ಮದ್ದೇರಿ ಕೆರೆನೀರು ಅಶುದ್ಧ

 ಮದ್ದೇರಿ ಕೆರೆಯಲ್ಲಿ ಸಾಲಾಗಿ ಬೆಳೆದು ನಿಂತ ಜಾಲಿ ಮರಗಳು.
ಮದ್ದೇರಿ ಕೆರೆಯಲ್ಲಿ ಸಾಲಾಗಿ ಬೆಳೆದು ನಿಂತ ಜಾಲಿ ಮರಗಳು.
Published on

ಪ್ರಮುಖ ಮುಖ್ಯಾಂಶಗಳು

  • ಮದ್ದೇರಿ ಕೆರೆನೀರು ಅಶುದ್ಧ
ಕದರೀಪುರ: ಜಿಲ್ಲಾಡಳಿತ ಮತ್ತು ಸ್ಥಳಿಯ ಆಡಳಿತಗಳು ಜಲಮೂಲಗಳ ಸಂರಕ್ಷಣೆ ಹಾಗೂ ಅವುಗಳ ಪ್ರಗತಿ ಕುರಿತು ಭಾಷಣ ಮತ್ತು ಕಾಗದ ಪತ್ರದ ವ್ಯವಹಾರದಲ್ಲೇ ಕಾಲ ಕಳೆಯುತ್ತಿದ್ದು, ಕೆರೆಯ ಸ್ವರೂಪಗಳನ್ನು ಗಮನಿಸಿದರೆ ನಿಜಕ್ಕೂ ಆಡಳಿತದಲ್ಲಿರುವವರಿಗೆ ಜಲಮೂಲಗಳ ಸಂರಕ್ಷಣೆಯ ನೈತಿಕ ಅರಿವಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಹೌದು.. ಕೋಲಾರ ತಾಲೂಕು ಮದ್ದೇರಿ ಕೆರೆಯ ನೀರು ಬಣ್ಣ ಬದಲಿಸಿದ್ದು, ಕೆರೆಯಲ್ಲಿ ಜಾಲಿ ಮರಗಳು ಬೆಳೆದು ದುರ್ವಾಸನೆ ಬರುತ್ತಿದೆ. ಜತೆಗೆ ಕೆರೆಯ ಒಡಲಿಗೆ ಮದುವೆ ಮತ್ತೀತರೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್​ ಬಾಟಲ್​, ಊಟದ ತಟ್ಟೆ ಮತ್ತೀತರೆ ಪ್ಲಾಸ್ಟಿಕ್​ ವಸ್ತುಗಳನ್ನು ಸುರಿದು ಹೋಗುತ್ತಿದ್ದಾರೆ. ಜತೆಗೆ ಕೋಳಿ ತ್ಯಾಜ್ಯವೂ ಕೆರೆಯ ಸ್ವರೂಪ ಇನ್ನಿಲ್ಲದಂತೆ ಮಾಡಿದೆ.
ಮಳೆ ಬಂದರಷ್ಟೆ ಕೆರೆ ಮತ್ತು ಹಳ್ಳಕೊಳ್ಳಗಳಲ್ಲಿ ನೀರು ತುಂಬುತ್ತದೆ. ಕೆರೆ ಮತ್ತು ಹಳ್ಳಗಳಲ್ಲಿ ಸಂಗ್ರಹವಾಗಿದ್ದ ಅಲ್ಪ ಸ್ವಲ್ಪ ನೀರು ಬಿರು ಬಿಸಿಲಿನ ಹೊಡೆತಕ್ಕೆ ಆವಿಯಾಗುತ್ತಿದೆ. ತ್ಯಾಜ್ಯ, ಗಿಡ&ಗಂಟಿ ಬೆಳೆದು ಕೊಳೆತಿರುವುದರಿಂದ ನೀರಿನ ಬಣ್ಣ ಕಪ್ಪು ವರ್ಣಕ್ಕೆ ತಿರುಗಿ ಗಬ್ಬುನಾತ ಬೀರುತ್ತಿದೆ. ದನ& ಕರುಗಳು ಕುಡಿಯಲು ಸಹ ಯೋಗ್ಯವಲ್ಲದಂತಾಗಿದೆ.ಇದೇ ಕೆರೆಯಲ್ಲಿ ಪ್ರಾಕೃತಿಕವಾಗಿ ದೊರೆಯುವ ನೀರು ಒಂದು ಕಾಲದಲ್ಲಿ ಯಥೇಚ್ಛವಾಗಿದ್ದಾಗ ಕೃಷಿಗೆ ಬಳಕೆ ಮಾಡುತ್ತಿದ್ದರು.
ರಾಜಕಾಲುವೆ ಒತ್ತುವರಿ ಅಗತ್ಯ: ಕೋಲಾರ ಜಿಲ್ಲೆ ಮೊದಲೇ ಬರಡು ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಕೃಷಿ ಭೂಮಿಯ ಹೆಚ್ಚಳ, ಏರುತ್ತಿರುವ ಜನಸಂಖ್ಯೆ ನಿರ್ವಹಣೆ ಸರಿದೂಗಿಸಲು ನೀರು ಒದಗಿಸುವ ಕೆಲಸ ನಿರಂತರವಾಗಿರಬೇಕಿದೆ. ಮಳೆಗಾಲದಲ್ಲಿ ಸುತ್ತಮುತ್ತಲಿನ ನೀರು ಕೆರೆಗಳಿಗೆ ಸುಲಲಿತವಾಗಿ ಹರಿಯುವಂತೆ ನೂರಾರು ವರ್ಷಗಳ ಹಿಂದೆ ರಾಜಕಾಲುವೆ ನಿರ್ಮಿಸಿಕೊಂಡು ಬರಲಾಗಿದೆ. ಅಂದಿನ ಕಾಲದ ನಿಯಮಗಳನ್ನು ಧಿಕ್ಕರಿಸಿರುವ ಇಂದಿನ ನಾಗರಿಕ ಸಮಾಜ ರಾಜಕಾಲುವೆ ಮತ್ತು ಕೆರೆಗಳನ್ನು ಅತಿಕ್ರಮಣ ಮಾಡಿ ನೀರು ಸಂಗ್ರಹವಾಗಲು ಜಾಗವಿಲ್ಲದಂತೆ ಮಾಡಿರುವುದರಿಂದ ಬರ ಪರಿಸ್ಥಿತಿ ಹೆಚ್ಚಾಗಿದೆ. ಇನ್ನು ಗ್ರಾಮಗಳಲ್ಲಿ ನಿರ್ಮಿಸಲಾದ ಊರ ಕೆರೆಗಳು, ಪುಷ್ಕರಣೆಗಳು ಜನರ ಉಪೇೆಯಿಂದ ಕೊಳಚೆ ಗುಂಡಿಗಳಾಗಿವೆ.
ಸಮಾರಂಭದ ತ್ಯಾಜ್ಯ ಕೆರೆ ಒಡಲಿಗೆ: ಸ್ಥಳೀಯರು ಶುಭ&ಸಮಾರಂಭ ಮಾಡಿದ ನಂತರ ಕಾರ್ಯಕ್ರಮದಲ್ಲಿ ಉತ್ಪತ್ತಿಯಾದ ಪ್ಲಾಸ್ಟಿಕ್​ ಬಾಟಲ್​, ಪ್ಲಾಸ್ಟಿಕ್​ ಲೋಟ, ತಟ್ಟೆ, ಊಟದ ಎಲೆ, ಟೇಬಲ್​ ಪೇಪರ್​ ರೋಲ್​, ನೀರಿನ ಬಾಟಲ್​ ಸೇರಿ ಅನೇಕ ತ್ಯಾಜ್ಯ ಕೆರೆಯಲ್ಲಿ ರಾಶಿ ರಾಶಿಯಾಗಿ ತಂದು ಬಿಸಾಡಿದ್ದು, ಕೆರೆ ನೀರು ಮಲೀನವಾಗಿ ದುರ್ವಾಸನೆ ಬೀರುತ್ತಿದೆ. ರಣೆ ಮಾಡುವವರೇ ಈ ರೀತಿ ಕಸ ತಂದು ಕೆರೆಗೆ ಎಸೆದರೆ ಸಂರಣೆ ಮಾಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಸಾರ್ವಜನಿಕರೂ ಸಹ ಇದು ನಮ್ಮ ಕೆರೆ ಎಂಬ ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ.
ಏರಿ ಮೇಲಿನ ರಸ್ತೆ ಹಾಳು: ವೇಮಗಲ್​ ನಿಂದ ಮದ್ದೇರಿ ಮಾರ್ಗವಾಗಿ ಹೊಸಕೋಟೆ &ಚಿಂತಾಮಣಿ ಮುಖ್ಯರಸ್ತೆ & ಹೊಸಹಳ್ಳಿವರೆಗೂ 5 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಾಣವಾಗಿದೆ. ಆದರೆ, ನಿರ್ವಹಣೆ ಇಲ್ಲದೆ ಕೆರೆಯ ಕಟ್ಟೆ ಮೇಲೆ ಹದಗೆಟ್ಟಿದ್ದು, ಅಪಘಾತಗಳಿಗೆ ಆಹ್ವಾನಿಸುತ್ತಿದೆ. ವೇಮಗಲ್​ ಹಾಗೂ ನರಸಾಪುರ ಭಾಗದಲ್ಲಿ ಕೈಗಾರಿಕೆಗಳು ಅತಿ ವೇಗದಲ್ಲಿ ತಲೆಯೆತ್ತುತ್ತಿದ್ದು, ನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ರಸ್ತೆ ಕಳಪೆ ಕಾಮಗಾರಿಯಿಂದಾಗಿ ಬಿರುಕು ಬಿಟ್ಟು ಗುಂಡಿ ಬಿದ್ದಿವೆ. ಲೋಕೋಪಯೋಗಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈಗಾಗಲೇ ಮದ್ದೇರಿ ಕೆರೆಯಲ್ಲಿ ನೀರಿನಮಟ್ಟ ಕಡಿಮೆಯಾಗಿದ್ದು, ಹಳ್ಳಗಳಲ್ಲಿ ನೀರು ಖಾಲಿಯಾಗುತ್ತಿದ್ದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಗಳಿಗೆ ಜಾಲಿ, ಸದರಿ ಸಮಸ್ಯೆ ಕುರಿತು ಪತ್ರ ಬರೆದು ಅನುಮತಿ ಪಡೆದು ತೆರುವು ಕಾರ್ಯ ಮಾಡಲಾಗುವುದು. ಅನೈರ್ಮಲ್ಯ ಸೃಷ್ಟಿಸಿರುವವರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಟ್ಟೆ ಮೇಲಿನಿ ರಸ್ತೆ ಅವ್ಯವಸ್ಥೆ ಕುರಿತು ಗುತ್ತಿಗೆದಾರರಿಗೆ ರಸ್ತೆ ನಿರ್ವಹಣೆ ಮಾಡಲು ಸೂಚನೆ ನೀಡುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು.
-ಪಿ.ಬಿ.ರೇವಣ್ಣ,ಮದ್ದೇರಿ ಗ್ರಾಮ ಪಂಚಾಯಿತಿ ಪಿಡಿಒ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net