ಜಿಲ್ಲೆಯ ಒಟ್ಟು 7 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 90 ನಿವೇಶನಗಳಿದ್ದು, ಆ ಪೈಕಿ ಕೋಲಾರ ವ್ಯಾಪ್ತಿಯಲ್ಲಿ 18, ಕೆಜಿಎಫ್ 9, ಮುಳಬಾಗಿಲು 4, ಬಂಗಾರಪೇಟೆ 15, ಮಾಲೂರು 32, ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ 6 ನಿವೇಶನಗಳಿವೆ. ಇನ್ನು ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಡಾವಣೆಗಳಲ್ಲಿ ಸಿಎ ನಿವೇಶನಗಳು 72, ಉದ್ಯಾನವನಗಳು 78 ಹೋರತುಪಡಿಸಿದೆ ಉಳಿದಂತೆ ಅಧೀನದಲ್ಲಿ ಖಾಲಿ ನಿವೇಶನಗಳ ಮಾತಿನ್ನು ಇಲ್ಲ, ದಾಖಲೆ ಪರಿಶೀಲಿಸಿ, ಡಿಜಿಟಲ್ ರೂಪದಲ್ಲಿ ಆಸ್ತಿ ಸಂಖ್ಯೆ ನಿಗದಿಸುವ ಮೂಲಕ (ಪಿಐಡಿ) ಭದ್ರಪಡಿಸುವ ಕ್ರಮಕ್ಕೆ ಮುಂದಾಗಿದೆ.