ಕಲ್ಲು ಬಂಡೆ ಬಿದ್ದು ವಾಹನ ಚಾಲಕ ಸಾವು

ಕಲ್ಲುಗಣಿಯಲ್ಲಿನ ಹಿಟಾಚಿ  ವಾಹನ ಜಖಂಗೊಂಡಿರುವುದು.
ಕಲ್ಲುಗಣಿಯಲ್ಲಿನ ಹಿಟಾಚಿ ವಾಹನ ಜಖಂಗೊಂಡಿರುವುದು.
Published on
ಕೋಲಾರ/ವೇಮಗಲ್​: ಕಲ್ಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಹಿಟಾಚಿ ವಾಹನದ ಮೇಲೆ ಕಲ್ಲು ಬಂಡೆ ಬಿದ್ದು ಚಾಲಕ ಮೃತಪಟ್ಟಿದ್ದು, ಇದನ್ನು ಅಪಘಾತ ಎಂದು ಬಿಂಬಿಸಿ ಸಾ ನಾಶ ಪಡಿಸಲು ಯತ್ನಿಸಿರುವ ಟನೆ ತಾಲೂಕಿನ ಬುಸನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಚೌಡಪ್ಪ ಎಂಬುವರಿಗೆ ಸೇರಿದ ಕಲ್ಲು ಗಣಿಯಲ್ಲಿ ಆಂಧ್ರಮೂಲಕ ಶಣ್ಮುಗಂ (36) ಮೃತ ಪಟ್ಟಿದ್ದಾನೆ. 4 ವರ್ಷಗಳಿಂದ ಚಾಲಕ ಶಣ್ಮುಗಂ ಹಿಟಾಚಿ ಚಾಲಕನಾಗಿ ನಿರ್ವಹಿಸಿಕೊಂಡು ಬಂದಿದ್ದು, ಕಲ್ಲು ಗಣಿಯಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದ. ಗಣಿಯ ಮೇಲಿಂದ ಕಲ್ಲು ಬಂಡೆ ಉರಿಳಿ ಹಿಟಾಚಿ ವಾಹನದ ಮೇಲೆ ಬಿದಿದ್ದು, ಚಾಲಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಶವನ್ನು ನಗರ ಎಸ್​ಎನ್​ಆರ್​ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಟನೆಯ ಬಗ್ಗೆ ಬೇರೆಯವರಿಗೆ ಗೊತ್ತಾಗುವ ಮುಂಚೆಯೇ ಅಪಘಾತ ಎಂದು ಬಿಂಬಿಸಲು ಗಣಿ ಮಾಲೀಕ ಯತ್ನಿಸಿ, ದ್ವಿಚಕ್ರ ವಾಹನವನ್ನು ಟಿಪ್ಪರ್​ ವಾಹನದ ಕೆಳಗೆ ಸೇರಿಸಿದ್ದಾನೆ. ಅಪಘಾತದಿಂದಲೇ ಷಣ್ಮುಗಂ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಸಾ ನಾಶ ಪಡಿಸಲು ಯತ್ನಿಸಿದ್ದಾನೆ ಎಂದು ಸ್ಥಳಿಯ ಕಾರ್ಮಿಕರು ಹಾಗೂ ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ವೇಮಗಲ್​ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಂಬಂಧಿಕರು ನೀಡಿದ ದೂರನ್ನು ದಾಖಲಿಸಿಕೊಂಡಿದ್ದಾರೆ.
* ಅಪಘಾತ ಎಂದು ಬಿಂಬಿಸುವ ನಾಟಕ
ಬುಸನಹಳ್ಳಿ ಗ್ರಾಮ ಸಮೀಪದ ಕಲ್ಲುಗಣಿಯ ಮಾಲೀಕರಾದ ತಲಗುಂದ, ಪುರಹಳ್ಳಿ ಚೌಡಪ್ಪ ಮತ್ತು ಮಂಜುನಾಥ ಟಿಪ್ಪರ್​ ವಾಹನಕ್ಕೆ ಹಿಂಬದಿ ದ್ವಿಚಕ್ರವಾಹನವನ್ನು ಇರಿಸಿ ಫೋಟೊಗಳನ್ನು ತೆಗೆದು ವ್ಯಾಟ್ಸಪ್​ನಲ್ಲಿ ಹರಿ ಬಿಟ್ಟಿದ್ದಾರೆ. ಇದು ಕಲ್ಲು ಗಣಿಯಲ್ಲಿ ಜರುಗಿರುವ ಟನೆಯಲ್ಲಿ, ವಾಹನ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ.
* ಸಾಕ್ಷಿ ನಾಶಕ್ಕೆ ಯತ್ನ
ವಿಜ್ಞಾನ ಇಲಾಖೆಯ ಉಪನಿರ್ದೇಶಕ ಕೋದಂಡರಾಮಯ್ಯ, ಮಂಜುನಾಥ, ಚೌಡಪ್ಪ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಷಣ್ಮುಗ ಪತ್ನಿ ಜಿವೀತ ವೇಮಗಲ್​ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಟನೆಯ ವಿಚಾರವನ್ನು ಮರೆಮಾಚಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ, ಪ್ರಕರಣವು ನನ್ನ ತಲೆಗೆ ಬರುತ್ತದೆ ಎಂದು ತಿಳಿದು ಮೃತ ವ್ಯಕ್ತಿಯನ್ನು ಅಪಘಾತ ಆಗಿರುವಂತೆ ಬಿಂಬಿಸಲು ಗಣಿ ಪ್ರದೇಶದಿಂದ ಸುಮಾರು ಅರ್ಧ ಕಿಲೋಮೀಟರ್​ ದೂರಕ್ಕೆ ಮೃತ ಗಂಡನನ್ನು ಸಾಗಿಸಿ ಅಲ್ಲಿಗೆ ಲಾರಿಯನ್ನು ಕರೆಸಿಕೊಂಡು ಹಿಂಬದಿಯಲ್ಲಿ ಶವವನ್ನು ಹಾಗೂ ಗಂಡನಿಗೆ ಸೇರಿದ ಬೈಕ್​ ಇಟ್ಟು ಅಪಘಾತ ಆದ ರೀತಿ ಬಿಂಬಿಸಿ ಸಾಕ್ಷ್ಯ ನಾಶ ಪಡಿಸಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಪತ್ನಿ ಜಿವೀತ ಆರೋಪಿಸಿದ್ದಾರೆ.
* ತಿಂಗಳ ಮಾಲೂಲಿ ಆರೋಪ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಡಿಡಿ ಅಧಿಕಾರಿಯವರಿಗೆ ಮಾಲೀಕರಾದ ಮಂಜುನಾಥ ಹಾಗೂ ಚೌಡಪ್ಪ ಪ್ರತಿ ತಿಂಗಳು ಮಾಮೂಲಿ ಕೊಟ್ಟು ಗಣಿಗಾರಿಕೆ ಮಾಡುತ್ತಿರುವುದು ನನಗೆ ಗಮನಕ್ಕೆ ಬಂದಿದೆ. ಗಣಿಗಾರಿಕೆ ವಿಚಾರದಲ್ಲಿ ಕೆಲ ಗ್ರಾಮಸ್ಥರು ಆಗಾಗ ಗಲಾಟೆ ಮಾಡುತ್ತಿದ್ದರು. ಈ ವಿಚಾರ ತಿಳಿದ ನಾನು ಕೆಲಸ ಬಿಡುವಂತೆ ಗಂಡನಿಗೆ ತಿಳಿಸಿದ್ದೆ. ಆಗ ಮಾಲೀಕರು ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿ ಕೆಲದಲ್ಲಿ ಮುಂದುವರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
* ಎಚ್ಚೆತ್ತುಕೊಳ್ಳದ ಅಧಿಕಾರಿಗಳು
ಜಿಲ್ಲೆಯ ಟೇಕಲ್​, ತಲಗುಂದ, ಬುಸನಹಳ್ಳಿ ಸಮೀಪದ ಹೆಚ್ಚಾಗಿ ಕಲ್ಲುಗಣಿ, ಕ್ವಾರಿ ನಡೆಯುತ್ತಿದೆ. ನಿಯಮಗಳ ಉಲ್ಲಂನೆ ಬಗ್ಗೆ ಸಲ್ಲಿಕೆಯಾಗಿದ್ದ ದೂರುಗಳು, ಕಾರ್ಮಿಕರು ಮೃತಪಡುತ್ತಿದ್ದ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಲೀಕರಿಗೆ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು ಸಹ ಎಚ್ಚತ್ತುಕೊಂಡಿಲ್ಲ.
ಕಲ್ಲುಗಣಿಯಲ್ಲಿ ಚಾಲಕ ಮತಪಟ್ಟಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಎ್​ಐಆರ್​ ಮಾಹಿತಿ ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು.
- ಕೊಂದಂಡರಾಮಯ್ಯ, ಉಪ ನಿರ್ದೇಶಕ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕೋಲಾರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net