ರೈಲ್ವೆ ಕಾಮಗಾರಿಗೆ ಅನುಮೋದನೆ ನೀಡಿ

ಬೆಂಗಳೂರಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆ ನಡೆಯಿತು. ಎಂ.ಮಲ್ಲೇಶ್​ ಬಾಬು, ಪರೀತ್​ ಮೋಹನ್​ ಪುರಿಯಾ, ಪ್ರವಿಣ್​ ಕತರಕಿ ಇದ್ದರು.
ಬೆಂಗಳೂರಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆ ನಡೆಯಿತು. ಎಂ.ಮಲ್ಲೇಶ್​ ಬಾಬು, ಪರೀತ್​ ಮೋಹನ್​ ಪುರಿಯಾ, ಪ್ರವಿಣ್​ ಕತರಕಿ ಇದ್ದರು.
Published on
ಕೋಲಾರ: ಜಿಲ್ಲೆಯ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಶ್ರೀ ಅನುಮೋದನೆ ನೀಡಬೇಕು ಎಂದು ಸಂಸದ ಎಂ.ಮಲ್ಲೇಶ್​ ಬಾಬು ಹೇಳಿದರು.
ಬೆಂಗಳೂರಿನ ರೈಲ್ವೆ ವಿಭಾಗೀಯ ಕಚೇರಿಯಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈಲು ಸಂಚರಿಸುವ ಜಿಲ್ಲೆಯ ವಿವಿದೆಡೆ ಸೇತುವೆ ನಿರ್ಮಾಣದ ಅಗತ್ಯವಿದೆ. ರೈಲು ಸಂಚರಿಸುವ ವೇಳೆ ಗೇಟ್​ ಹಾಕಿದಾಗ ಎರಡೂ ಕಡೆ ನೂರಾರು ವಾಹನಗಳು ನಿಂತು ದಟ್ಟಣೆ ಹೆಚ್ಚಾಗುತ್ತದೆ ಎಂದರು.
ಕೋಲಾರ ನಗರದ 148- ಟೇಕಲ್​ ರಸ್ತೆ, 150- ಸ್ಯಾನಿಟೋರಿಯಂ, ಬಂಗಾರಪೇಟೆಯ 162 ಎಸ್​ಎನ್​ ರೆಸಾರ್ಟ್ಸ್​, 1- ದೇಶಿಹಳ್ಳಿಯ ಲೆವೆಲ್​ ಕ್ರಾಸಿಂಗ್​ ಜಾಗದಲ್ಲಿ ಮೇಲ್ಸೆತುವೆ ನಿಮಾರ್ಣಕ್ಕಾಗಿ ಜಾಗ ಗುರುತಿಸಲಾಗಿದೆ. ಇದಕ್ಕೆ ಅನುಮೋದನೆ ನೀಡುವುದು ಬಾಕಿಯಿದೆ ಎಂದು ತಿಳಿಸಿದರು.
ಎಲ್​ಸಿ-7 ಊರಿಗಾಂ ಮತ್ತು 112 -ಕಾಮಸಮುದ್ರಂನ ಆರ್​ಒಬಿಗಳನ್ನು ತಕ್ಷಣ ನಿರ್ಮಿಸಬೇಕಾಗಿದೆ. ಇನ್ನು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ರೈಲ್ವೆ ಕಾರ್ಯಾಗಾರ ಸ್ಥಾಪಿಸಲು 500 ಎಕರೆ ಬಿಜಿಎಂಎಲ್​ ಭೂಮಿಯನ್ನು ಹಂಚಿಕೆ ಮಾಡುವ ಬಗ್ಗೆ ಗಣಿ ಕಾರ್ಯದರ್ಶಿ, ಭಾರತ ಸರ್ಕಾರಕ್ಕೆ ಪ್ರಸ್ತಾವನೆಯ ಸಲ್ಲಿಸಲು ಪತ್ರ ನೀಡಲಾಗಿದೆ. ಅಧಿಕಾರಿಗಳು ಇದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ಅಧಿಕಾರಿಗಳಾದ ಪರೀಕ್ಷಿತ್​ ಮೋಹನ್​ ಪುರಿಯಾ, ಪ್ರವಿಣ್​ ಕತರಕಿ ಮತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net