ಯಾವುದೇ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಬೇಕಾದರೆ ನಿಯಮ ಪಾಲನೆ ಮಾಡಬೇಕು. ಆನ್‌ಲೈನ್ ನೋಂದಣಿ ಮಾಡಬೇಕಾದರೆ ಮರಣ ಹೊಂದಿರುವವ ಆಧಾರ್ ಕಾರ್ಡ್, ಪಡಿತರ ಚೀಟಿ , ಮಾಹಿತಿದಾರರ ಆಧಾರ್ ಕಾರ್ಡ್, ದೂರವಾಣಿ ಸಂಖ್ಯೆ, ನಮೂನೆ-2 ಮಹಜರ್ ವರದಿ ನೀಡಬೇಕು. ವ್ಯಕ್ತಿ ಮೃತಪಟ್ಟ 21 ದಿನದ ನಂತರ ನೋಟರಿ ಸಲ್ಲಿಸಬೇಕು, ಆಗ ಮರಣ ಘಟನೆಯ ನೋಂದಣಿ ಮಾಡಲು ಸಾಧ್ಯ. ಆದರೆ, ಅರ್ಜಿದಾರನ ದೂರವಾಣಿ ಸಂಖ್ಯೆ ಬದಲು ಅನಾಮಧೇಯ ಸಂಖ್ಯೆ ಹಾಕಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿರುವುದು ಪದೇಪದೆ ಮರುಕಳಿಸುತ್ತಲೇ ಇದೆ.