ಕೋಲಾರ: ಹಿಂದೂ ಸಮಾಜೋತ್ಸವ ಸಮಿತಿಯಿಂದ ನಗರದಲ್ಲಿ ಜ.31ರಂದು ಹಮ್ಮಿಕೊಳ್ಳಲಾಗಿರುವ, ಹಿಂದೂ ಸಮಾಜೋತ್ಸವ ಸಮಾವೇಶದ ಅಂಗವಾಗಿ, ಸಾವಿರಾರು ಮಂದಿ ಬೈಕ್ ರ್ಯಾಲಿ ನಡೆಸಿದರು.
ನಗರದ ಜೂನಿಯನ್ ಕಾಲೇಜು ಮೈದಾನದಿಂದ ಶುರುವಾರ ಬೈಕ್ ರ್ಯಾಲಿಯು ಮೆಕ್ಕೆ ವೃತ್ತ, ನಲ್ಲ ಗಂಮ್ಮ ದೇವಿವಾಲಯ ವೃತ್ತ, ಕಾಳಮ್ಮದೇವಿ ರಸ್ತೆ, ಹೊಸ ಬಸ್ ನಿಲ್ದಾಣ, ಶಾರದ ಚಿತ್ರಮಂದಿರ, ದೊಡ್ಡಪೇಟೆ ರಸ್ತೆ, ಚಂಪಕ್ ವೃತ್ತ, ಎಂಜಿ ರಸ್ತೆ ಮೂಲಕ ಸಾಗಿ ಮೈದಾನದ ಬೀಲಿ ಅಂತ್ಯಗೊಂಡಿತು.
ಮೆರವಣಿಯ ಉದ್ದಕ್ಕೂ ಮುಖಂಡರು ಹಿಂದೂ ಸಮಾಜೋತ್ಸವದಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವಂತೆ ಕೋರಿದರು.
ಮುಖ್ಯ ರಸ್ತೆಗಳಲ್ಲಿ ಸಮಾಜೋತ್ಸವದ ದ್ವಾರ, ಬಸ್ ನಿಲ್ದಾಣ, ಟೇಕಲ್ ರಸ್ತೆ, ಡೂಂ ಲೈಟ್ ವೃತ್ತ ಸೇರಿದಂತೆ ವಿವಿಧೆಡೆ ಕೇಸರಿ ತೋರಣ ಕಟ್ಟಲಾಗಿದ್ದು, ಸಮಾವೇಶಕ್ಕೆ ಸ್ವಾಗತಿಸುತ್ತಿವೆ. ಇನ್ನು ಸಮಾವೇಶದ ಸ್ವಯಂ ಸೇವಕರು ಮನೆಮನೆಗೆ, ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚುತ್ತಿದ್ದಾರೆ.
ಸಮಾಜೋತ್ಸವ ಸಮಿತಿಯ ಸಂಚಾಲಕ್ ಡಾ.ಜನಾರ್ಧನ್ ಮಾತನಾಡಿ, ಜ.31ರಂದು ಮಧ್ಯಾಹ್ನ 2.30ಕ್ಕೆ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶೋಭಾ ಯಾತ್ರೆ ನಡೆಯಲಿದೆ. ಇದರಲ್ಲಿ ಸಾವಿವಾರು ಸಂಖ್ಯೆಯಲ್ಲಿ ಹಿಂದೂ ಮುಖಂಡರು ಪಾಲ್ಗೊಳ್ಳಬೇಕು ಎಂದು ಕೋರಿದರು.
ರ್ಯಾಲಿಯಲ್ಲಿ ಪಾಲ್ಗೊಂಡಿರುವವರು ಸಮಾವೇಶದ ಉದ್ದೇಶ ಕುರಿತು ಜಾಗೃತಿ ಮೂಡಿಸಬೇಕು. ಸಾವಿರಾರು ಮಂದಿ ರ್ಯಾಲಿ ಪಾಲ್ಗೊಂಡಿದ್ದು ಒಬ್ಬರು ಕನಿಷ್ಠ 10 ಮಂದಿಯನ್ನು ಕರೆ ತರುವ ಮೂಲಕ ಸುಮಾರು 50 ಸಾವಿರ ಜನರನ್ನು ಸೇರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.