ಕೋಲಾರ ಜಿಲ್ಲೆಯಾದ್ಯಂತ ಮಂಗಳವಾರ ಪ್ರಾರಂಭವಾದ ಎಸ್ಐಆರ್ ಅಭಿಯಾನದ ಕುರಿತು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಪಿಸಿಹಳ್ಳಿ ನಗರಸಭೆ ಮಾಜಿ ಸದಸ್ಯ ರಾಕೇಶ್ ಮನೆಯ ಪರಿಷ್ಕರಣೆ ಪರಿಶೀಲಿಸಿದರು.
Published on:
Copied
Follow Us
ಕೋಲಾರ: ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವು ಮಂಗಳವಾರದಿಂದ ಶುರುವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪರಿಷ್ಕರಣಾ ಅಭಿಯಾನ ಪ್ರಾರಂಭವಾದದಿನ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಖುದ್ದಾಗಿ ಮತದಾರರ ಮನೆಗೆ ಭೇಟಿ ನೀಡಿ ಫಾಮ್ರ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಎಂ.ಆರ್.ರವಿ, ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆಗಾಗಿ ಪರಿಷ್ಕರಣೆ ಅತ್ಯಂತ ಮಹತ್ವದ್ದಾಗಿದೆ. ಬಿಎಲ್ಒಗಳು ಸಾರ್ವಜನಿರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮತದಾರರು ತಮ್ಮ ವಿವರಗಳನ್ನು ನಮೂನೆಗಳಲ್ಲಿ ಸರಿಯಾಗಿ ಭರ್ತಿ ಮಾಡಬೇಕು, ಗೊಂದಲಕ್ಕೆ ಒಳಗಾಗದೆ ಸ್ಪಷ್ಟವಾಗಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.