ಆಂಧ್ರ ಪೋರಿಗೆ ಕನ್ನಡದಲ್ಲಿ ಪೂರ್ಣ ಅಂಕ!

ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಹೋಬಳಿಯ ಕದಿರಂಪಲ್ಲಿಯ ಕಾವ್ಯಶ್ರೀ ಅವರನ್ನು ಶಿಕ್ಷಕರು ಸನ್ಮಾನಿಸಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶ್ರೀಶೈಲ ಹಲವಾರು, ಶಿಕ್ಷಕ ಶ್ರೀನಾಥ್​, ಅಥಿತಿ ಶಿಕ್ಷಕ ಯುಗಂದರ್​,  ನೌಕರರ ಸಂಘದ ನಿರ್ದೇಶಕ ಕೆ.ರಾಜಣ್ಣ ಇದ್ದರು.
ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಹೋಬಳಿಯ ಕದಿರಂಪಲ್ಲಿಯ ಕಾವ್ಯಶ್ರೀ ಅವರನ್ನು ಶಿಕ್ಷಕರು ಸನ್ಮಾನಿಸಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶ್ರೀಶೈಲ ಹಲವಾರು, ಶಿಕ್ಷಕ ಶ್ರೀನಾಥ್​, ಅಥಿತಿ ಶಿಕ್ಷಕ ಯುಗಂದರ್​, ನೌಕರರ ಸಂಘದ ನಿರ್ದೇಶಕ ಕೆ.ರಾಜಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಂಧ್ರ ಪೋರಿಗೆ ಕನ್ನಡದಲ್ಲಿ ಪೂರ್ಣ ಅಂಕ!
ರಾಯಲ್ಪಾಡು: ರಾಜ್ಯದ ಗಡಿಭಾಗದಲ್ಲಿರುವ ಅದೆಷ್ಟೋ ಸರ್ಕಾರಿ ಶಾಲೆಗಳು ಈಗಾಗಲೇ ಮುಚ್ಚಿವೆ. ಇನ್ನೂ ಕೆಲವು ಸೌಲಭ್ಯದಿಂದ ವಂಚಿತವಾಗಿವೆ. ಆದರೆ, ಇಲ್ಲೊಬ್ಬಳು ಆಂಧ್ರಪ್ರದೇಶದ ಬಾಲಕಿ ಕನ್ನಡ ಮಾಧ್ಯಮದಲ್ಲಿ ಓದಿ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಪಡೆಯುವ ಜತೆಗೆ ಒಟ್ಟು 619 ಅಂಕದೊಂದಿಗೆ ಶೇ.99.04 ಫಲಿತಾಂಶ ಪಡೆದು ಸ್ಫೂರ್ತಿಯಾಗಿದ್ದಾರೆ.
ಆಂಧ್ರದ ಪುಲಿಸಿಮಾನುಪೆಂಟ ಗ್ರಾಮದ ಮಲ್ಲು ವೆಂಕಟರಮಣ, ಸರಸ್ವತಿ ಪುತ್ರಿ ನಂದಿನಿ ಶ್ರೀನಿವಾಸಪುರ ಗಡಿ ಭಾಗದ ಮುದಿಮಡಗು ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ತಂದೆ ಕುರಿಗಾಹಿಯಾಗಿದ್ದು, ತಾಯಿ ಕೂಲಿ ಕೆಲಸ ಮಾಡುತ್ತಾರೆ. ಮನೆಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿಲ್ಲದ ಕಾರಣ ಆರಂಭದಲ್ಲಿ ವಿದ್ಯಾರ್ಥಿನಿಯ ಓದಿಗೆ ಮನೆಯ ಕೆಲಸಗಳೇ ಅಡ್ಡಿಯಾಗುತ್ತಿದ್ದವು. ವಿದ್ಯಾರ್ಥಿನಿಯ ಓದಿನ ಕುರಿತ ಆಸಕ್ತಿ ಗಮನಿಸಿದ ಶಾಲೆಯ ಶಿಕ್ಷಕರು ಒಮ್ಮೆ ಮನೆಗೆ ಭೇಟಿ ನೀಡಿ, ಮಗಳು ಉತ್ತಮವಾಗಿ ಓದುತ್ತಿದ್ದು, ಎಸ್ಸೆಸ್ಸೆಲ್ಸಿ ಮಹತ್ತರ ಟ್ಟವಾದ್ದರಿಂದ ಓದಿಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಪಾಲಕರು ಸಹಕಾರ ನೀಡಿದ್ದು ಇಂದು ನಂದಿನಿ ಶೇ.99 ಅಂಕ ಗಳಿಸಿದ್ದಾಳೆ. ಹುಟ್ಟಿದ್ದು, ಬೆಳೆದಿದ್ದೆಲ್ಲವೂ ಆಂಧ್ರಪ್ರದೇಶದಲ್ಲಾದರೂ ಕನ್ನಡ ಭಾಷೆಯಲ್ಲಿ ಸಾಧನೆ ಮಾಡುವ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾಳೆ.
ಗ್ರಾಮದಿಂದ ವ್ಯವಸ್ಥಿತ ಸಾರಿಗೆ ಇಲ್ಲದ ಕಾರಣ ಪ್ರತಿದಿನ ಸುಮಾರು 8 ಕಿಮೀ ದೂರದಿಂದ ಪ್ರಯಾಣ ಮಾಡುತ್ತಿದ್ದಳು. ಓದುವ ಛಲದಿಂದ ನಿಗದಿತ ಸಮಯಕ್ಕೆ ಶಾಲೆಗೆ ಬಂದು ಶಿಕ್ಷಕರ ಪಾಠ ಮಾರ್ಗದರ್ಶನದಲ್ಲಿ ಛಲ ಬಿಡದೆ ಗುರಿ ಮುಟ್ಟಿ ಗಮನ ಸೆಳೆದಿದ್ದಾಳೆ. ಮುಂದಿನ ಶಿಕ್ಷಣಕ್ಕೆ ವಿದ್ಯಾರ್ಥಿನಿಗೆ ಆರ್ಥಿಕ ಸಹಕಾರ ಬೇಕಿದ್ದು, ಕನ್ನಡಾಭಿಮಾನಿಗಳು ಮುಂದೆ ಬರಬೇಕಿದೆ.
ತಾಯಿಯ ಬಲದಲ್ಲಿ ಅರಳಿದ ಮಗಳು: ವಿದ್ಯೆ ಎಂಬುದು ಯಾರ ಸ್ವತ್ತೂ ಅಲ್ಲ. ಯಾರಲ್ಲಿ ಶ್ರದ್ಧೆ, ನಿರಂತರ ಅಭ್ಯಾಸ ಇರುತ್ತದೋ ಅವರಿಗೆ ವಿದ್ಯಾದೇವತೆ ಒಲಿಯುತ್ತಾಳೆ ಎಂಬುದಕ್ಕೆ ರಾಯಲ್ಪಾಡು ಸಮೀಪದ ಕದಿರಂಪಲ್ಲಿಯ ಕಾವ್ಯಶ್ರೀ ಉದಾಹರಣೆಯಾಗಿದ್ದಾರೆ.
ರಾಯಲ್ಪಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಕಾವ್ಯಶ್ರೀ ಬಡತನ ಮತ್ತು ಕಠಿಣ ಪರಿಸ್ಥಿತಿಯ ನಡುವೆಯೂ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀೆಯಲ್ಲಿ 625ಕ್ಕೆ 601 ಅಂಕ ಪಡೆಯುವ ಮೂಲಕ ಶೇ.96.16 ರಿಸಲ್ಟ್​ ಪಡೆದು ಮಾದರಿಯಾಗಿದ್ದಾರೆ.
ಕೆಲ ವರ್ಷಗಳ ಹಿಂದೆ ತಂದೆ ಮನೆ ಬಿಟ್ಟು ಹೋದವರು ಬಂದೇ ಇಲ್ಲ, ತಾಯಿ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಮಗಳ ಸಾಧನೆಯ ಹಿಂದೆ ಬಲವಾಗಿ ನಿಂತಿದ್ದರಿಂದ ಸಾಧನೆ ಸಾಧ್ಯವಾಗಿದೆ. ನಿತ್ಯ ಕದಿರಂಪಲ್ಲಿಯಿಂದ ರಾಯಲ್ಪಾಡು ಶಾಲೆಗೆ ಬಂದು ವ್ಯಾಸಂಗ ಮಾಡಿ ಗುರಿ ತಲುಪಿದ್ದಾಳೆ.
ರಾಯಲ್ಪಾಡಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೇವಲ ಮೂವರು ಕಾಯಂ ಶಿಕ್ಷಕರಿದ್ದಾರೆ. ಆದರೂ ಬಾಲಕಿ ಛಲ ಬಿಡದೆ ಓದಿ ಉತ್ತಮ ಅಂಕಪಡೆದಿರುವುದು ಶ್ಲಾಘನೀಯ ಎಂದು ತಾಲೂಕು ನೌಕರರ ಸಂಘದ ನಿರ್ದೇಶಕ ಕೆ.ರಾಜಣ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net