ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ನೀಲ ನಕ್ಷೆಯು ಮೂಲಸೌಕರ್ಯ, ಆಡಳಿತ ವಿಭಾಗ, ಬೋಧನಾ ಬ್ಲಾಕ್, ವಸತಿ ನಿಯಲ, ಪ್ರತ್ಯೇಕ ಕಟ್ಟಡಗಳು, ರಸ್ತೆ, ಚರಂಡಿ ಹೀಗೆ ಏನೇಲ್ಲ ಸೌಲಭ್ಯಗಳು ಒಳಗೊಂಡಿರುತ್ತದೆ ಎಂಬರ ಪಟ್ಟಿ ಸಿದ್ಧಪಡಿಸಲಾಗಿದೆ. ಈಗಾಗಲೇ 400 ಆಸನ ಸಾಮರ್ಥ್ಯದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಿದ್ದು, ಅನೇಕ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಬಾಕಿ ಇರುವ ವಿಭಾಗಗಳನ್ನು ಮೆಡಿಕಲ್ ಕಾಲೇಜು ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಮಯದೊಳಗೆ ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೊರ ರೋಗಿಗಳ ವಿಭಾಗ (ಒಪಿಡಿ), ತುರ್ತು ಚಿಕಿತ್ಸಾ ಘಟಕ, ಡಯಾಗೋಸ್ಟಿಕ್ ಬ್ಲಾಕ್, ಶೈಕ್ಷಣಿಕ ಬ್ಲಾಕ್, ಪ್ರಯೋಗಾಲಯಗಳು, ಆಡಳಿತ ವಿಭಾಗ, ವಿದ್ಯಾರ್ಥಿ ನಿಲಯ, ಆಟದ ಮೈದಾನ, ಫಾರೆನ್ಸಿಕ್ ಮೆಡಿಸಿನ್, ಪಥಾಲಜಿ, ಮೈಕ್ರೋಬೈಯಾಲಜಿ, ಬಯೋಕೆಮಿಸ್ಟ್ರಿ, ಫಾರ್ಮಾಲಜಿ, ಅನಾಟೊಮಿ, ಗ್ರಂಥಾಲಯ, ಸಭಾಂಣ, ಬಾಲಕಿ-ಬಾಲಕಿಯರ ವಸತಿ ನಿಲಯ, ಸಭಾಂಗಣ ಹೀಗೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.