ಡಿ.ಕೆ.ರವಿ ಡಿಜಿಟಲ್​ ಸಹಿ ಪೋರ್ಜರಿ.?

ಕೋಲಾರ ಡಿಸಿ ಕಚೇರಿ
ಕೋಲಾರ ಡಿಸಿ ಕಚೇರಿ
Published on
ಕೋಲಾರ: ತಾಲೂಕಿನ ಕೊಂಡರಾನಹಳ್ಳಿ ಗ್ರಾಮದ ಜಮೀನು ಭೂ ಪರಿವರ್ತನೆ ಆದೇಶದಲ್ಲಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಕೊಂಡರಾಜನಹಳ್ಳಿ ಗ್ರಾಮದ ಸರ್ವೆ ನಂಬರ್​ 46/1ರ 0-35 ಗುಂಟೆ ಜಮೀನಿನ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಾಖಲೆ ಸಿದ್ದವಾಗಿರುವುದು ನಕಲಿಯಾಗಿದೆ. ಇದರಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಸಹಿಯನ್ನೇ ಪೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿದೆ.
ಒಂದೇ ಸರ್ವೇ ನಂಬರ್​ ಜಾಗವನ್ನು 2013 ಏಪ್ರಿಲ್​ 10 ಹಾಗೂ 2023ರ ಡಿಸೆಂಬರ್​ 29ರಂದು ಎರಡು ಬಾರಿ ಭೂ ಪರಿವರ್ತನೆ ಮಾಡಿ ಆದೇಶಿಸಲಾಗಿದೆ. ಇದನ್ನು ಗಮನಿಸಿದಾಗ ಅಕ್ರಮವೆಸಗಿರುವುದು ಪತ್ತೆಯಾಗಿದೆ.
ಡಿ.ಕೆ.ರವಿ ಜಿಲ್ಲಾಧಿಕಾರಿ ಸೇವಾ ಅವಧಿಯು 2013ರ ಆಗಸ್ಟ್​ ನಿಂದ 2014ರಿಂದ ಅಕ್ಟೋಬರ್​ವರೆಗೆ ಕರ್ತವ್ಯ ನಿರ್ವಹಿಸಿದ್ದು, ಆ ಅವಧಿಯಲ್ಲಿ ಡಿಜಿಟಲ್​ ಸಹಿ ಇರುವುದಿಲ್ಲ. ಆದರೆ ಸುಳ್ಳು ದಾಖಲೆಗಳನ್ನು ನೀಡಿ ಆದೇಶ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಖಾತೆದಾರ ನಾರಾಯಣಸ್ವಾಮಿ ಹಾಗೂ ಪಂಚಾಯಿತಿ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಕೆಯಾಗಿತ್ತು.
ತನಿಖೆಗಾಗಿ ಜಿಲ್ಲಾಡಳಿತದಿಂದ ತಹಶೀಲ್ದಾರ್​ ಹಾಗೂ ತಾ.ಪಂ ಇಒ ಅವರಿಗೆ ನಿರ್ದೇಶನ ಬಂದಿತ್ತು, ಆದರಂತೆ ತಹಶೀಲ್ದಾರ್​ ವರದಿಯಂತೆ ಆರೋಪ ಸಾಭೀತಾಗಿದ್ದರು ಸಹ ತಪ್ಪಿಸ್ಥ ಅಧಿಕಾರಿಗಳ ಯಾವುದೇ ರೀತಿ ಕ್ರಮ ಆಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
* ತಪ್ಪಿತಸ್ಥರ ವಿರುದ್ಧ ಯಾಕಿಲ್ಲ ಕ್ರಮ..?
ಕಳೆದ 2013ರಲ್ಲೇ ಭೂ ಪರಿವರ್ತನೆ ಮಾಡಲಾಗಿದೆ ಎಂಬುದಾಗಿ ಜಿಲ್ಲಾಧಿಕಾರಿಗಳ ಡಿಜಿಟಲ್​ ಸಹಿಯನ್ನು ಪೋರ್ಜರಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ಸಂಬಂಧಪಟ್ಟ ಭೂ ಮಾಲೀಕರ ವಿರುದ್ಧ ಕ್ರಮಿನಲ್​ ಪ್ರಕರಣ ದಾಖಲಿಸುವ ಹಾಗೂ 2023ರ ಭೂ ಪರಿವರ್ತನೆ ಆದೇಶ ಪ್ರತಿಯೂ ತಂತ್ರಾಂಶದಲ್ಲಿ ಸಾರ್ವಜನಿಕವಾಗಿ ಲಭ್ಯವಿದ್ದರೂ ಸಹ ಪರಿಶೀಲಿಸಿಕೊಂಡು ದೃಢಪಡಿಸಿಕೊಳ್ಳದೇ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇ ಔಟ್​ ವಿನ್ಯಾಸ ಅನುಮೋದನೆಯಿಲ್ಲದೇ ನಕಲಿ ದಾಖಲೆಗಳ ಆಧಾರದ ಮೇರೆಗೆ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಖಾತೆಗಳನ್ನು ಮಾಡಿರುವವರ ವಿರುದ್ಧ ತನಿಖೆ ನಡೆಸಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಜಿಲ್ಲಾಧಿಕಾರಿಗಳಿಂದ ನಿರ್ದೇಶಿಲ್ಪಟ್ಟಿದ್ದು, ಪಂಚಾಯಿತಿ ಅಧಿಕಾರಿಗಳು ಕ್ರಮಜರುಗಿಸಬೇಕಾಗಿದೆ.
ಕೋಟ್​...
ಹಿಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರ ಸಹಿ ಪೋರ್ಜರಿ ಮಾಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಸಾಭೀತಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳವಲ್ಲಿ ಅಧಿಕಾರಿಗಳು ವಿಳಂಭ ತೋರುತ್ತಿದೆ.
- ಡಿ.ಮುನೇಶ್​, ಚಂಜಿಮಲೆ, ದೂರುದಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net