ಪಶು ಆಹಾರ ಬೆಲೆ ಏರಿಕೆಗೆ ಕಡಿವಾಣ ಹಾಕಲಿ | Dairy

ಖಾಸಗಿ ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ರೈತ ಸಂಘದ ಆಗ್ರಹ ಜಾನುವಾರುಗಳ ಕಾಯಿಲೆ ನಿಯಂತ್ರಣಕ್ಕೆ ವಿಶೇಷ ವೈದ್ಯರ ತಂಡ ರಚನೆಗೆ ಒತ್ತಾಯ
Dairy protest
ಮುಳಬಾಗಿಲು ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರರೆಡ್ಡಿಗೆ ರಾಜ್ಯ ರೈತ ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಫಾರೂಕ್ ಪಾಷ, ರಾಜೇಶ್, ಸುನಿಲ್‌ಕುವಾರ್, ಜುಬೇರ್‌ಪಾಷ, ನಾಗರಾಜ್, ಸುಪ್ರೀಂಚಲ, ಹೆಬ್ಬಣಿ ಆನಂದರೆಡ್ಡಿ, ಕಮದಟ್ಟಿ ಚಲಪತಿ, ಮಂಜುನಾಥ್, ದೇವರಾಜ್, ತಿಮ್ಮಣ್ಣ ಇದ್ದರು.Dairy protest
Published on: 

ಮುಳಬಾಗಿಲು: ಕಳಪೆ ಪಶು ಆಹಾರ ವಾರಾಟ ತಡೆದು, ಜಾನುವಾರುಗಳಿಗೆ ಬಾಧಿಸುತ್ತಿರುವ ಮಾರಕ ಕಾಯಿಲೆಗಳ ನಿಯಂತ್ರಣಕ್ಕೆ ಪಶುವೈದ್ಯರ ತಂಡ ರಚಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶಿವಶಂಕರರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂದ ಉಪಾಧ್ಯಕ್ಷ ಕೆ.ನಾರಾಯಣಗೌಡ ವಾತನಾಡಿ, ಬರಗಾಲ, ಬೆಲೆ ಕುಸಿತ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರೈತರು ಸಂಕಷ್ಟದಲ್ಲಿದ್ದು, ಹೈನುಗಾರಿಕೆಯೇ ಗ್ರಾಮೀಣ ಕುಟುಂಬಗಳಿಗೆ ಜೀವನಾಧಾರವಾಗಿದೆ. ಪಶು ಇಲಾಖೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಸಮರ್ಪಕ ಸೇವೆ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ವ್ಯಾಪಾರಿಗಳು ಪ್ರತಿ ಮೂಟೆ ಪಶು ಆಹಾರದ ಬೆಲೆಯನ್ನು 200 ರಿಂದ 500 ರೂ.ವರೆಗೆ ಹೆಚ್ಚಿಸುತ್ತಿದ್ದು, ಕಳಪೆ ಆಹಾರ ಮಾರಾಟಕ್ಕೂ ಕಡಿವಾಣವಿಲ್ಲದಂತಾಗಿದೆ. ಗಡಿಭಾಗದ ಗ್ರಾಮಗಳಲ್ಲಿ ವೈದ್ಯರ ಸೇವೆ ಇಲ್ಲದೆ ಆಂಧ್ರಪ್ರದೇಶದ ಪುಂಗನೂರು, ಪಲಮನೇರು ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಪಾಷ ವಾತನಾಡಿ, ಅನಾರೋಗ್ಯಕ್ಕೀಡಾದ ಹಸುಗಳಿಗೆ ಕೂಪನ್ ನೀಡಿದರೂ ವೈದ್ಯರು ಬರಲು 24 ಗಂಟೆ ವಿಳಂಬವಾಗುತ್ತಿದೆ. ಇದರಿಂದ ಜಾನುವಾರುಗಳು ಮೃತಪಡುತ್ತಿವೆ. ಸಂಚಾರಿ ವಾಹನಗಳ ಮೂಲಕ ಚಿಕಿತ್ಸೆ ಹಾಗೂ ರೈತರಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲವಾದಲ್ಲಿ ಸಾವಿರಾರು ಹಸುಗಳೊಂದಿಗೆ ಇಲಾಖೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಶಿವಶಂಕರರೆಡ್ಡಿ ಮಾತನಾಡಿ, ಖಾಸಗಿ ಪಶು ಆಹಾರದ ಬೆಲೆ ನಿಯಂತ್ರಿಸುವ ಅಧಿಕಾರ ಇಲಾಖೆಗಿಲ್ಲ. ಆದರೂ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದು ಎಂದರು.