ಕೋಮುಲ್‌ನಲ್ಲಿ ಲೋಕಾಯುಕ್ತ ತಲಾಶ್

ಕೋಮುಲ್‌ ಕಚೇರಿ
ಕೋಮುಲ್‌ ಕಚೇರಿ
Published on
ಕಿರುವಾರ ಎಸ್.ಸುದರ್ಶನ್, ಕೋಲಾರ
ಕೋಮುಲ್‌ನಲ್ಲಿ 2023ರಲ್ಲಿ ಆಗಿರುವ ವಿವಿಧ ಹುದ್ದೆಗಳ ನೇಮಕಾತಿ, ಟೆಂಡರ್‌ಗಳಲ್ಲಿ ನಡೆದಿದೆ ಎನ್ನಲಾದ ಹಗರಣ ಕುರಿತು ಆರೋಪ ಕೇಳಿ ಬಂದಿದ್ದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಮೂರು ದಿನಗಳಿಂದ ಕೋಮುಲ್ ಕಚೇರಿಯಲ್ಲಿ ಕಡತ ಪರಿಶೀಲಿಸುತ್ತಿರುವುದು ತನಿಖೆಯಲ್ಲಿ ನಡೆದ ಮಹತ್ವದ ಬೆಳವಣಿಗೆ.
ಕೋಮುಲ್ ವಿಭಜನೆಯಾಗುವ ಮುನ್ನ 2023ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಎಂಎಫ್ ಡೇರಿ ನಿರ್ಮಾಣ ಟೆಂಡರ್, ಸೋಲಾರ್ ಘಟಕ ಟೆಂಡರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಸಮೀಪ ಐಸ್ ಕ್ರಿಮ್  ಘಟಕ ನಿರ್ಮಾಣಕ್ಕೆ ಕರೆದಿದ್ದ ಟೆಂಡರ್‌ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ವಕೀಲ ಕೆ.ಪಿ.ವೆಂಕಟಚಲಪತಿ ಹಾಗೂ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಗೊಲ್ಲಗಾನಹಳ್ಳಿ ನಾಗರಾಜ್ ಅವರು 2025ರ ಮೇ 9ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿ, ಸುಮಾರು 512 ಕೋಟಿ ರೂ. ಹಗರಣ ನಡೆದಿದೆ ಎಂದು ಆರೋಪಿಸಿದ್ದರು.
ದೂರು ದಾಖಲಿಸಿಕೊಂಡಿರುವ ರಾಜ್ಯ ಲೋಕಾಯುಕ್ತ ಅಧಿಕಾರಿಗಳು ಏ.22, 23 ಹಾಗೂ 24ರಂದು ಒಕ್ಕೂಟದ ಕಚೇರಿ, ಸೋಲಾರ್ ಘಟಕ, ಚಿಂತಾಮಣಿಯ ಎನ್‌ಶ್ರೀನ್ ಘಟಕ, ಚಿಕ್ಕಬಳ್ಳಾಪುರದ ಮೇಗಾ ಡೇರಿಗೆ ಭೇಟಿ ನೀಡಿ ಕಡತಗಳ ಶೋಧ ನಡೆಸಿದ್ದಾರೆ. ಪುರಾದ ಕಡತಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸದ್ದು ಮಾಡಿದ್ದ ನೇಮಕಾತಿ ಪ್ರಕ್ರಿಯೆ
ಕೆಲಸ ನೀಡಲು ಅಭ್ಯರ್ಥಿಗಳಿಂದ ಲಕ್ಷಗಟ್ಟಲೆ ಹಣ ವಸೂಲಿ ಮಾಡಿರುವುದು ಗಂಭೀರ ಆರೋಪ ಕೇಳಿ ಬಂದಿತ್ತು. ಜತೆಗೆ ಅಭ್ಯರ್ಥಿಗೆ ಕೆಲಸ  ಕೊಡುವಂತೆ ಶಿಫಾರಸು ಮಾಡಿದ್ದ ಆಡಳಿತ ಪಕ್ಷದ ಸಚಿವರು, ಶಾಸಕರು ಶಿಫಾರಸ್ಸು ಮಾಡಿದ್ದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಶಾಸಕರು ಹಾಗೂ ಆಂದಿನ ಒಕ್ಕೂಟದ ನಿರ್ದೇಶಕರ ಹೆಸರು ನಮೂದು ಆಗಿದ್ದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿ ವಿಚಾರಣೆ ನಡೆಸಿದ್ದರು.
ಹೆಚ್ಚುವರಿ ಬಾಡಿಗೆ ಪಾವತಿ
ಹೊಸಕೋಟೆ ಸಮೀಪ ಕೋಮುಲ್ ನಿರ್ದೇಶಕರೊಬ್ಬರ ಅಪಾರ್ಟ್‌ಮೆಂಟ್ ಇದ್ದು, ಮಾರ್ಕೆಟಿಂಗ್ ಕಚೇರಿಗಾಗಿ ಬಾಡಿಗೆಗೆ ಪಡೆಯಲಾಗಿದೆ. ಆದರೆ, ಅದಕ್ಕೆ ಪ್ರತಿ ತಿಂಗಳು ಬಾಡಿಗೆಗೆ 55 ಸಾವಿರ ರೂ. ಡ್ರಾ ಮಾಡಲಾಗುತ್ತಿದೆ. ಕೋಲಾರದಿಂದ ಬೆಂಗಳೂರಿಗೆ 65 ಕಿ.ಮೀ ದೂರವಿದ್ದು, ನಿರ್ದೇಶಕರಿಗೆ, ಅಧಿಕಾರಿಗಳು ಪ್ರಯಾಣಿಸುವಾಗ ಮಾರ್ಗ ಮಧ್ಯ, ವಿಕಾಂತಿ ಪಡೆಯಲು ಹೊಸಕೋಟೆ ಸಮೀಪ ಅತಿಥಿಗೃಹಕ್ಕಾಗಿ ಮೂರು ಬೆಡ್ ರೂಂ ಮನೆ ಬಾಡಿಗೆ ಪಡೆಯಲಾಗಿದೆ. ಅತಿಥಿ ಗೃಹ ನಿರ್ವಹಣೆ ಹಾಗೂ ಬಾಡಿಗೆ ಕಟ್ಟದ್ದಕ್ಕೆ ಹೆಚ್ಚುವರಿ ಹಣ ಒಕ್ಕೂಟದಿಂದ ಪಾವತಿ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಹೊಸಕೋಟೆ ಬಾಡಿಗೆ ಇಟ್ಟುಕೊಂಡು ಬಾಡಿಗೆ ಇರ ಇದೆಯೇ ಎಂಬ ಅನುಮಾನ ಕಾಡತೊಡಗಿದೆ. ಜತೆಗೆ ಒಕ್ಕೂಟದ ದತ್ತಿಯಿಂದ ಸುಮಾರು 20 ಲಕ್ಷ ರೂ. ಡ್ರಾ ಮಾಡಿರುವುದು, ಕೋಮುಲ್ ನಿರ್ದೇಶಕರ ಅವಧಿ ಮುಗಿದು ಬೊಕ್ಕಸ್ಖಾಲು ಗೋಲ್ ಕಾಯಿನ್ ಖರೀದಿಗೆ 13 ಲಕ್ಷ ರೂ. ವೆಚ್ಚ ಮಾಡಿದ್ದು, ಇದಲ್ಲದರೂ ಕೆನರಾ ಸಂಸ್ಥೆಗಳ ಹನಿಯಲ್ಲಿ ಮೆಲುಕುಕ್ಕೆ ಕಂದು ಬಂದಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಕೆಲ ಪ್ರಕರಣ ಒಕ್ಕೂಟದ ವಿರುದ್ಧ ಸಲ್ಲಿಸಿರುವ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಒಕ್ಕೂಟಕ್ಕೆ ಆಗಮಿಸಿ ಮಾಹಿತಿ ಕೇಳಿದ್ದು, ಅದರಂತೆ ಮಾಹಿತಿ ಒದಗಿಸಲಾಗಿದೆ.
- ಗೋಪಾಲಮೂರ್ತಿ, ವ್ಯವಸ್ಥಾಪಕ ನಿರ್ದೇಶಕ
ಆರೋಪಗಳೇನು..?
- ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಂದ 20 ರಿಂದ 30 ಲಕ್ಷ ರೂ. ವಸೂಲಿ
- ಪರೀಕ್ಷೆ ನಡೆಸಿದ ವೇಳೆ ಅಭ್ಯರ್ಥಿಗಳ ಓಎಂಆರ್ ಪ್ರತಿ ಅದಲುಬದಲು ಮಾಡಿರುವುದು
- ಆಯ್ಕೆ ಪ್ರಕ್ರಿಯೆಗೆ ಹಿಂದಾದ ವರ್ಗಗಳ ಅಧಿಕಾರಿಗಳನ್ನು ಆಹ್ವಾನಿಸಿರುವುದು
- ಹೋದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಿಂಧುತ್ವ ಪತ್ರ ನೀಡಿದ್ದರೂ ಸಹ ನೇಮಕಾತಿ ಮಾಡಿಕೊಂಡಿರುವುದು
- ಎನ್ ಶ್ರೀನ್ ಘಟಕ ಕಾಮಗಾರಿ ಪೂರ್ಣಗೊಳ್ಳದೆ ಸಲಕರಣೆ ಖರೀದಿಗೆ ಮುಂಗಡವಾಗಿ 9 ಕೋಟಿ ರೂ. ಮಂಜೂರು ಮಾಡಿರುವುದು
- ಸೋಲಾರ್ ಘಟಕದಲ್ಲಿ ಅಳವಡಿಸಿರುವ ಸಲಕರಣೆಗಳಿಗೆ ನಿಗದಿತ ದರಕ್ಕಿಂತ ಹೆಚ್ಚು ದರ ಕೊಟ್ಟು ಖರೀದಿ ಮಾಡಿರುವುದು.
- ಎಂಎಫ್ ಗೋಲ್ಡ್ ಡೇರಿ ಟೆಂಡರ್‌ನಲ್ಲಿ ಅಕ್ರಮ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net