ಮೈಸೂರು ಸರ್ಕಾರದ ಅಧಿಸೂಚನೆ ಸಂಖ್ಯೆ ಜಿ1282ಎಫ್‌ಟಿ 79-30-61 ರಂತೆ 1931 ಜೂನ್ 30ರಂತೆ ಶ್ರೀನಿವಾಸಪುರ ತಾಲೂಕಿನ ಗುಡಿಪಲ್ಲಿ, ಕೊತ್ತೂರು, ಹೊಸಹುಡ್ಯ, ಯಡಿಗಾನಪಲ್ಲಿ, ಬೈಕೊತ್ತೂರು, ಬೈರಗಾನಹಳ್ಳಿ, ಕುರುಗುಂಟ್ಲಪಲ್ಲಿ, ಮರಸನಪಲ್ಲಿ, ಕೊತ್ತಹುಡ್ಗ ಮತ್ತು ಪಾತನಪಲ್ಲಿ ಗ್ರಾಮಗಳ ವ್ಯಾಪ್ತಿಯ ಒಟ್ಟು 3,037 ಎಕರೆ ಅರಣ್ಯ ಪ್ರದೇಶವನ್ನು ಪ್ರದೇಶವನ್ನು ಸೆಕ್ಷನ್ 4 ರಂತೆ ಜಿಗಾಲಕುಂಟೆ ಬ್ಲಾಕ್ ಅರಣ್ಯ ಪ್ರದೇಶವೆಂದು ಅಧಿಸೂಚಿಸಲಾಗಿತ್ತು. ನಂತರದ ದಿನಗಳಲ್ಲಿ 2724 ಎಕರೆ 2 ಗುಂಟೆ ಪ್ರದೇಶವನ್ನು ಮೈಸೂರು ಫಾರೆಸ್ಟ್ ರೆಗ್ಯೂಲೇಷನ್ ಸೆಕ್ಷನ್ 17ರಂತೆ ಜಿಗಾಲಕುಂಟೆ ರಾಜ್ಯ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ.