ನೇಮಕಾತಿ ಹಗರಣ ವಿಚಾರಣೆಗೆ ನಿರ್ದೇಶನ

ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ವೆಂಕಟಚಲಪತಿ ಮಾತನಾಡಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಎಪಿ ಜಿಲ್ಲಾಧ್ಯಕ್ಷ ವೆಂಕಟಚಲಪತಿ ಮಾತನಾಡಿದರು.
Published on
ಕೋಲಾರ: ಕೋಲಾರ ಹಾಲು ಒಕ್ಕೂಟದಲ್ಲಿ (ಕೋಮುಲ್​) ನೇಮಕಾತಿ ಸೇರಿದಂತೆ ನಡೆದಿರುವ ಹಗರಣ ವಿರುದ್ಧ ಹೋರಾಟ ನಡೆಸುತ್ತಿದ್ದು, ನ್ಯಾಯಾಲಯದಲ್ಲಿ ಮೊದಲ ಜಯ ಸಿಕ್ಕಿದೆ ಎಂದು ಎಎಪಿ ಜಿಲ್ಲಾಧ್ಯಕ್ಷ ವೆಂಕಟಚಲಪತಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಗರಣ ಸಂಬಂಧ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಅಲ್ಲಿ ಎ್​ಐಆರ್​ ದಾಖಲಿಸದ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೋರೆ ಹೋಗಲಾಗಿತ್ತು, ಅಲ್ಲಿ ವಾದವಿವಾದಗಳು ನಡೆದು ಎದುರಾಳಿಗಳ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿ, ಗಡವು ನೀಡಿದೆ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಧಾವೆ ಹೂಡಲಾಗಿತ್ತು, ಮೊದಲ ಜಯದಲ್ಲಿ 99 ಮಂದಿ ವಿಚಾರಣೆ ನಡೆಸಲು ಪೊಲೀಸ್​ ಇಲಾಖೆಗೆ ನಿರ್ದೇಶನ ಬಂದಿದೆ. ಅವರು ಪ್ರಮಾಣಿಕವಾಗಿ ವಿಚಾರೆ ನಡೆಸಿ ನ್ಯಾಯಾಲಯಕ್ಕೆ ವರದಿ ಒಪ್ಪಿಸಿದರೆ ಸತ್ಯಸತ್ಯತೆ ಹೊರಲಿದೆ. ಈ ವಿಚಾರದಲ್ಲಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯದೊರಕಿಸುವುದು ನಮ್ಮ ಹೋರಾಟದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಒಕ್ಕೂಟದಲ್ಲಿ ಖಾಲಿಯಿದ್ದ 72 ಹುದ್ದೆಗಳಿಗೆ ನೇಮಕಾತಿ ನಡೆಯಿತು, ಅದರಲ್ಲಿ ಪರೀಕ್ಷೆ ಬರೆದು ಅರ್ಹತೆ ಹೊಂದಿದ ಕೆಲವರು ಅವಕಾಶ ವಂಚಿತರಾಗಿದ್ದಾರೆ. ಹಿಂದಿನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳು ದುಡ್ಡು ನೀಡಿದ ಅನರ್ಹ ಅಭ್ಯರ್ಥಿಗಳಿಗೆ ಮಾತ್ರ ಎರಡು ಒಎಂಆರ್​ ಸೃಷ್ಟಿಸಿ ಕೆಲಸ ನೀಡಿದ್ದಾರೆ, ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ, ಎಂಡಿ ಗೋಪಾಲಮೂರ್ತಿ ಸೇರಿದಂತೆ ಕೆಲ ನಿರ್ದೇಶಕರು ಅಧಿಕಾರಿಗಳಿಗೂ ನೊಟೀಸ್​ ಜಾರಿಯಾಗಿದೆ ಎಂದರು.
ಇಡಿ, ಲೋಕಾಯುಕ್ತ ಸಂಸ್ಥೆಯಿಂದ ತನಿಖೆಯು ನಡೆಯುತ್ತಿದೆ, ಒಕ್ಕೂಟದ ಅಧಿಕಾರಿ ಗೀತಾ ಎಂಬುವರನ್ನು ವಿಚಾರಣೆ ನಡೆಸಲು ಅನುಮತಿ ಕೋರಿ ಲೋಕಾಯುಕ್ತರು ಆಡಳಿತ ಮಂಡಳಿಗೆ ಪತ್ರ ಬರೆದಿದ್ದರೆ, ಅನುಮತಿ ನೀಡಲು ತಿರಸ್ಕರಿಸಿದ್ದಾರೆ. ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡರು ಯಾವುದೇ ತನಿಖಾ ಸಂಸ್ಥೆಗೆ ಸ್ವಾಗತಿಸುವುದಾಗಿ ಹೇಳುತ್ತಾರೆ, ಆದರೆ ಅನುಮತಿಗೆ ತಿರಸ್ಕರಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ದೆಹಲಿಗೆ ಭೇಟಿ ನೀಡಿ ಕೋಮುಲ್​ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ, ಸಂಸದ ರಾಹುಲ್​ ಗಾಂಧಿ ಅವರಗಮನಕ್ಕೂ ತಂದು ನೇಮಕಾತಿ ರದ್ದುಗೊಳಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ದೇಶದಲ್ಲಿ ನೀಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ ನಡೆಸಿ ಮರು ಪರೀೆ ನಡೆಸಲು ಪಟ್ಟು ಹಿಡಿದ ಹಾಗೆ, ಕೋಮುಲ್​ ವಿಚಾರದಲ್ಲೂ ಸಹ ಇದೇ ಬದ್ಧತೆಯನ್ನು ತೋರಲಿ. ಇದರ ವಿರುದ್ಧ ಎರಡೂ ಜಿಲ್ಲೆಯ ಜನಪ್ರತಿನಿಧಿಗಳು ಯಾಕೆ ಧ್ವನಿ ಎತ್ತುವಲ್ಲಿ ವಿಲರಾಗಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡ ರಮೇಶ್​ ಬಾಬು ಮತಿತರರು ಉಪಸ್ಥಿತರಿದ್ದರು.
* ಮೂಗಿನ ನೇರಕ್ಕೆ ವ್ಯವಸ್ಥೆ ಅಣಕು
ಜನಪರ ವೇದಿಕೆ ಜಿಲ್ಲಾಧ್ಯಕ್ಷ ಗೂಳಿಗಾನಹಳ್ಳಿ ನಾಗರಾಜ್​ ಮಾತನಾಡಿ, ಈ ಹಿಂದಿನ ನಿರ್ದೇಶಕರು, ಅಧಿಕಾರಿಗಳು ಅಭ್ಯರ್ಥಿಗಳಿಗೆ ಅನ್ಯಾಯವೆಸಗಿದ್ದಾರೆ, ಮೂಗಿನ ನೇರಕ್ಕೆ ಒಕ್ಕೂಟದ ವ್ಯವಸ್ಥೆಯನ್ನು ಅಣಕಿಸಿಕೊಂಡಿದ್ದು, ಹಿಂದಿನ ಆಡಳಿತ ಮಂಡಳಿ, ಪರೀಕ್ಷೆ ಮೇಲುಸ್ತುವಾರಿ ವಿವಿ, ಒಎಂಆರ್​ ಪ್ರಿಂಟ್​ ಮಾಡಿರುವ ಖಾಸಗಿ ಸಂಸ್ಥೆ ಮಾಲೀಕನನ್ನು ಜೈಲಿಗೆ ಕಳುಹಿಸಿ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವ ತನಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಕೋಟ್​...
ಒಕ್ಕೂಟದ ನೇಮಕಾತಿ ವಿಚಾರದಲ್ಲಿ ಪಾದರ್ಶಕತೆ ನಡೆದಿಲ್ಲ. ಮೊದಲು ದಾಖಲೆ ಪರಿಶೀಲನೆ ಮಾಡಬೇಕು ಅದರೆ ಈದಾಗಿಲ್ಲ, ಎಲ್ಲಾರಿಗೂ ಪರೀಕ್ಷೆ ನೀಡಿದ್ದಾರೆ. ಕೊನೆಗಳಿಗೆಯಲ್ಲಿ ನೇಕಾದವರಿಗೆ ಉದ್ಯೋಗ ನೀಡಿದ್ದು, ಅರ್ಹರನ್ನು ವಂಚಿಸಿದ್ದಾರೆ.
- ಚೇತನ್​ ಕುಮಾರ್​, ಅಭ್ಯರ್ಥಿ, ಹಾಸನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net