ರೋಗ ರಹಿತ ಜೀವನಕ್ಕೆ ಚುಚ್ಚುಮದ್ದು ಹಾಕಿಸಿಕೊಳ್ಳಿ vaccination

ಮುಳಬಾಗಿಲುvaccination  ತಾಲೂಕಿನ ತಾತಿಕಲ್ಲು ಗ್ರಾಮದ ಹೊರವಲಯದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 9 ರಿಂದ 14 ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್​ಪಿವಿ ಲಸಿಕೆ ವಿತರಿಸಲಾಯಿತು. ಬಿಇಒ ಕೆ.ಎನ್​.ರಾಮಚಂದ್ರಪ್ಪ, ಬೆಂಗಳೂರಿನ ರೋಟರಿ ಲೇಕ್​ ಸೈಡ್​ ಅಧ್ಯಕ್ಷ ಸುಧಾಕರ ಪಾಂಡೆ, ರೋಟರಿ ಮುಳಬಾಗಿಲು ಸೆಂಟ್ರಲ್​ ಅಧ್ಯಕ್ಷ ಆರ್​. ಶ್ರೀನಿವಾಸರೆಡ್ಡಿ, ಡಾ. ಜಿ. ಎನ್​. ಮಂಜುನಾಥ್​ ಮತ್ತಿತರರು ಇದ್ದರು.
ಮುಳಬಾಗಿಲುvaccination ತಾಲೂಕಿನ ತಾತಿಕಲ್ಲು ಗ್ರಾಮದ ಹೊರವಲಯದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ 9 ರಿಂದ 14 ವಯಸ್ಸಿನ ಒಳಗಿನ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್​ಪಿವಿ ಲಸಿಕೆ ವಿತರಿಸಲಾಯಿತು. ಬಿಇಒ ಕೆ.ಎನ್​.ರಾಮಚಂದ್ರಪ್ಪ, ಬೆಂಗಳೂರಿನ ರೋಟರಿ ಲೇಕ್​ ಸೈಡ್​ ಅಧ್ಯಕ್ಷ ಸುಧಾಕರ ಪಾಂಡೆ, ರೋಟರಿ ಮುಳಬಾಗಿಲು ಸೆಂಟ್ರಲ್​ ಅಧ್ಯಕ್ಷ ಆರ್​. ಶ್ರೀನಿವಾಸರೆಡ್ಡಿ, ಡಾ. ಜಿ. ಎನ್​. ಮಂಜುನಾಥ್​ ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಕೆ.ಎನ್​. ರಾಮಚಂದ್ರಪ್ಪ ಹೇಳಿಕೆ
ಮುಳಬಾಗಿಲು:ಸರ್ಕಾರಿ ಶಾಲಾ&ಕಾಲೇಜುಗಳಲ್ಲಿ ಗ್ರಾಮೀಣ ಪ್ರದೇಶದ ಬಡ ಕುಟುಂಬದ vaccination ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ನೀಡಿದರೆ ಉತ್ತಮ ಸಾಧನೆ ಮಾಡುವುದು ಖಚಿತ ಆದುದರಿಂದ ರೋಟರಿ ಸಂಸ್ಥೆ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಿಯ ಎಂದು ಬಿಇಒ ಕೆ.ಎನ್​. ರಾಮಚಂದ್ರಪ್ಪ ಹೇಳಿದರು.
ತಾಲೂಕಿನ ತಾತಿಕಲ್ಲು ಗ್ರಾಮ ಹೊರವಲಯದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೋಟರಿ ಮುಳಬಾಗಿಲು ಸೆಂಟ್ರಲ್​, ಆರ್​.ಎಲ್​.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ, ದೇವರಾಜ್​ ಅರಸು ವೇದಿಕೆಯ ಮಹಾವಿದ್ಯಾಲಯ ನರ್ಸಿಂಗ್​ ಕಾಲೇಜು, ಬೆಂಗಳೂರಿನ ರೋಟರಿ ಲೇಕ್​ ಸೈಡ್​ ಹಾಗೂ ಎಂಬಿಟೆಲ್​ ಟೆಕ್ನಾಲಜಿಸ್​ ಸಹಯೋಗದಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಎಚ್​ಪಿವಿ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯವೇ ಮಹಾಭಾಗ್ಯ ಎಂಬುದನ್ನು ಪ್ರತಿಯೊಬ್ಬರೂ ಅರಿತು ರೋಗರಹಿತ ಜೀವನಕ್ಕೆ ಸಂಬಂಧಿಸಿದ ಚುಚ್ಚುಮದ್ದುಗಳನ್ನು ಕಾಲ ಕಾಲಕ್ಕೆ ಹಾಕಿಸಿಕೊಳ್ಳುವ ಮೂಲಕ ಸುಖಕರ ಜೀವನ ಮಾಡಬಹುದು ಎಂದರು.
ರೋಟರಿ ಮುಳಬಾಗಿಲು ಸೆಂಟ್ರಲ್​ ಅಧ್ಯಕ್ಷ ತಿಪ್ಪದೊಡ್ಡಿ ಆರ್​. ಶ್ರೀನಿವಾಸರೆಡ್ಡಿ ಮಾತನಾಡಿ, ಸರ್ಕಾರಿ ಆದರ್ಶ ಶಾಲೆಯಲ್ಲಿಂದು 216 ಬಾಲಕಿಯರಿಗೆ ಕ್ಯಾನ್ಸರ್​ ತಡೆಗಟ್ಟುವ ಲಸಿಕೆಗಳನ್ನು ಅದರ ಮುಖಬೆಲೆ 2,600 ರೂ. ಪ್ರತಿ ಹೆಣ್ಣು ಮಗುವಿಗೆ ನೀಡಲಾಗಿದೆ ಎಂದರು.
ಆರ್​.ಎಲ್​. ಜಾಲಪ್ಪ ಆಸ್ಪತ್ರೆ ಕ್ಯಾನ್ಸರ್​ ತಜ್ಞ ವೈದ್ಯ ಡಾ.ಜಿ.ಎನ್​. ಮಂಜುನಾಥ್​, ರೋಟರಿ ಮುಳಬಾಗಿಲು ಸೆಂಟ್ರಲ್​ ಖಜಾಂಚಿ ಪಿ.ಎಸ್​.ರಮೇಶ್​, ಕೋಲಾರ ರೋಟರಿ ಲೇಕ್​ ಖಜಾಂಚಿ ಪಿ.ವಾಸಂತಿ, ರೋಟೋರಿಯನ್​ಗಳಾದ ಆರ್​.ಕೆ.ಸುದರ್ಶನ್​ ಬಾಬು, ಕೆ.ಎಸ್​. ಪ್ರಭಾಕರ್​, ಮಾಧವಿ, ಪಾಂಡುರಂಗ ರೆಡ್ಡಿ, ರಾಮಚಂದ್ರ, ಆದರ್ಶ ವಿದ್ಯಾಲಯದ ಎಸ್​ಡಿಎಂಸಿ ಅಧ್ಯಕ್ಷ ಎಂ. ನಾರಾಯಣಸ್ವಾಮಿ, ಉಪಾಧ್ಯಕ್ಷೆ ತೇಜಸ್ವಿನಿ, ಮುಖ್ಯಶಿಕ್ಷಕ ವಿ.ಎ.ಅಶೋಕ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net