ಅಕ್ರಮ ಮರಳು ಅಡ್ಡೆ ಮೇಲೆ ಎಎಸ್ಪಿ ದಾಳಿ | Sand

ಸ್ಥಳದಲ್ಲಿದ್ದವರು ವಾಹನಗಳ ಸಮೇತ ಪರಾರಿಯಾಗಲು ಯತ್ನಿಸಿದ್ದು, ವಾಹನಗಳನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
sand mafia
ಕೌಂಡಿನ್ಯ ನದಿ ವ್ಯಾಪ್ತಿಯ ವಾಣಿಕ್ ಷಾ ಕೆರೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿರುವುದು. sand mafia
Published on: 
  • ಜೆಸಿಬಿ, ಟ್ರ್ಯಾಕ್ಟರ್, ಬೈಕ್ ವಶ ಕತ್ತಲಲ್ಲೂ ವಾಹನಗಳನ್ನು ಬೆನ್ನಟ್ಟಿ ತಡೆದ ಅಧಿಕಾರಿ

ಮುಳಬಾಗಿಲು: ತಾಲೂಕಿನ ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯ ನಗವಾರ ಗ್ರಾಮದ ಸಮೀಪ ಕೌಂಡಿನ್ಯ ನದಿ ವ್ಯಾಪ್ತಿಯ ವಾಣಿಕ್ ಷಾ ಕೆರೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಿ, ಫಿಲ್ಟರ್ ವಾಡುತ್ತಿದ್ದ ದಂಧೆಕೋರರ ವಿರುದ್ಧ ಮುಳಬಾಗಿಲು ಉಪವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮನಿಷಾ ಮನೋಹಿ ಗುರುವಾರ ರಾತ್ರಿ ದಾಳಿ ನಡೆಸಿ ಜೆಸಿಬಿ, ಟ್ರ್ಯಾಕ್ಟರ್, ಬೈಕ್ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಮರಳು ದಂಧೆಯ ಖಚಿತ ವಾಹಿತಿ ಮೇರೆಗೆ ದಾಳಿ ನಡೆಸಿದಾಗ, ಸ್ಥಳದಲ್ಲಿದ್ದವರು ವಾಹನಗಳ ಸಮೇತ ಪರಾರಿಯಾಗಲು ಯತ್ನಿಸಿದ್ದು, ವಾಹನಗಳನ್ನು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.