ನಿವೃತ್ತರಾದರೂ ಪಾಪ ಕಾಡದೇಬಿಡದು...

ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣ ವಿಚಾರಣೆಯನ್ನು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ನಡೆಸಿದರು. ಡಿಸಿ ರವಿ, ಡಾ.ಪ್ರವೀಣ್.ಪಿ.ಬಾಗೇವಾಡಿ, ಬಿ.ನಿಖಿಲ್, ಆರ್.ನಟೇಶ್ ಇದ್ದರು.
ಕೋಲಾರ ನಗರದ ಜಿಲ್ಲಾಡಳಿತ ಭವನದಲ್ಲಿ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣ ವಿಚಾರಣೆಯನ್ನು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ನಡೆಸಿದರು. ಡಿಸಿ ರವಿ, ಡಾ.ಪ್ರವೀಣ್.ಪಿ.ಬಾಗೇವಾಡಿ, ಬಿ.ನಿಖಿಲ್, ಆರ್.ನಟೇಶ್ ಇದ್ದರು.
Published on
ಕೋಲಾರ: ಸರ್ಕಾರಿ ನೌಕರರಿಗೆ ಅಧಿಕಾರ ಶಾಶ್ವತವಲ್ಲ. ನಿವೃತ್ತರಾದ ಬಳಿಕವೂ ಮಾಡಿರುವ ಪಾಪ ಕಾಡದೆ ಬಿಡುವುದಿಲ್ಲ. ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಸಮಾಜದಲ್ಲಿ ಹೆಸರು ಉಳಿಯುತ್ತದೆ ಎಂದು ರಾಜ್ಯ ಉಪ ಲೋಕಾಯುಕ್ತ ಬಿ.ವೀರಪ್ಪ ತಿಳಿಸಿದರು.
ನಗರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲೋಕಾಯುಕ್ತ ಸಾರ್ವಜನಿಕ ದೂರು ವಿಚಾರಣೆ ಹಾಗೂ ಪ್ರಕರಣ ವಿಲೇವಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರು ಪಾವತಿ ಮಾಡುತ್ತಿರುವ ತೆರಿಗೆ ಹಣದಿಂದಲೇ ಅಧಿಕಾರಿಗಳು ಸಂಬಳ ಪಡೆಯುತ್ತಿದ್ದಾರೆ. ಸರ್ಕಾರಿ ಕೆಲಸವೆಂದರೆ ಅದು ಸಾರ್ವಜನಿಕ ಸೇವೆಗೆ ಸಿಕ್ಕ ಪರವಾನಗಿಯೇ ಹೊರತು, ಲಂಚ ಪಡೆಯಲು ಸಿಕ್ಕ ಅವಕಾಶವಲ್ಲ ಎಂದರು.
ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳಾಗಿದ್ದರೂ, ಭ್ರಷ್ಟಾಚಾರ ಎಂಬ ಭೂತ ಇಂದಿಗೂ ಕಾಡುತ್ತಿದೆ. ಈ ಪಿಡುಗನ್ನು ತೊಲಗಿಸಿದರೆ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನಕ್ಕೆ ಬರುತ್ತದೆ. ಅಧಿಕಾರಿಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು.
ಸಾರ್ವಜನಿಕರು ಸೇವೆ ಕೋರಿ ಯಾವುದೇ ಇಲಾಖೆಗೆ ಅರ್ಜಿ ಸಲ್ಲಿಸಿದಾಗ ಅದನ್ನು ತ್ವರಿತವಾಗಿ ವಿಲೇ ಮಾಡಬೇಕು. ವಿನಾಕಾರಣ ಅವರನ್ನು ಕಚೇರಿಗೆ ಅಲೆದಾಡಿಸಿದರೆ ತಾಳ್ಮೆ ಕಳೆದುಕೊಂಡು ನಮ್ಮ ಬಳಿಗೆ ಬರುತ್ತಾರೆ. ಕೆಲವೊಮ್ಮೆ ಕರ್ತವ್ಯ ನಿರ್ಲಕ್ಷ್ಯಕ್ಕೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಲೋಪ ಮರುಕಳಿಸದಂತೆ ಎಚ್ಚರ
ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿದ್ದ 199 ಪ್ರಕರಣಗಳ ವಿಚಾರಣೆ ನಡೆಸಿದ ಉಪ ಲೋಕಾಯುಕ್ತ ಬಿ.ವೀರಪ್ಪ, ಹಲವು ಪ್ರಕರಣ ಇತ್ಯರ್ಥಪಡಿಸಿದರು. ವಿಚಾರಣೆ ವೇಳೆ ಅತಿ ಹೆಚ್ಚಾಗಿ ನಗರಸಭೆ, ಕಂದಾಯ ಇಲಾಖೆ, ಡಿಐಸಿ, ಅರಣ್ಯ, ಬೆಸ್ಕಾಂ ಇಲಾಖೆ ಕುರಿತು ಪ್ರಕರಣಗಳು ಆಗಿದ್ದು, ಬಹುತೇಕ ಇಲಾಖಾಧಿಕಾರಿಗಳು ಗೈರಾಗಿದ್ದರು. ಅವರ ಬದಲಿಗೆ ಕಚೇರಿಯ ಇತರ ಅಧಿಕಾರಿಗಳನ್ನು ಕಳುಹಿಸಿದ್ದ ಸಂಬಂಧ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿವಿಧ ಕಚೇರಿಗಳಿಗೆ ದಿಢೀರ್ ನಡೆಸಿದ್ದ ಸಂದರ್ಭದಲ್ಲಿ ಕಂಡು ಬಂದ ಲೋಪಗಳ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿತ್ತು. ಸುಮೊಟೊ ಪ್ರಕರಣಗಳ ಸಂಬಂಧ ಅಧಿಕಾರಿಗಳ ವಿಚಾರಣೆ ನಡೆಸಿ, ವರ್ತನೆ ಬದಲಾಯಿಸಿಕೊಳ್ಳಬೇಕು. ಹೀಗೆ ಮುಂದುವರಿದರೆ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಬಿ.ವೀರಪ್ಪ ಎಚ್ಚರಿಕೆ ನೀಡಿದರು.  
ತಪ್ಪು ಮಾಡಿದ ಅಧಿಕಾರಗಳನ್ನು ಸಹಿಸಲ್ಲ
ಜನಕ್ಕೆ ತೊಂದರೆ ನೀಡುವ ಅಧಿಕಾರಿಗಳನ್ನು ಸಂಸ್ಥೆ ಸಹಿಸುವುದಿಲ್ಲ. ಅದೇ ಭ್ರಷ್ಟಾಚಾರಕ್ಕೆ ಆಸ್ಪದ ನೀಡದ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಎದುರಾದರೆ ಲೋಕಾಯುಕ್ತ ಸಂಸ್ಥೆ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಬಿ.ವೀರಪ್ಪ ಹೇಳಿದರುಬದಲಾದ ವ್ಯವಸ್ಥೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಹಣಕ್ಕೆ ಮತ ಮಾರಿಕೊಳ್ಳುವುದು ಸೃಷ್ಟಿಯಾಗಿದೆ. ಇದಕ್ಕೆ ಜೀವಂತವಾಗಿರುವ  ಗುಲಾಮಗಿರಿಯೇ ಸಂಕೇತ. ಇದರಿಂದಾಗಿ ಸಮರ್ಥ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬೇಸರಿಸಿದರು.ಮಾಹಿತಿ ಹಕ್ಕು ಕಾಯ್ದೆಯನ್ನು ಕೆಲವು ವ್ಯಕ್ತಿಗಳು ಪ್ರಾಮಾಣಿಕ ಅಧಿಕಾರಿಗಳನ್ನು ಬ್ಲ್ಯಾಕ್‌ ಮೇಲ್ ಮಾಡಲು ಬಳಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯ. ಲೋಕಾಯುಕ್ತಕ್ಕೆ ಬರುವ ಸುಮಾರು 25,000 ಪ್ರಕರಣಗ 7,000 2 8,000 ಪ್ರಕರಣಗಳು ಸುಳ್ಳು ದೂರುಗಳಾಗಿರುತ್ತವೆ. ಇಂತಹ ಸುಳ್ಳು ದೂರುದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಡಿಸಿ ಡಾ.ಎಂ.ಆರ್.ರವಿ, ಜಿಪಂ ಸಿಇಒ ಡಾ.ಪ್ರವೀಣ್.ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಕಾನೂನು ಸೇವೆಗಳು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್, ಲೋಕಾಯುಕ್ತ ಉಪ ನಿಬಂಧಕ ಎನ್ .ವಿ.ಅರವಿಂದ್, ಡಿಸಿಎಫ್ ಸರಿನಾ ಸಿಕ್ಕಲಿಗರ್, ಲೋಕಾಯುಕ್ತ ಎಸ್ಪಿ ಅಂತೋನಿ ಜಾನ್, ಎಸಿ ಡಾ.ಮೈತ್ರಿ ಎಚ್.ಪಿ.ಎಸ್, ಡಿವೈಎಸ್ಪಿಗಳಾದ ವೆಂಕಟೇಶ್, ಸುನೀಲ್ ಕುಮಾರ್, ಇನ್ ಸೆಕರ್ ನ ಸ್ಪೆಕ್ಟರ್‌ ರೇಣುಕಾ, ಆಂಜಿನಪ್ಪ ಇತರರು ಇದ್ದರು.
- ಬಿ.ವೀರಪ್ಪ ರಾಜ್ಯ ಉಪ ಲೋಕಾಯುಕ್ತ, ಬೆಂಗಳೂರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net