ಕೋಲಾರ: 44ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೇಟಿಕ್ಸ್ ಚಾಂಪಿಯನ್ ಷಿಪ್&-2025 ಕ್ರೀಡಾಕೂಟವನ್ನು, ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಡಿ.20, 21ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾಸ್ಡರ್ ಅಥ್ಲೆಟಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ವಿ.ಕೃಷ್ಣಾರೆಡ್ಡಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ರೀಡಾಕೂಟದಲ್ಲಿ ಒಟ್ಟು 25 ಜಿಲ್ಲೆಗಳಿಂದ 800ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲು ನೋಂದಣಿಯಾಗಿದ್ದಾರೆ ಎಂದರು.
ಮಾಸ್ಟರ್ಸ್ ಅಥ್ಲೇಟಿಕ್ಸ್ ಅಸೋಸಿಯೇಷನ್ ಅ್ ಕರ್ನಾಟಕ ಮತ್ತು ಕೋಲಾರ ಜಿಲ್ಲಾ ಮಾಸ್ಟರ್ಸ್ ಅಥ್ಲೇಟಿಕ್ಸ್ ಅಸೋಸಿಯೇಷನ್ ಸಂಯುಕ್ತಶ್ರಯದಲ್ಲಿ ಇಲ್ಲಿನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 2 ದಿನ ನಡೆಯಲಿದ್ದು, ಡಿ.20ರಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಸದ ಎಂ.ಮಲ್ಲೇಶ್ ಬಾಬು, ಡಿಸಿಪಿ ಡಿ.ದೇವರಾಜ್, ಸಿಎಂ ಮಾದ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಸ್ಪರ್ಧೆಗಳಲ್ಲಿ ಭಾಗವಹಿಸಲು ಬರುವ ಕ್ರೀಡಾಪಟುಗಳಿಗೆ ಪುರುಷರಿಗೆ ವೆಂಕಟೇಶ್ವರ ಕಲ್ಯಾಣ ಮಂಟಪ, ಮಹಿಳೆಯರಿಗೆ ಪೊಲೀಸ್ ಭವನ ಹಾಗೂ ಗಣ್ಯರಿಗೆ ಪ್ರವಾಸಿ ಮಂದಿರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಕ್ರೀಡಾ ಕೂಟದಲ್ಲೂ ನಮ್ಮ ಜಿಲ್ಲೆಯೆ ಮೊದಲ ಸ್ಥಾನಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಅಸೋಸಿಯೇಷನನ್ನು ಸ್ಥಾಪನೆ ಮಾಡಿ 8 ವರ್ಷಗಳು ಕಳೆದಿದ್ದು ಕ್ರೀಡಾ ಸ್ಪರ್ಧೆಗಳನ್ನು ಆಯೋಜನೆ ಮಾಡಿಕೊಂಡು ಬರಲಾಗಿದೆ. ಸುಮಾರು 200 ಮಂದಿ ಸದಸ್ಯರು ನೋಂದಣಿ ಪಡೆದಿದ್ದಾರೆ. ವಿವಿಧ ಹಂತಗಳಲ್ಲಿ ವಿಜೇತರಾಗಿ ಬಂದವರಿಗೆ ಅಭಿನಂಧಿಸಿ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯೂ ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಮುಂಚೂಣಿಯಲ್ಲಿದೆ. ವಿಶ್ವ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದವರು ಸರ್.ಎಂ.ವಿಶ್ವೇಶ್ವರಯ್ಯ ಅವರು ಮೊದಲಿಗರು. ಕೆಸಿ ರೆಡ್ಡಿ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ಮಾಸ್ತಿ ಅಯ್ಯಂಗಾರ್, ಡಿವಿಜಿ ರಚಿಸಿದ ಮಂಕುತಿಮ್ಮನ ಕಗ್ಗದ ಮೂಲಕ ಗುರುತಿಸಿದ್ದಾರೆ. ಕ್ರೀಡೆಯಲ್ಲಿ ಮಾರಪ್ಪ ಸೇರಿದಂತೆ ಅನೇಕರು ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಹಿರಿಯ ಕ್ರೀಡಾಪಟು ವಿ.ಮಾರಪ್ಪ ಮಾತನಾಡಿ, ಒಟ್ಟು 25 ಜಿಲ್ಲೆಯಳಿಂದ 800 ಮಂದಿ ಪಾಲ್ಗೊಳ್ಳಲಿದ್ದು ಜಿಲ್ಲೆಯಿಂದ 150 ಮಂದಿ ಭಾಗಿಯಾಗಲಿದ್ದಾರೆ. ಇಲ್ಲಿ ವಿಜೇತರಾದವರು ಕೇರಳದಲ್ಲಿ ೆಬ್ರವರಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದರು.
ಸ್ಪರ್ಧೆಯಲ್ಲಿ 100 ಮಿ, 200 ಮಿ, 400 ಮಿ, 800 ಮಿ, ಅಡಲ್ಸ್, ಐಜಂಪ್, ಶಾಟ್ ಪುಟ್, ಜಾವಲಿನ್, ಡಿಸ್ಕಸ್ ಥ್ರೋ, ಟ್ರಿಪಲ್ ಜಂಪ್ ಕ್ರೀಡೆ ನಡೆಯಲಿದ್ದು, 30ರಿಂದ 95 ವರ್ಷದ ವಯೋಮಾನದವರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಂದ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಅಸೋಸಿಯೇಷನ್ನ ಜಂಟಿ ಕಾರ್ಯದರ್ಶಿ ಪಿ.ಆಂಜನೇಯರೆಡ್ಡಿ, ಖಜಾಂಜಿ ಕೆ.ಟಿ.ಸುರೇಶ್ ಬಾಬು, ಪದಾಧಿಕಾರಿಗಳಾದ ಜಿ.ಮುನಿಕೃಷ್ಣ, ಲೋಕೇಶ್, ಡಾ.ಪಿ.ರಾಜ್ಕುಮಾರ್, ಗೌಸ್ ಖಾನ್, ಆರ್.ರವಿ ಮತಿತರರು ಹಾಜರಿದ್ದರು.