ಗ್ರಾಮೀಣ ಪ್ರತಿಭೆಗಳಿಗೆ ಸಿಗದ ಸೌಲಭ್ಯ | stadium

ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಾಗದ ಲಭ್ಯತೆ ಮತ್ತು ನಿಯವಾನುಸಾರ ಕ್ರೀಡಾಂಗಣ ನಿರ್ವಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Build a stadium
ಗುಂಡುತೋಪು ಜಾಗBuild a stadium
Published on: 
  • ಸುಸಜ್ಜಿತ ಕ್ರೀಡಾಂಗಣವಿಲ್ಲದೆ ಪರದಾಟ

  • ಪೋಲೇನಹಳ್ಳಿ ವ್ಯಾಪ್ತಿಯಲ್ಲಿ ನಿರ್ಮಿಸಲು ಒತ್ತಾಯ

    ಚಂದ್ರಪ್ಪ ಬೂದಿಕೋಟೆ

ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಸೂಕ್ತ ಮೈದಾನ, ಅಗತ್ಯ ಕ್ರೀಡಾ ಸೌಲಭ್ಯಗಳಿಲ್ಲದೆ ಅನೇಕ ಯುವಕರು ಪ್ರತಿಭೆ ಪ್ರದರ್ಶಿಸಲು ಅವಕಾಶವಿಲ್ಲದೆ ಕ್ರೀಡಾಕ್ಷೇತ್ರದಿಂದ ದೂರ ಉಳಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಬಂಗಾರಪೇಟೆ ತಾಲೂಕು ಪೋಲೇನಹಳ್ಳಿ ಸರ್ವೆ ನಂ.38ರಲ್ಲಿನ 3 ಎಕರೆ 3ಗುಂಟೆ ವಿಸ್ತೀರ್ಣದ ಗುಂಡು ತೋಪು ಜಾಗದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕೆಂದು ಗ್ರಾಮಸ್ಥರು, ಕ್ರೀಡಾಸಕ್ತರು ಒತ್ತಾಯಿಸಿದ್ದಾರೆ.

ಕಂದಾಯ ದಾಖಲೆಗಳ ಪ್ರಕಾರ ಸದರಿ ಜಮೀನು ಗುಂಡು ತೋಪು ಎಂದು ನಮೂದಾಗಿದ್ದು, ಸಾರ್ವಜನಿಕ ಬಳಕೆಗೆ ಮೀಸಲಾದ ವಿಶಾಲ ಪ್ರದೇಶ ಸೂಕ್ತ ನಿರ್ವಹಣೆಯಿಲ್ಲದೆ ಹಲವು ವರ್ಷಗಳಿಂದ ಪಾಳುಬಿದ್ದಿದ್ದು, ಈ ಜಾಗವನ್ನು ಅಭಿವೃದ್ಧಿಪಡಿಸಿ ಕ್ರೀಡಾಂಗಣ ನಿರ್ಮಿಸಿದರೆ ಪೋಲೇನಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ಯುವಕರು ಕಬಡ್ಡಿ, ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್‌ನಂತಹ ಕ್ರೀಡೆಗಳಲ್ಲಿ ನಿರಂತರ ಅಭ್ಯಾಸ ನಡೆಸಲು ಅನುಕೂಲವಾಗಲಿದೆ.

ಸ್ಥಳೀಯ ಕ್ರೀಡಾಂಗಣ ನಿರ್ವಾಣವಾಗಲಿ: ಪ್ರಸ್ತುತ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವಕರು ಕ್ರೀಡಾ ಅಭ್ಯಾಸ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಲು ಬಂಗಾರಪೇಟೆ ಪಟ್ಟಣ ಸೇರಿ ದೂರದ ಊರುಗಳಿಗೆ ತೆರಳಬೇಕಾದ ಪರಿಸ್ಥಿತಿಯಿದೆ. ಇದರಿಂದ ಸಮಯ ಹಾಗೂ ಹಣ ವ್ಯಯವಾಗುತ್ತಿದ್ದು, ಬಡ ಕುಟುಂಬಗಳ ಮಕ್ಕಳು ಖಾಸಗಿ ಕ್ರೀಡಾ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸ್ಥಳೀಯವಾಗಿಯೇ ಸರ್ಕಾರಿ ಕ್ರೀಡಾಂಗಣ ನಿರ್ವಾಣವಾದರೆ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ದೊರೆಯಲಿದೆ ಎನ್ನುತ್ತಾರೆ ಸ್ಥಳೀಯರು.

ಅಗತ್ಯ ಕ್ರಮಕ್ಕೆ ಆಗ್ರಹ

ಪಾಳುಬಿದ್ದಿರುವ ಸರ್ಕಾರಿ ಜಾಗವನ್ನು ಸಾರ್ವಜನಿಕ ಉಪಯೋಗಕ್ಕೆ ತರುವುದರ ಜತೆಗೆ ಅಕ್ರಮ ಒತ್ತುವರಿಯಾಗದಂತೆ ರಕ್ಷಿಸುವ ಅಗತ್ಯವಿದೆ. ಕ್ರೀಡಾಂಗಣ ನಿರ್ವಾಣದಿಂದ ಯುವಕರು ದೈಹಿಕವಾಗಿ ಸದೃಢರಾಗುವುದರ ಜತೆಗೆ ದುಶ್ಚಟಗಳಿಂದ ದೂರವಿದ್ದು, ಕ್ರೀಡಾಸಕ್ತಿ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ ಸಂಬಂಧಪಟ್ಟ ಕಂದಾಯ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಾಗದ ಲಭ್ಯತೆ ಮತ್ತು ನಿಯವಾನುಸಾರ ಕ್ರೀಡಾಂಗಣ ನಿರ್ವಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯುವಕರಿಗೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕನಸಿದೆ. ಆದರೆ ಅಭ್ಯಾಸ ವಾಡಲು ಸರಿಯಾದ ಮೈದಾನವಿಲ್ಲ. ಹತ್ತಾರು ವರ್ಷಗಳಿಂದ ಪಾಳುಬಿದ್ದಿರುವ ಗುಂಡು ತೋಪು ಜಾಗವನ್ನು ಕ್ರೀಡಾಂಗಣಕ್ಕಾಗಿ ಅಭಿವೃದ್ಧಿಪಡಿಸಿದರೆ ಯುವಕರ ಕ್ರೀಡಾ ಭವಿಷ್ಯ ಉಜ್ವಲಗೊಳ್ಳಲಿದೆ.

- ಆರಿವಾನಹಳ್ಳಿ ಮಂಜುನಾಥ, ಕ್ರೀಡಾಪ್ರೇಮಿ

ಹಳ್ಳಿ ಯುವಕರು ದೈಹಿಕವಾಗಿ ಸದೃಢರಾಗಲು ಹಾಗೂ ದುಶ್ಚಟಗಳಿಂದ ದೂರವಿರಲು ಸ್ಥಳೀಯ ಮಟ್ಟದಲ್ಲೇ ಕ್ರೀಡಾಂಗಣ ಅಗತ್ಯ. ಸರ್ಕಾರಿ ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗುವಂತೆ ಕ್ರಮ ಕೈಗೊಂಡು ಮೈದಾನ ನಿರ್ಮಿಸಬೇಕು.
- ವೆಂಕಟೇಶ್, ಮುಖಂಡ ಪೋಲೇನಹಳ್ಳಿ

ಬಡತನದ ಕಾರಣದಿಂದ ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಕ್ರೀಡಾ ಅಕಾಡೆಮಿಗಳಿಗೆ ಕಳುಹಿಸಲು ಎಲ್ಲ ಪಾಲಕರಿಗೂ ಸಾಧ್ಯವಾಗುವುದಿಲ್ಲ. ಸರ್ಕಾರವೇ ಈ ಜಾಗದಲ್ಲಿ ಮೈದಾನ ನಿರ್ಮಿಸಿದರೆ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ.

ವಿ.ಮಮತಾ, ಕ್ರೀಡಾಪ್ರೇಮಿ

ಕಬಡ್ಡಿ ಅಥವಾ ಕ್ರಿಕೆಟ್ ಆಡಲು ಹತ್ತಾರು ಕಿಲೋಮೀಟರ್ ದೂರದ ಊರುಗಳಿಗೆ ತೆರಳಬೇಕಿದೆ. ನಮ್ಮೂರಲ್ಲೇ ಸುಸಜ್ಜಿತ ಮೈದಾನ ನಿರ್ವಾಣವಾದರೆ ಪ್ರತಿದಿನ ಸಂಜೆ ಅಭ್ಯಾಸ ನಡೆಸಿ ನಮ್ಮ ಕ್ರೀಡಾ ಪ್ರತಿಭೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
ಸುದರ್ಶನ್, ಸ್ಥಳೀಯ ಕ್ರೀಡಾಪಟು