ಪ್ರಸ್ತುತ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ರಾಮನ ಹೆಸರಲ್ಲಿ ಮಂದಿರ ಕಟ್ಟಿ, ಈಗ ಲೂಟಿಯಲ್ಲಿ ತೊಡಗಿದ್ದಾರೆ. ವಾಲ್ಮೀಕಿ ಸಮುದಾಯದವರು ಸ್ವಾಭಿಮಾನಕ್ಕೆ ಬದ್ಧರಾಗಿರುವವರು. ಆಧುನಿಕ ದ್ರೋಣಾಚಾರ್ಯರು ಶಿಕ್ಷಣ, ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿದ್ದಾರೆ. ಅಂಥವರ ಮೇಲೆ ಕಣ್ಣು ಇಟ್ಟಿರಬೇಕು ಎಂದು ಏಕಲವ್ಯ, ದ್ರೋಣಾಚಾರ್ಯರ ಸನ್ನಿವೇಶದ ಉದಾಹರಣೆ ವಿವರಿಸಿದರು.