಿಸುವುದು, ಪ್ರಯೋಗಾಲಯದಲ್ಲಿ ಪರೀೆ ನಡೆಸದೆ ರೆರಲ್​ ಮಾಡುವುದು ಸೇದಂತೆ ಹಲವು ವಿಚಾರಗಳ ಕುರಿತು ದೂರುಗಳು ಸಹ ಸಲ್ಲಿಕೆಯಾಗಿದ್ದವು. ಇದಕ್ಕೆ ಕಡಿವಾಣ ಹಾಕಲು ಸತತ ಪ್ರಯತ್ನ ನಡೆದಿತ್ತು. ಇಷ್ಟೆಲ್ಲದರ ನಡುವೆಯೂ ಸರ್ಕಾರ ಹಣ ಬಾಕಿ ಉಳಿಸಿಕೊಂಡಿರುವುದರಿಂದ ಸಂಸ್ಥೆಯವರು ಎಂಆರ್​ಐಗೆ 4,221 ಹಾಗೂ ಸಿಟಿಗೆ 2,221 ರೂ. ನಿಗಧಿಪಡಿಸಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ. 3-4 ವರ್ಷಗಳಿಂದ ಸರ್ಕಾರವು ಹಣ ಬಾಕಿ ಉಳಿಸಿಕೊಂಡು ಬಂದಿದೆ.
ಫೆ.18ರಿಂದ ಸ್ಕ್ಯಾನ್​ಗೆ ದರ ನಿಗಧಿಪಡಿಸಲಾಗಿದೆ. ಇಷ್ಟುದಿನ ಉಚಿತ ಸೇವೆ ನೀಡುತ್ತಿದ್ದವರು ಹಣ ಕೇಳುತ್ತಿದ್ದಾರೆ. ಈ ವೇಳೆ ಸ್ಕ್ಯಾನಿಂಗ್​ ಘಟಕದ ಸಿಬ್ಬಂದಿ ಹಾಗೂ ರೋಗಿಗಳ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲಕಾಲ ಜಿಲ್ಲಾಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿಮಾರ್ಣವಾಗಿತ್ತು. ಈ ಪ್ರಸಂಗ ಗುರುವಾರ ಸಹ ಮುಂದುವರೆಯಿತು. ಇದರಿಂದಾಗಿ ದೂರದ ಊರುಗಳಿಂದ ಬಂದಿದಂತಹ ರೋಗಿಗಳು ಪರದಾಡುವಂತಾಯಿತು.
* ದಾಖಲೆ ಮಾಡಿಸಿಕೊಳ್ಳೊದೆ ಸವಾಲು
ಎಂಆರ್​ಐ ಅಥವಾ ಸಿಟಿ ಸ್ಕ್ಯಾನ್​ ಮಾಡಿಸಿಕೊಳ್ಳಬೇಕಾದರೆ ಮೊದಲು ವೈದ್ಯರು ಶಿಾರಸ್ಸು ಮಾಡಬೇಕು, ಆನಂತರ ಎಬಿಆರ್​ಕೆ ೋರ್ಟಲ್​ ಮೂಲಕ ದಾಖಲೆ ಸಲ್ಲಿಸಿ, ಯೋಜನೆಯ ನೋಡಲ್​ ಅಧಿಕಾರಿಯಿಂದ ಅನುಮೋದನೆ ಪಡೆದುಕೊಳ್ಳಬೇಕು.
ಇದಕ್ಕಾಗಿ ಆಸ್ಪತ್ರೆಯ ಚೀಟಿ, ಆಧಾರ್​ ಕಾರ್ಡ್​, ಪಡಿತರ ಚೀಟಿ ಹಾಗೂ ಸಿಬ್ಬಂದಿಯೊಂದಿನ ೋಟೊ ಸಲ್ಲಿಸಬೇಕು. ಇದೆಲ್ಲ ದಿನಗಳ ಗಟ್ಟಲೇ ಕಾಯಬೇಕು. ಇಲ್ಲಿನ ಸಿಬ್ಬಂದಿ ಪ್ರಭಾವಿ, ಸ್ಥಿತಿವಂತರಿಗಾದರೆ ಬೇಗ ಅನುಮೋದನೆ ಕೊಡಿಸುತ್ತಾರೆ. ಬೇರೆಯವರಾದರೆ ಕಾಯಬೇಕು. ಇನ್ನು ಸಿಬ್ಬಂದಿಯೂ ಬೆಳಗ್ಗೆ 10ರಿಂದ ಸಂಜೆ 4ರತನಕ ಕಾರ್ಯನಿರ್ವಹಿಸುತ್ತಾರೆ ಹೊರತು, ಆನಂತರ ಲಭ್ಯವಾಗುವುದಿಲ್ಲ.
* ವೇತನಕ್ಕಾಗಿ ಸಿಬ್ಬಂದಿ ಪಟ್ಟು
ಎಂಆರ್​ಐ, ಸಿಟಿ ಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸಂಸ್ಥೆಯವರೇ ಹೊರ ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಂಡಿದ್ದು, ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಸಂಸ್ಥೆಯವರನ್ನು ಕೇಳಿದರೆ ಸರ್ಕಾರದಿಂದ ಬಿಡುಗಡೆಯಾಗಬೇಕಾಗಿರುವ ಮಾತು ಹೇಳುತ್ತಾರೆ. ಪ್ರತಿ ತಿಂಗಳು ವೇತನ ಆಗಿಲ್ಲ ಎಂದರೆ ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
* ತಲೆ ಕೆಡಿಸಿಕೊಳ್ಳದ ಆಡಳಿತ ಮಂಡಳಿ
ಉಚಿತ ಸೇವೆಯನ್ನು ನಿಲ್ಲಿಸಿ 28 ತಾಸುಗಳೆ ಕಳೆದರು ಜಿಲ್ಲಾ ಎಸ್​ಎನ್​ಆರ್​ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಲಿ, ತಾಂತ್ರಿಕ ಅಧಿಕಾರಿಗಳಾಗಲಿ ಕ್ರಮವಹಿಸಿಲ್ಲ. ಒಂದು ಕಡೆ ರೋಗಿಗಳು ಪರದಾಡುತ್ತಿದ್ದರೆ, ಮತ್ತೊಂದು ಕಡೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ ಆಸ್ಪತ್ರೆಯ ಆಡಳಿತ ಮಂಡಳಿವರು ಏನು ಸಂಬಂಧವಿಲ್ಲದಂತೆ ಮೌನಕ್ಕೆ ಒಳಗಾಗಿದ್ದರು. ಪ್ರಶ್ನೆ ಮಾಡಲು ಜನ ಮುಂದಾದಾಗ ಕಚೇರಿಯಲ್ಲಿ ಅಧಿಕಾರಿಗಳು ಲಭ್ಯವಿರಲಿಲ್ಲ.
ಕೋಟ್​...
ಬಾಕಿ ಇರುವ ಮೊತ್ತವನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು ಸ್ಪಂದನೆ ಸಿಕ್ಕಿಲ್ಲ. ನಿರ್ವಹಣೆಗೂ ಹಣದ ಕೊರತೆಯಾಗಿದ್ದು, ಸಂಸ್ಥೆಯ ಸೂಚನೆ ಮೇರೆಗೆ ಉಚಿತ ಸ್ಕಾ$ನ್​ ನಿಲ್ಲಿಸಿದ್ದು, ನಿಗಧಿಪಡಿಸಿರುವ ಹಣ ನೀಡಿದವರಿಗೆ ಸ್ಕಾ$ನ್​ ಮಾಡಲಾಗುತ್ತಿದೆ.
- ರಾಹುಲ್​, ಟಕದ ಮೇಲ್ವಾಚಾರಕ, ಕೋಲಾರ.
ಕೋಟ್​...
ಆರ್​.ಎಲ್​.ಜಾಲಪ್ಪ ಆಸ್ಪತ್ರೆಯವರೊಂದಿಗೆ
ಸುವರ್ಣ ಆರೋಗ್ಯ ಟ್ರಸ್ಟ್​ ಕಡೆಯವರಿಂದ ಹಣ ಬಾಕಿ ಉಳಿಸಿಕೊಂಡಿರುವುದರಿಂದ ಸ್ಕ್ಯಾನ್​ ಸೇವೆ ನಿಲ್ಲಿಸಿದ್ದಾರೆ. ರೋಗಿಗಳಿಗೆ ತೊಂದರೆಯಾಗದಂತೆ ಆರ್​.ಎಲ್​.ಜಾಲಪ್ಪ ಆಸ್ಪತ್ರೆ ಸಹಯೋಗದಲ್ಲಿ ಸ್ಕಾ$ನ್​ ಮಾಡಿಸಲು ಕ್ರಮವಹಿಸಿದ್ದು, ಶುಕ್ರವಾರದಿಂದ ಸೇವೆ ಲಭ್ಯವಾಗಲಿದೆ.
- ಡಾ.ಜಗದೀಶ್​, ಡಿಎಸ್​. ಎಸ್​ಎನ್​ಆರ್​ ಆಸ್ಪತ್ರೆ, ಕೋಲಾರ.
ಕೋಟ್​...
ಪತ್ನಿಯ ಹೊಟ್ಟೆ ಸ್ಕ್ಯಾನ್ಗಾಗಿ ವೈದ್ಯರು ಶಿಾರಸ್ಸು ಮಾಡಿದ್ದು, ಮೂರು ದಿನದಿಂದ ಓಡಾಡುತ್ತಿದ್ದೇನೆ. ನೆನ್ನೆ ಬಂದಿದ್ದಕ್ಕೆ ಭರಿ ಹೊಟ್ಟೆಯಲ್ಲಿ ಬರಕೇಳಿದರು. ಈಗ ಬಂದಿದ್ದು ಸ್ಕಾ$ನ್​ಗೆ ಹಣ ಕಟ್ಟಲು ಹೇಳುತ್ತಿದ್ದಾರೆ. ಸೇವೆ ಪಡೆದುಕೊಳ್ಳಲು ಹಣ ಕೊಡಬೇಕು ಎಂದರೆ ಹೇಗೆ.
- ನಾರಾಯಣಪ್ಪ, ರೋಗಿಯ ಸಂಬಂಧಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net