ಕೋಟಿ ಕೊಟ್ಟರೂ ನೀಗದ ನೀರಡಿಕೆ

ಮುಳಬಾಗಿಲಿನ ಕೆಜಿಎಫ್ ರಸ್ತೆಯ ದರ್ಗಾ ಮುಂಭಾಗದ ಇಂಡ್ಲುಕೆರೆ ಕಸದ ತೊಟ್ಟಿಯಾಗಿದ್ದು, ಒತ್ತುವರಿಯಾಗಿದೆ.
ಮುಳಬಾಗಿಲಿನ ಕೆಜಿಎಫ್ ರಸ್ತೆಯ ದರ್ಗಾ ಮುಂಭಾಗದ ಇಂಡ್ಲುಕೆರೆ ಕಸದ ತೊಟ್ಟಿಯಾಗಿದ್ದು, ಒತ್ತುವರಿಯಾಗಿದೆ.
Published on
ಎ.ಅಪ್ಪಾಜಿಗೌಡ ಮುಳಬಾಗಿಲು
ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ಮತ್ತು ಜಿಲ್ಲಾಡಳಿತ ಕೊಳವೆಬಾವಿಗಳನ್ನು ಕೊರೆಯಲು ಕೋಟ್ಯಂತರ ರೂಪಾಯಿ ವ್ಯಯಿಸುವುದು ಸಾಮಾನ್ಯ. ಆದರೆ, ಇರುವ ಜಲಮೂಲಗಳ ಸಂರಕ್ಷಣೆಯನ್ನು ಗಾಳಿಗೆ ತೂರಿ, ಅಂತರ್ಜಲವನ್ನು ಪಾತಾಳದಿಂದ ಎತ್ತುವ ವ್ಯರ್ಥ ಪ್ರಯತ್ನ ಮಾಡಲಾಗುತ್ತಿದೆ. ಈ ಹಣವನ್ನು ಕೆರೆಗಳ ಹೂಳೆತ್ತಲು ಮತ್ತು ಅಭಿವೃದ್ಧಿಗೆ ಬಳಸಿದ್ದರೆ ಮುಳಬಾಗಿಲು ನಗರಕ್ಕೆ ವರ್ಷಪೂರ್ತಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ತಡೆಯಬಹುದು.
ನಗರದ ಸುತ್ತಮುತ್ತ 9 ಕೆರೆಗಳು ಹಾಗೂ ಅಷ್ಟೇ ಸಂಖ್ಯೆಯ ಕಲ್ಯಾಣಿಗಳಿವೆ. ಇವುಗಳು ಅಭಿವೃದ್ಧಿ ಕಂಡರೆ ಮುಳಬಾಗಿಲು ಸಮೃದ್ಧ ನಾಡಾಗಬಲ್ಲದು ಎಂಬ ದೂರದೃಷ್ಟಿ ಸರ್ಕಾರ ಮತ್ತು ಸ್ಥಳೀಯ ಆಡಳಿತಕ್ಕಿಲ್ಲವಾಗಿದೆ. ಕೆರೆಗಳ ದುಸ್ಥಿತಿ ಕಣ್ಣೆದುರಿಗಿದ್ದರೂ ಕೆರೆಗಳ ಬಹುತೇಕ ಒತ್ತುವರಿಯಾಗಿದ್ದ ಭಾಗ ಕೇಳುವವರೇ ಇಲ್ಲ. ಆಘಾತಕಾರಿ ಅಂಶವೆಂದರೆ, ಕೆರೆ ಅಂಗಳದಲ್ಲೇ ಅಕ್ರಮ ಲೇಔಟ್‌ಗಳು ತಲೆ ಎತ್ತಿವೆ. ಸಾಕ್ಷಿಯಾಗಿದೆ. ಇದಕ್ಕೆ ನಗರಸಭೆಯೇ 'ಇ ಖಾತ ಮಾಡಿಕೊಟ್ಟಿರುವುದು ವ್ಯವಸ್ಥೆಯ ವಿಪರ್ಯಾಸಕ್ಕೆ
ತ್ಯಾಜ್ಯ ತೊಟ್ಟಿಯಾದ ಜಲಮೂಲಗಳು
ಮುಳಬಾಗಿಲು ನಗರದ ಕೆರೆಗಳು ಹೂಳು ತುಂಬಿ ಕಸದ ತೊಟ್ಟಿಯಾಗಿ ಮಾರ್ಪಟ್ಟಿವೆ. ಮಳೆ ಬಂದಾಗ 3 ರಿಂದ 4 ಅಡಿ ನೀರು ನಿಲ್ಲುವ ಸಾಮರ್ಥ್ಯ ಕೆರೆಗಳಿಗಿದೆ. ತ್ಯಾಜ್ಯ ತುಂಬಿರುವುದರಿಂದ ಕೆರೆಯಲ್ಲಿ ನೀರಿದ್ದರೂ ಅದು ಅಂತರ್ಜಲವಾಗಿ ಭೂಮಿಗೆ ಇಂಗುತ್ತಿಲ್ಲ. ಪರಿಣಾಮ, ಬೇಸಿಗೆಯಲ್ಲಿ
ಸಂಖ್ಯೆಯಲ್ಲಿ ಸಮೃದ್ಧ, ಸ್ಥಿತಿಯಲ್ಲಿ ಶೂನ್ಯ
ಕರ್ನಾಟಕದಲ್ಲಿ 40,000ಕ್ಕೂ ಹೆಚ್ಚು ಕೆರೆಗಳಿವೆ. ಮುಳಬಾಗಿಲು ವ್ಯಾಪ್ತಿಯಲ್ಲಿಯೇ 41 ದೊಡ್ಡ ಕೆರೆಗಳು, ಸಣ್ಣ ನೀರಾವರಿ ಇಲಾಖೆಯಡಿ 663 ಕೆರೆಗಳು ಹಾಗೂ ಪಂಚಾಯತ್ ರಾಜ್ ವ್ಯಾಪ್ತಿಯಲ್ಲಿ 9 ಕೆರೆಗಳಿವೆ. ಇವುಗಳ ಒತ್ತುವರಿ ತೆರವುಗೊಳಿಸಿ, ಹೂಳೆತ್ತಿ, ಸಸಿ ನೆಟ್ಟು ಸಂರಕ್ಷಣೆ ಮಾಡಬೇಕಾದ ಅನಿವಾರ್ಯತೆ ಇದೆ.
ಪೂರ್ವಿಕರ ವೈಜ್ಞಾನಿಕ ದೃಷ್ಟಿಕೋನಕ್ಕಿಲ್ಲ ಮನ್ನಣೆ
ಹಿಂದಿನ ಕಾಲದಲ್ಲಿ ಕೆರೆ, ಒಡ್ಡು ಮತ್ತು ಕಟ್ಟೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಲಾಗಿತ್ತು. ಕೇವಲ ಕೃಷಿಯಷ್ಟೇ ಅಲ್ಲದೆ, ಅಂತರ್ಜಲ ವೃದ್ಧಿ, ಮೀನುಗಾರಿಕೆ ಮತ್ತು ಪ್ರವಾಹ ನಿಯಂತ್ರಣಕ್ಕೂ ಇವು ಸಹಕಾರಿಯಾಗಿದ್ದವು. ಆದರೆ ಇಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಮಹತ್ವ ಮರೆತಿದ್ದಾರೆ. ಪ್ರಕೃತಿಯೇ ನೀಡಿದ ಈ 'ನೈಸರ್ಗಿಕ ಜಲ ಭಂಡಾರ'ಗಳನ್ನು ಉಳಿಸಿಕೊಳ್ಳುವ ಅರಿವು ಸಾರ್ವಜನಿಕರಲ್ಲೂ ಮೂಡಬೇಕಿದೆ.
ಕೆರೆ ಅಂಗಳ ಒತ್ತುವರಿ ಬಗ್ಗೆ ಮಾಹಿತಿ ಇದೆ. ತಾಲೂಕು ಆಡಳಿತ ಕೆರೆಗಳ ಒತ್ತುವರಿ ತೆರವಿಗೆ ಮುಂದಾದರೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಂತ್ರಗಳೊಂದಿಗೆ ಆಗಮಿಸಿ ತೆರವಿಗೆ ಸಹಕರಿಸಿ ಖಾತೆ ರದ್ದುಪಡಿಸಲಾಗುವುದು.
- ಆಂಜನೇಯಲು, ನಗರಸಭೆ ಪೌರಾಯುಕ್ತ, ಮುಳಬಾಗಿಲು
ಇಂಡ್ಲು ಕೆರೆ ಸೇರಿ ನಗರದ 9 ಕೆರೆಗಳ ಸರ್ವೇ ಪೂರ್ಣಗೊಂಡಿದೆ. ಕೆರೆ ಒತ್ತುವರಿ ಬಗ್ಗೆ ವರದಿಯನ್ನು ನಗರಸಭೆಗೆ ನೀಡಲಾಗಿದೆ. ಕೆರೆ ಅಂಗಳದಲ್ಲಿ ನಿರ್ಮಾಣವಾದ ಮನೆಗಳಿಗೆ ನಗರಸಭೆಯಿಂದ ಖಾತೆ ಮಾಡಿಕೊಳ್ಳಲಾಗಿದೆ. ಅವುಗಳನ್ನು ರದ್ದುಪಡಿಸಿ ಕೆರೆ ಸಂರಕ್ಷಣೆಗೆ ನಗರಸಭೆ ಸಹಕರಿಸಬೇಕು.
- ವಿ.ಗೀತಾ ತಹಸೀಲ್ದಾರ್, ಮುಳಬಾಗಿಲು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net