ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಕೋಲಾರವನ್ನು ಜೆಡಿಎಸ್‌ಗೆ ನೀಡಲಾಗಿತ್ತು. ಸಂಸದರಾಗಿದ್ದ ಎಸ್. ಮುನಿಸ್ವಾಮಿ ಬದಲು ಮಲ್ಲೇಶ್‌ಬಾಬುಗೆ ಅವಕಾಶ ನೀಡಲಾಗಿತ್ತು. ಆದರೂ ಎಸ್.ಮುನಿಸ್ವಾಮಿ ಪಕ್ಷದ ಅಭ್ಯರ್ಥಿಯಂತೆ ಕೆಲಸ ಮಾಡಿ ಮಲ್ಲೇಶ್ ಬಾಬು ಗೆಲುವಿಗೆ ಕಾರಣರಾದರು. ಆದರೆ, ಸಂಸದರು 'ಮದುವೆ, ಸಮಾರಂಭಗಳಿಗೆ ಹೋಗಿಹಾರ ಹಾಕಿಸಿಕೊಳ್ಳುವುದಕ್ಕೆ ಸೀಮಿತರಾಗಿದ್ದಾರೆ' ಎಂಬ ಟೀಕೆ ಕೇಳಿಬರುತ್ತಿವೆ.