ಉತ್ಪಾದಕರ ಲಾಭಕ್ಕಾಗಿ ರೈತ ಸ್ನೇಹಿ ರ್ನಿಣಯ

ಕೋಲಾರ ಹಾಲು ಒಕ್ಕೂಟದಲ್ಲಿ ಸೋಮವಾರದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರೂ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ಶ್ರೀನಿವಾಸ್​, ಕೆ.ಕೆ.ಮಂಜುನಾಥ್​, ಗೋಪಾಲಮೂರ್ತಿ ಇದ್ದರು.
ಕೋಲಾರ ಹಾಲು ಒಕ್ಕೂಟದಲ್ಲಿ ಸೋಮವಾರದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರೂ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ಶ್ರೀನಿವಾಸ್​, ಕೆ.ಕೆ.ಮಂಜುನಾಥ್​, ಗೋಪಾಲಮೂರ್ತಿ ಇದ್ದರು.
Published on
ಕೋಲಾರ: ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದ್ದು ಮೇವಿನ ಅಭಾವ ಸೃಷ್ಟಿಯಾಗಿ ಹೈನೋದ್ಯಮದ ಮೇಲೆ ಯಾವುದೇ ರೀತಿ ಪರಿಣಾಮ ಬೀರದಂತೆ ಒಕ್ಕೂಟದ ಆಡಳಿತ ಮಂಡಳಿಯಿಂದ ರೈತ ಸ್ನೇಹಿ ರ್ನಿಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೋಮುಲ್​ ಅಧ್ಯಕ್ಷರು ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಒಕ್ಕೂಟದ ಆವರಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೈನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಕ್ಕೂಟದಿಂದ ಬರಗಾಲದಲ್ಲಿ ಪ್ರೋತ್ಸಾಹಧನ ನೀಡಲು ತೀಮಾರ್ನಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ, ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ. ಹಾಲು ಉತ್ಪಾದನೆ, ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಹಸಿರುಮೇವು ಬೆಳೆಯಲು ಕಾರ್ಯಕ್ರಮವನ್ನು ರೂಪಿಸಿದ್ದು, 1 ಎಕರೆಗೆ 3 ಸಾವಿರರೂ ಪ್ರೋತ್ಸಾಹ ಧನ ಹಾಗೂ ಶೇ.50ರಷ್ಟು ಸಬ್ಸಿಡಿಯಲ್ಲಿ ಬೀಜ ನೀಡುತ್ತಿದ್ದೆವು. ಇದೀಗ ಪ್ರತಿ ಎಕರೆಗೆ 5 ಸಾವಿರರೂ ಪ್ರೋತ್ಸಾಹ ಧನ ನೀಡಲು ತೀಮಾರ್ನ ತೆಗೆದುಕೊಳ್ಳಲಾಗಿದೆ ಎಂದರು.
ಈ ಮೊದಲು 50 ಹಸಿರು ಮೇವು ಉತ್ಪಾದಕ ಘಟಕಗಳಿಗೆ ಅವಕಾಶವಿತ್ತು ಈಗ ಅದನ್ನೂ ಸಹ ಎಷ್ಟು ಮಂದಿ ಬೇಕಾದರೂ ನಿರ್ಮಿಸಬಹುದು. ಅದಕ್ಕೆ 25,000ರೂ ಪ್ರೋತ್ಸಾಹಧನ ನೀಡಲಾಗುವುದು. ಹಾಗೆಯೇ ಈ ಹಿಂದೆ 100 ಅಜೋಲ ತೊಟ್ಟಿ ನಿಮಾರ್ಣಕ್ಕೆ ಅವಕಾಶವಿದ್ದು, 3 ಸಾವಿರ ರೂ ಪ್ರೋತ್ಸಾಹಧನವನ್ನು 5 ಸಾವಿರ ರೂಗೆ ಏರಿಸಲಾಗಿದೆ. ಎಲ್ಲಾ ಹೈನುಗಾರರೂ ಇದನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಒಕ್ಕೂಟದ ಗೋದಾಮಿನಲ್ಲಿರುವ ಸೂಪರ್​ನೇಪಿಯರ್​ ಹುಲ್ಲಿನ ಕಡ್ಡಿಗಳನ್ನು 10 ಸಾವಿರ ಕಡ್ಡಿಗಳಿಗೆ 500 ರೂಗಳಂತೆ ಪಾವತಿಸಿಕೊಂಡು ಹಾಲು ಉತ್ಪಾದಕರಿಗೆ ವಿತರಿಸಲಾಗುತ್ತಿದ್ದು, ಅದನ್ನು ಈ ಸಾಲಿಗೆ ಉಚಿತವಾಗಿ ನೀಡಲು ತೀಮಾರ್ನಿಸಲಾಗಿದೆ ಎಂದರು.
* ಟೀಕೆ, ಟಿಪ್ಪಣಿಗೆ ತಲೆಕೆಡಿಸಿಕೊಳ್ಳಲ್ಲ
ನೇಮಕಾತಿ ವಿಚಾರಕ್ಕೆ ಟೀಕೆ ಟಿಪ್ಪಣಿ ನೂರು ಬರಲಿ ಅದರ ಬಗ್ಗೆ ಎಂತಹವರು ಮಾತನಾಡುತ್ತಿದ್ದಾರೆಂದು ಗೊತ್ತಿದೆ. ಅವರ ಕಷ್ಟ ಬಾಧೆಗೆ ನಾವು ಸೊಪ್ಪು ಹಾಕಲ್ಲ ಎಂದು ನಂಜೇಗೌಡ ತಿರುಗೇಟು ನೀಡಿದರು.
ನೇಮಕಾತಿ ಪ್ರಕ್ರಿಯೆ ನಡೆದು 2 ವರ್ಷಗಳೆ ಕಳೆದಿವೆ, ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹೋದರೆ ಕೆಲಸ ಮಾಡಲಾಗುವುದಿಲ್ಲ, ಸಂಗಳು, ಒಕ್ಕೂಟ ಹಾಗೂ ರೈತರ ಬಗ್ಗೆಯಷ್ಟೇ ನಮ್ಮ ಅಲೋಚನೆ. ಆರೋಪಗಳಿಗೆಲ್ಲ ಒಂದು ದಿನ ಉತ್ತರ ಕೊಡುತ್ತೇವೆ.
* ಸರ್ಕಾರದ ಗಮನ ಸೆಳೆಯಬೇಕಿದೆ
ಹಾಲು ಉತ್ಪಾದನೆ ಹೆಚ್ಚಾದಾಗ ಸಾಂಪ್ರದಾಯಿಕವಾಗಿ ದರ ಕಡಿಮೆ ಮಾಡುವುದು ವಾಡಿಕೆ. 5 ರೂ. ಪ್ರೋತ್ಸಾಹ ಧನ ಒಂದು ತಿಂಗಳು ಸಮಸ್ಯೆ ಆಗಿದ್ದು ಶೀಘ್ರದಲ್ಲೇ ಬಗೆಹರಿಯಲಿದೆ. ಇದನ್ನು 10 ರೂ.ಗೆ ಏರಿಕೆ ಮಾಡಲು ಒತ್ತಾಯ ಮಾಡುತ್ತಿದ್ದು, ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​ ಕುಮಾರ್​ ಸೇರಿದಂತೆ ಎಲ್ಲಾ ಅಧ್ಯಕ್ಷರು ಸರ್ಕಾರದ ಗಮನಕ್ಕೆ ತರಬೇಕು ಎಂದು ನಂಜೇಗೌಡ ಹೇಳಿದರು.
ಮಾಲೂರಿನಲ್ಲಿ ಮುಖ್ಯಮಂತ್ರಿಗಳ ಕಾರ್ಯಕಮಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ತಿಂಗಳಲ್ಲೇ ಮಾಲೂರಿಗೆ ಆಗಮಿಸಲಿದ್ದು, ಸದ್ಯದಲ್ಲೇ ದಿನಾಂಕ ನಿಗಧಿಯಾಗಲಿದೆ. ಅಲ್ಲದೆ ಮುಂದಿನ ತಿಂಗಳು ಕೋಲಾರಕ್ಕೆ ಬಂದು ಎಂವಿಕೆ ಗೋಲ್ಡನ್​ ಡೇರಿ, ಸೋಲಾರ್​ ಘಟಕ ಉದ್ಘಾಟಿಸಲಿದ್ದಾರೆ ಎಂದರು.
* ಎಮ್ಮೆ ಖರೀದಿಗೆ ಪ್ರೋತ್ಸಾಹ
ಹಾಲು ಪ್ರಾಥಮಿಕ ಸಹಕಾರ ಸಂದ ಷೇರುದಾರರು ಒಂದು ಎಮ್ಮೆಯನ್ನು ಖರೀದಿಸಲು ಅವಕಾಶವಿದ್ದು, ಎಮ್ಮೆ ಖರೀದಿ ನಮ್ಮ ಜಿಲ್ಲೆಯಲ್ಲಿ ಮಾಡುವಂತಿಲ್ಲ, ಹೊರ ಜಿಲ್ಲೆ, ರಾಜ್ಯದಲ್ಲೇ ಖರೀದಿಸಬೇಕು. ಹಾಲಿನ ಉತ್ಪಾದನೆಯಲ್ಲಿ 8.25 ಲಕ್ಷ ಲೀಟರ್​ ಗುರಿ ತಲುಪಿದ್ದೇವೆ. ಒಂದು ವರ್ಷದಲ್ಲಿ ಅದು 10 ಲಕ್ಷ ಲೀಟರ್​ಗೆ ತಲುಪಬೇಕು. ಅದಕ್ಕಾಗಿ ಪ್ರತಿ ಹಳ್ಳಿಯಲ್ಲೂ ಸಂಘ ಆರಂಭವಾಗಬೇಕು ಎಂದು ಕೆ.ವೈ.ನಂಜೇಗೌಡ ತಿಳಿಸಿದರು.
ಹಸುಗಳಿಂದ ಗುಣಮಟ್ಟದ ಹಾಲು ಲಭ್ಯವಾಗುತ್ತಿಲ್ಲ. ಎಮ್ಮೆಗಳ ಸಂಖ್ಯೆ ಕಡಿಮೆಯಿದ್ದು, ಅವು ಇಲ್ಲದೆ ಹಾಲಿನ ಗುಣಮಟ್ಟದಲ್ಲೂ ಗುರಿ ಮುಟ್ಟಲು ಆಗುತ್ತಿಲ್ಲ. ಹೀಗಾಗಿ ಷೇರುದಾರರು ಮುಂದೆ ಬಂದರೆ ಎಮ್ಮೆ ಕಟ್ಟಿಕೊಳ್ಳಲು 30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಒಂದು ವರ್ಷಕ್ಕೆ 1 ಸಾವಿರ ಎಮ್ಮೆ ಗುರಿ ಹೊಂದಲಾಗಿದ್ದು, 5 ವರ್ಷದ ಯೋಜನೆಯಿದು. ಸಾವಿರ ಎಮ್ಮೆ ಖರೀದಿಗೆ 3 ಕೋಟಿ ಅಂದರೆ 5 ವರ್ಷಕ್ಕೆ 15 ಕೋಟಿ ವೆಚ್ಚವಾಗಲಿದ್ದು, ಒಕ್ಕೂಟದಿಂದಲೇ ಭರಿಸಲಾಗುವುದು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಮುಲ್​ ನಿರ್ದೇಶಕ ಕೆ.ಕೆ.ಮಂಜು, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್​.ಗೋಪಾಲಮೂರ್ತಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net