ಕೋಲಾರ: ದಕ್ಷಿಣ ಕಾಶಿ ಎಂದೇ ಖ್ಯಾತವಾಗಿರುವ ನಗರದಲ್ಲಿ ಅಂತರಗಂಗೆಯಲ್ಲಿ ಬುಧವಾರ ರಾತ್ರಿ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವ ಅದ್ದೂರಿಯಾಗಿ ನಡೆಯಿತು.
ಕೆಎಸ್ಆರ್ಪಿ ಪೇದೆ ಗೋಪಾಲ್ ನೇತೃತ್ವದಲ್ಲಿ ಅಂತರಗಂಗೆಯಲ್ಲಿ ಕಳೆದ 20 ವರ್ಷಗಳಿಂದಲೂ ಅದ್ದೂರಿಯಾಗಿ ನಡೆಯುತ್ತಿರುವ ಶಿವ ಲಕ್ಷ ದೀಪೋತ್ಸವವನ್ನು ಕಾಶೀ ವಿಶ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಡೆಸಿಕೊಂಡು ಬರಲಾಗುತ್ತಿದೆ. ರಾತ್ರಿ ಚಳಿಯನ್ನು ಲೆಕ್ಕಿಸದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ, ದೇವರ ದರ್ಶನ ಪಡೆದು ಹರಿಕೆ ತೀರಿಸಿಕೊಂಡಿರು.
ತಪ್ಪಲಿನಿಂದ ಮೇಲಕ್ಕೆ ಹತ್ತುವಾಗಿ ಭಕ್ತರು ಶಿವನ ನಾಮಸ್ಮರಣೆ ಮಾಡಿಕೊಂಡು ಬಂದಿತು. ಕ್ಷೇತ್ರವನ್ನು ಒಂದು ಸಾವಿರ ಕೆಜಿ ಎಣ್ಣೆ ಹಾಕಿ ಲಕ್ಷಾಂತರ ಹಣತೆಗಳಿಂದ ಬೆಳಗಿಸಿದ್ದು, ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಪ್ರತಿ ವರ್ಷವೂ ಕಾಶಿ ವಿಶ್ವೇಶ್ವರಸ್ವಾಮಿಗೆ ಹೂವಿನ ಅಲಂಕಾರ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಇಡೀ ಗರ್ಭಗುಡಿಯನ್ನು ಕೈಲಾಸ, ಹಿಮ ಪರ್ವತದಂತೆ ಅಲಂಕರಿಸಲಾಗಿದ್ದು, ಗೌರಿಶಂಕರ ಶಿಖರದಲ್ಲಿ ಶಿವನು ಕುಳಿತಂತೆ ಮಾಡಲಾಗಿತ್ತು. ಜನತೆ ಶ್ರದ್ದಾಭಕ್ತಿಗಳಿಂದ ನಮಿಸಿ ಸಂಭ್ರಮಿಸಿದರು.
ಸಂಜೆ ಆರು ಗಂಟೆಯಿಂದಲೂ ಅಂತರಂಗೆ ಬೆಟ್ಟದತ್ತ ತೆರಳಿದ ಭಕ್ತರನ್ನು ಪೊಲೀಸರು ನಿಯಂತ್ರಿಸಿದರು. ಶಿವ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡ ಎಲ್ಲಾ ಭಕ್ತಾಗಳಿಗೆ ವಿವಿಧ ಸಂ ಸಂಸ್ಥೆಗಳಿಂದ ಪ್ರಸಾದ ವಿನಿಯೋಗಿ ನಡೆಯಿತು.
ಅರ್ಚಕರಾದ ಮಂಜುನಾಥ ದೀಕ್ಷಿತ್, ಸತ್ಯಸೋಮಶಂಕರ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾಕೈಂಕರ್ಯಗಳು ನಡೆದವು.