ರೈತರು ಭೂ ಮಂಜೂರಾತಿ ಸಮಿತಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಗಳಲ್ಲಿ ವಿವಿಧ ಹೆಸರಿನಲ್ಲಿ ಸಹಿ ಮಾಡಿರುವ ವ್ಯಕ್ತಿ ಒಬ್ಬರೇ ಆಗಿದ್ದಾರೆ. ಸಮಿತಿಯಿಂದ ಮಂಜೂರಾತಿ ಪಡೆಯುವ ಹಿಂದೆ ಬೆಂಗಳೂರಿನ ಉದ್ಯಮಿಗಳು, ಗುತ್ತಿಗೆದಾರರು ಹಾಗೂ ಪ್ರಭಾವಿ ರಾಜಕಾರಣಿಗಳು ಇದ್ದು, ಭೂ ದಾಖಲೆಗಳನ್ನೂ ಸೃಷ್ಟಿಸಿಕೊಂಡಿದ್ದಾರೆ. ಜತೆಗೆ ಬಹುತೇಕ ರೈತರಿಂದ ಈಗಾಗಲೇ ಅಗ್ರಿಮೆಂಟ್ ಮಾಡಿಸಿಕೊಂಡಿದ್ದಾರೆ. ಅರ್ಜಿಗಳಿಗೆ ಸಹಿ ಹಾಕಿರುವ ಪತ್ರಗಳನ್ನು ಎಸ್‌ಎ್ಎಲ್‌ಗೆ ಕಳುಹಿಸಿಕೊಟ್ಟು ಸತ್ಯಾಸತ್ಯತೆ ಬೆಳಕಿಗೆ ತರಬೇಕಿದ್ದು, ಆ ಮೂಲಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಮಾಲೂರು ತಹಸೀಲ್ದಾರ್ ರೂಪಾ ಅವರಿಗೆ ದೂರವಾಣಿ ಕರೆ ಮಾಡಿದರೂ, ಸ್ವೀಕರಿಸಿಲ್ಲ.