ಅಪರಾಧ ಕೃತ್ಯತಡೆಗೆ ಡ್ರೋನ್​ ಗಸ್ತು

ಕೋಲಾರ ಜಿಲ್ಲೆಯ ಎ.ಕೊತ್ತೂರು ಭಾಗದಲ್ಲಿ ಡ್ರೋನ್​ ಮೂಲಕ ಗಸ್ತು ನಡೆಸಿರುವುದು.
ಕೋಲಾರ ಜಿಲ್ಲೆಯ ಎ.ಕೊತ್ತೂರು ಭಾಗದಲ್ಲಿ ಡ್ರೋನ್​ ಮೂಲಕ ಗಸ್ತು ನಡೆಸಿರುವುದು.
Published on
ಕೋಲಾರ: ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋಲಾರ ಜಿಲ್ಲಾ ಪೊಲೀಸ್​ ಇಲಾಖೆಯಿಂದ ವಿನೂತಿನ ಡ್ರೋಗ್​ ಗಸ್ತು ಪ್ರಾರಂಭಿಸಲಾಗಿದೆ.
ಪುಂಡುಪೋಕರಿಗಳು, ಜೂಜುಗಾರರು, ಮಾದಕ ವಸ್ತುಗಳ ಮಾರಾಟ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆ ಎಸಗುವವರ ಹೆಡೆಮುರಿ ಕಟ್ಟಲು ಡ್ರೋನ್​ ಗಸ್ತು ಮತ್ತಷ್ಟು ಶಕ್ತಿ ನೀಡಿದಂತಾಗಿದೆ.
ಕಳ್ಳತನ, ಗುಂಪುಕಟ್ಟಿಕೊಂಡು ಜಗಳ ಮಾಡುವುದು, ರ್ನಿಜನ ಪ್ರದೇಶಗಳಲ್ಲಿ ಇಸ್ಪೀಟ್​ ಆಟ, ಕೋಳಿ ಪಂದ್ಯದಲ್ಲಿ ತೊಡಗಿರುವ ಸೇರಿದಂತೆ ಹಲವಾರು ಅಪರಾಧ ಚಟುವಟಿಕೆಗಳ ಪತ್ತೆ ಹಚ್ಚಲು, ಈಗಾಗಲೇ ಗ್ರಾಮೀಣ, ನಗರ, ಪಟ್ಟಣ ಪ್ರದೇಶಗಳಲ್ಲಿ ಪೊಲೀಸ್​ ಗಸ್ತು ವ್ಯವಸ್ಥೆ ಮಾಡಲಾಗಿದೆ. ತುರ್ತು ಸಂದರ್ಭಕ್ಕೆ 112 ತಂಡ ಮೀಸಲಿರಿಸಲಾಗಿದೆ.
ಸೂಕ್ಷ$್ಮ ಪ್ರದೇಶಗಳನ್ನು ಗುರುಸಿ ಸಿಸಿ ಟಿ.ವಿಯನ್ನು ಸಹ ಅಳವಡಿಸಲಾಗಿದೆ. ಇದೀಗ ಪೊಲೀಸರು ಸಿಸಿ ಟಿವಿ ಜತೆಗೆ ಡ್ರೋನ್​ ಬಳಸುತ್ತಿದ್ದಾರೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿ, ಸಿಬ್ಬಂದಿಗೆ ತರಬೇತಿ ನೀಡಿ ನಿಯೋಜಿಸಲಾಗಿದೆ. ಅವರು ನಿತ್ಯ ಆಯ್ದ ಸ್ಥಗಳಲ್ಲಿ ಡ್ರೋನ್​ ಗಸ್ತು ನಡೆಸುವ ಮೂಲಕ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದಾರೆ.
ಈಗಾಗಲೇ ಬೆಂಕಿ ಅವಘಡ ಹಾಗೂ ಪ್ರಾಣಿಗಳ ಚಲನವಲನ ಪತ್ತೆಗೆ ಅರಣ್ಯ ಇಲಾಖೆ ಡ್ರೋನ್​ ಆಧಾರಿತ ಕಣ್ಗಾವಲು ವ್ಯವಸ್ಥೆ ಬಳಸುತ್ತಿದೆ. ಕೃಷಿಗೆ ಔಷಧ ಸಿಂಪಡಣೆ ಇರಬಹುದು, ಕಾರ್ಯಕ್ರಮಗಳ ವಿಡಿಯೊ, ಫೋಟೋ ತೆಗೆಯಲು ಡ್ರೋನ್​ ಬಳಸಲಾಗುತ್ತಿದೆ. ಇಚೆಗೆ ಸಭೆ, ಸಮಾರಂಭಗಳಲ್ಲೂ ಪೊಲೀಸರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು, ರಾತ್ರಿ ಗಸ್ತು ಹೆಚ್ಚಿಸುವುದು, ಡ್ರೋನ್​ ಬಳಕೆಯಿಂದ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಬಹುದು ಎಂಬುದು ಇಲಾಖೆಯ ನಂಬಿಕೆಯಾಗಿದೆ.
ಕಾಡು, ಬೆಟ್ಟ ಗುಡ್ಡಗಳ ತಪ್ಪಲು, ಜನ ಸಂದಣಿ ಪ್ರದೇಶಗಳಲ್ಲಿ ನಡೆಯುವ ಅಪರಾಧ ಚಟುವಟಿಕೆ ಪತ್ತೆ ಹಚ್ಚಲು ಡ್ರೋನ್​ ಪೆಟ್ರೋಲಿಂಗ್​ ನೆರವಾಗಲಿದೆ. ಇಂಥ ಪ್ರದೇಶದಲ್ಲಿ ಯಾರೂ ಬರಲ್ಲವೆಂದು ಜೂಜಾಡುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಕೆಲವರು ನಿರತರಾಗುತ್ತಾರೆ. ಅವರಿಗೆ ಕಡಿವಾಣ ಹಾಕಬಹುದು. ದಾಳಿ ವೇಳೆ ಪರಾರಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ತಕ್ಷಣ ಡ್ರೋನ್​ ಬಳಿಸಿ ಆರೋಪಿಗಳ ಮುಖಚಯೆರ್ ಕಂಡುಹಿಡಿಯಬಹುದು, ಎಲ್ಲಿ ಪರಾರಿಯಾಗುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು.
* ಈಗಾಗಲೇ ಎಲ್ಲೆಲ್ಲಿ ಗಸ್ತು
ವೇಮಗಲ್​ ಪೊಲೀಸ್​ ಠಾಣಾ ವ್ಯಾಪ್ತಿಯ ಕ್ಯಾಲನೂರು ಕೆರೆ, ಗ್ರಾಮ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣಾ ವ್ಯಾಪ್ತಿಯ ಹರಳಕುಂಟೆ ಮತ್ತು ಭಟ್ರಹಳ್ಳಿ, ಗೌನಿಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯ ಸೊನ್ನಪಲ್ಲಿ, ಬೈರಗಾನಪಲ್ಲಿ ಮತ್ತು ಎ.ಕೊತ್ತೂರು, ಶ್ರೀನಿವಾಸಪುರ ಠಾಣಾ ವ್ಯಾಪ್ತಿಯ ದಳಸನೂರು, ರೋಜೊರಪಲ್ಲಿ, ಮುಳಬಾಗಿಲು ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಮುಜಾವರ್​ ಮೊಹಲ್ಲಾ ನೂಗಲುಬಂಡೆ, ಶಮೀರ್​ ಮೊಹಲ್ಲಾ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಡ್ರೊನ್​ ಮುಖಾಂತರ ಗಸ್ತು ನಡೆಸಲಾಗಿದೆ.
* ನಿಗಾ ಇಡಲು ಸಹಾಯ
10 ಕಿ.ಮೀ ವ್ಯಾಪ್ತಿವರೆಗಿನ ಪ್ರದೇಶವನ್ನು 500 ಮೀಟರ್​ ಎತ್ತರದವರೆಗೆ ಹಾರಾಟ ನಡೆಸಿ ಡ್ರೋನ್​ಗಳ ಮೂಲಕ ಪರಿಶೀಲನೆ ನಡೆಸಬಹುದು. ಜನದಟ್ಟಣೆ ಪ್ರದೇಶ, ಬೆಟ್ಟಗುಡ್ಡ, ದಟ್ಟ ಕಾಡು, ಬೆಟ್ಟದ ತಪ್ಪಲು ಸೇರಿದಂತೆ ವಿವಿಧ ಪ್ರದೇಶದಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇಡಲು ಸಹಾಯವಾಗುತ್ತದೆ.
ಜಾಯ್​ ಸ್ಟಿಕ್​ ಬಳಿ ಮೊಬೈಲ್​ ಫೋನ್​ ಇರಿಸಿ ಡ್ರೋನ್​ ಸೆರೆ ಹಿಡಿಯುವ ದೃಶ್ಯಗಳನ್ನು ಲೈವ್​ ಆಗಿ ವೀಕ್ಷಿಸಬಹುದು. ಕೆಲವೆಡೆ ನೆಟ್ವರ್ಕ್​ ಇಲ್ಲದ ಸ್ಥಳಗಳಲ್ಲಿ ವಿಡಿಯೊವನ್ನು ಕಚೇರಿಗೆ ತಂದು ಪರಿಶೀಲಿಸಿ ಕ್ರಮ ವಹಿಸಬಹುದು.
* ಪೊಲೀಸರಿಗೆ ತರಬೇತಿ
ಕೋಲಾರ ಜಿಲ್ಲಾ ಪೊಲೀಸರು ಕೆಲ ದಿನಗಳಿಂದ ವಿವಿಧೆಡೆ ಮೂರು ಡ್ರೋನ್​ಗಳ ಮೂಲಕ ಗಸ್ತು ನಡೆಸಲಾಗುತ್ತಿದ್ದು, ಅಪರಾಧ ಚಟುವಟಿಕೆಗಳ ಮೇಲಿ ಕಣ್ಣಿಡಲಾಗಿದೆ. ಇದಕ್ಕಾಗಿಯೇ 8 ಕಾನ್​ಸ್ಟೆಬಲ್​ಗಳಿಗೆ ಬೆಂಗಳೂರಿನಲ್ಲಿ ತರಬೇತಿ ಕೊಡಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಒಂದು ದಿನ ಡ್ರೋನ್​ ಬಳಸಿ ಪರಿಶೀಲನೆ ನಡೆಸುತ್ತಿರುತ್ತಾರೆ.
ಕೋಟ್​...
ಹೆಚ್ಚು ಅಪರಾಧ ಚಟುವಟಿಕೆಗಳು ನಡೆಯುವ ಸ್ಥಳಗಳನ್ನು ಗುರುತಿಸಲಾಗಿದ್ದು, 3 ಡ್ರೋನ್​ಗಳ ಮೂಲಕ ಸ್ಥಳಗಳಲ್ಲಿ ಗಸ್ತು ನಡೆಸಲಾಗುತ್ತಿದೆ. ಹೆಚ್ಚು ಗಡಿ ಪ್ರದೇಶಗಳಲ್ಲಿ ನಡೆಸಲಾಗುತ್ತಿದ್ದು, ಪೋಲೈಟ್​ ಪ್ರಾಜೆಕ್ಟ್​ ಆಗಿ ತೆಗೆದುಕೊಳ್ಳಲಾಗಿದೆ. ಅನುಕೂಲ ಆದರೆ ಇನ್ನಷ್ಟು ಡ್ರೋನ್​ಗಳನ್ನು ಖರೀದಿ ಗಸ್ತು ಹೆಚ್ಚಿಸಲಾಗುವುದು.
- ಬಿ.ನಿಖಿಲ್​, ಕೋಲಾರ ಎಸ್ಪಿ,
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net