ಕೋಲಾರ: ಹಸುಗಳಿಗೆ ಮೇವು ತರಲು ಹೊಲಕ್ಕೆ ಹೋಗಿದ್ದ ತಾಯಿ&ಮಗು ತಾಲೂಕಿನ ಹೊಗರಿಗೊಲ್ಲಹಳ್ಳಿ ಸಮೀಪದ ಕೃಷಿ ಹೊಂಡಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
ಮಾಲಾ (35), ಚಕ್ರವರ್ತಿ (5) ಮೃತರು. ಶನಿವಾರ ಅಂಗನವಾಡಿಯಿಂದ ಮನೆಗೆ ಬಂದ ಮಗನನ್ನು ಕರೆದುಕೊಂಡು ಮಾಲಾ ಹೊಲಕ್ಕೆ ಹೋಗಿದ್ದಾರೆ. ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ರಾತ್ರಿಯೆಲ್ಲಾ ಹುಡುಕಾಡಿದರೂ ಪತ್ತೆಯಾಗಿಲ್ಲ. ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ವಿಚಾರಿಸಿದರೆ ಅಲ್ಲೂ ಸುಳಿವು ಸಿಕ್ಕಿಲ್ಲ.
ಭಾನುವಾರ ಬೆಳಗ್ಗೆ ಎದ್ದು ಹೊಲದ ಕಡೆ ಹುಡುಕಾಡುವಾಗ ತಾಯಿ ಹಾಗೂ ಮಗು ಇಬ್ಬರೂ ಹೊಲದಲ್ಲಿದ್ದ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮಾಲಾ 7 ವರ್ಷದ ಹಿಂದೆ ಮಂಜುನಾಥ್ ಎಂಬುವವರನ್ನು ಮದುವೆಯಾಗಿದ್ದು, ಪತಿ ಗಾರೆ ಕೆಲಸ ಮಾಡುತ್ತಿದ್ದಾರೆ. ಮರಣೋತ್ತರ ಪರೀೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಿದ್ದು, ಟನೆ ಸಂಬಂಧ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.