ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಬದುಕೇ ನಾಶ

ಕೋಲಾರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ರಚನೆಯ 'ಬಿತ್ತನೆ' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಸಾಹಿತಿ ಸಾಹಿತಿ ರಘುನಾಥ ಚ.ಹ ಉದ್ಘಾಟಿಸಿದರು. ಪರಿಸರ ಲೇಖಕ ಎಚ್.ಎ.ಪುರುಷೋತ್ತಮ, ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ಸ.ರಘುನಾಥ ಇದ್ದರು.
ಕೋಲಾರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ರಚನೆಯ 'ಬಿತ್ತನೆ' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಸಾಹಿತಿ ಸಾಹಿತಿ ರಘುನಾಥ ಚ.ಹ ಉದ್ಘಾಟಿಸಿದರು. ಪರಿಸರ ಲೇಖಕ ಎಚ್.ಎ.ಪುರುಷೋತ್ತಮ, ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ಸ.ರಘುನಾಥ ಇದ್ದರು.
Published on
ಕೋಲಾರ: ಮಕ್ಕಳ ಕೈಗೆ ಪುಸ್ತಕ ಕೊಟ್ಟು ಅವರ ಬದುಕಿಗೆ ನೆಮ್ಮದಿ ಕಟ್ಟಿಕೊಡಬೇಕಿದೆ. ಆದರೆ ಈಗಿನ ದಿನಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟಿದ್ದು ದುಷ್ಪರಿಣಾಮ ಬೀರುತ್ತಿದೆ ಎಂದು ಸಾಹಿತಿ ರಘುನಾಥ ಚ.ಹ ಕಳವಳ ವ್ಯಕ್ತಪಡಿಸಿದರು.
ನಗರದ ಚಿನ್ಮಯ ವಿದ್ಯಾಲಯದಲ್ಲಿ ಮೊರಸುನಾಡು ಪ್ರಕಾಶನ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ರಚನೆಯ, ಸ.ರಘುನಾಥ್ ಸಂಪಾದನೆಯ 'ಬಿತ್ತನೆ' ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಇವತ್ತಿನ ಮಕ್ಕಳೇ ನಾಳಿನ ಸಾಹಿತ್ಯದ ಊರುಗೋಲು. ಆದರೆ, ಅವರನ್ನು ಪ್ರೋತ್ಸಾಹಿಸುವ ಯಾವುದೇ ಚಟುವಟಿಕೆ ನಡೆಯುತ್ತಿಲ್ಲ. ಇಂಥ ನಿರ್ಲಕ್ಷ್ಯಗಳ ನಡುವೆ 32 ಮಕ್ಕಳನ್ನು ಒಂದು ಕಡೆ ಸೇರಿಸಿ ಸಾಹಿತ್ಯದ ಪಾಠ ಮಾಡುತ್ತಿರುವ ಸ.ರಘುನಾಥ ಮೇಷ್ಟು ಕೆಲಸ ಅಭಿನಂದನಾರ್ಹ. ಎದೆಗೆ ಹೊಸ ಪದ ಹಾಕುವುದು ಸಹ ಬಿತ್ತನೆ. ಇಲ್ಲಿ ಮೇಷ್ಟ್ರು ಮೂಲಕ ಸಾಹಿತ್ಯದ ಬಿತ್ತನೆ ಕೆಲಸ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆಯುವ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ವೃದ್ಧರೇ ಹೆಚ್ಚಿರುತ್ತಾರೆ. ಕನ್ನಡ ಸಾಹಿತ್ಯಕ್ಕೆ ವೃದ್ದಾಪ್ಯ ಆವರಿಸಿಕೊಂಡಿದೆ ಎಂದರು.
ಚಿಣ್ಣರ ಸಾಹಿತ್ಯ ವಿವಿ ರಚನೆಯಾಗಲಿ
ಕನ್ನಡದ ಕೆಲಸ ಮಾಡಲು ರಾಜ್ಯದಲ್ಲಿ ಹಲವು ಅಕಾಡೆಮಿ, ವಿಶ್ವವಿದ್ಯಾಲಯ, ಸಂಸ್ಥೆಗಳು ಇವೆ. ಅವುಗಳಿಗೆ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತದೆ. ಆದರೆ, ಅವು ನಿಜವಾಗಿಯೂ ಕನ್ನಡ ಕಟ್ಟುವ, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸ ಮಾಡುತ್ತಿವೆಯೇ ಎಂದು ಸಾಹಿತಿ ರಘುನಾಥ ಚ.ಹ ಹೇಳಿದರು.
ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ, ಸಾಹಿತ್ಯದ ಪಾಠ ಮಾಡುವ ಅಕಾಡೆಮಿ, ವಿಶ್ವವಿದ್ಯಾಲಯ ಸ್ಥಾಪಿಸಬೇಕ. ಆದರೆ, ಅಂಥ ಕೆಲಸ ನಡೆಯದಿರುವುದು ನಿರಾಸೆ ಮೂಡಿಸುತ್ತಿದೆ ಎಂದು ವಿಚಾದಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ತಾರಾ ಡಾ.ವೆಂಕಟಪ್ಪ, ಮಕ್ಕಳಲ್ಲಿ ಸುಪ್ತವಾಗಿರುವ ಸಾಹಿತ್ಯ ಉತ್ತೇಜಿಸುವ ಕೆಲಸ ನಡೆಯಬೇಕು. ಮಕ್ಕಳೇ ರಚಿಸಿರುವ ಕವಿತೆ ಹಾಗೂ ರೇಖಾಚಿತ್ರ ಸೊಗಸಾಗಿ ಮೂಡಿಬಂದಿವೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ ಮಾತನಾಡಿ, ಮಕ್ಕಳ ದನಿಗೆ ಪುಸ್ತಕ ರೂಪ ಕೊಟ್ಟು ಸಾಹಿತ್ಯ ಲೋಕಕ್ಕೆ ಮಕ್ಕಳನ್ನು ಪಾದಾರ್ಪಣೆ ಮಾಡಿಸಿದ್ದಾರೆ. ಕನಸು ಕಟ್ಟಿಕೊಡುವ ಪ್ರಯತ್ನ ನಡೆದಿದೆ ಎಂದರು.
ಸ್ವಂತಿಕೆ ಮರೀಚಿಕೆ
ಪ್ರಕೃತಿ ಬಗ್ಗೆ ಮಕ್ಕಳು ಹೆಚ್ಚು ಬರೆದಿದ್ದಾರೆ. ಮೊಬೈಲ್‌ನಿಂದ ಮಕ್ಕಳ ಸ್ವಂತಿಕೆ ನಾಶವಾಗುತ್ತಿದೆ. ಹೀಗಾಗಿ, ಮೊಬೈಲ್‌ನಿಂದ ಮಕ್ಕಳನ್ನು ದೂರವಿರಿಸಿ ಎಂದು ವೈದ್ಯ ಡಾ.ವೆಂಕಟಾಚಲ ತಿಳಿಸಿದರು.
ಸಾಹಿತ್ಯಾಭಿರುಚಿ ಮೂಲಕ ಮಕ್ಕಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕಿದೆ. ಸ್ವಂತಿಕೆ ಬಂದಿದೆ. ಮಕ್ಕಳ ಮನಸ್ಸು ಭೂಮಿ ಇದ್ದಂತೆ. ಜ್ಞಾನ ಹಾಗೂ ಮೌಲ್ಯದ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬೆಳೆಯುತ್ತದೆ ಎಂದು ತಿಳಿಸಿದರು.
ಕಮ್ಮಟ ಪ್ರಾರಂಭ
ಕೃತಿಯ ಸಂಪಾದಕ ಎಸ್.ರಘುನಾಥ ಮಾತನಾಡಿ, ರೋಗ ಬಂದು ಸಾಯದೆ ಕೆಲಸ ಮಾಡುತ್ತಲೇ ಸಾಯಬೇಕು ಎನ್ನುವುದು ನನ್ನ ಆಸೆ. ಇನ್ನಷ್ಟು ಮಕ್ಕಳು, ಇನ್ನಷ್ಟು ರೈತರು ಜತೆ ಬೆರೆಯಬೇಕು. ಸಂಬಂಧಕ್ಕಿಂತ ಪ್ರೀತಿ ದೊಡ್ಡದು. ಅಸಹಾಯಕನಾಗಿ, ಮತ್ತೆ ಮಕ್ಕಳ ಕಮ್ಮಟ ಆರಂಭವಾಗಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net