ಮಹಿಳಾ ಮೀಸಲಾತಿಗೆ ಕಾಂಗ್ರೆಸ್​ ವಿರೋಧ

ಕೋಲಾರ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಶೆಟ್ಟಿ ಮಾತನಾಡಿದರು. ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್​, ಅರುಣಮ್ಮ ಇದ್ದರು.
ಕೋಲಾರ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಶೆಟ್ಟಿ ಮಾತನಾಡಿದರು. ಓಂಶಕ್ತಿ ಚಲಪತಿ, ಬಿ.ವಿ.ಮಹೇಶ್​, ಅರುಣಮ್ಮ ಇದ್ದರು.
Published on
ಕೋಲಾರ: ದೇಶದಲ್ಲಿ ಮಹಿಳಾ ಮೀಸಲಾತಿ ಮಸೂಧೆ ಅಂಗೀಕಾರ ಮಾಡುವ ವಿಚಾರದಲ್ಲಿ ಕಾಂಗ್ರೆಸ್​ ಮೋಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಿದ್ದು, ಮಹಿಳಾ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಶೆಟ್ಟಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಜನ ಸಂಖ್ಯೆಯ ಹೆಚ್ಚಾಗುತ್ತಿದೆ, ಅದೇ ರೀತಿ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದ್ದು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಾಧಾನ್ಯತೆ ಕಲ್ಪಿಸಲು ಮೋದಿ ಅವರ ಉದ್ದೇಶವಾಗಿತ್ತು, ಆದರೆ ಕಾಂಗ್ರೆಸ್​ ವಿರೋಧ ಮಾಡುವ ಮೂಲಕ ಮಹಿಳಾ ವಿರೋಧ ನೀತಿ ಅನುಸರಿಸಿದೆ ಎಂದು ದೂರಿದರು.
ಭಾರತದ ವಿವಿಧ ಭಾಗಗಳಲ್ಲಿನ ಶೇಕಡವಾರು ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಯನ್ನು ವೈಜ್ಞಾನಿಕವಾಗಿ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿ ಅನ್ಯಾಯಾ ಯಾರಿಗೂ ಆಗುವುದಿಲ್ಲ. ಕಳೆದ 1992ರಲ್ಲಿ ಮಹಿಳಾ ಸಬಲೀಕರಣಕ್ಕೆ ಅದ್ಯತೆ ನೀಡಲಾಯಿತು. ಅಧಿಕಾರ ವೀಕೇಂದ್ರಿಕರಣಕ್ಕೆ ರಾಜೀವ್​ ಗಾಂಧಿ ಕಾಲದಲ್ಲಿ ಕ್ರಮವಹಿಸಿ, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನಿಗಧಿಪಡಿಸಲಾಗಿತ್ತಾದರು ಕಾಂಗ್ರೆಸ್​ನ ಒಳ ಜಗಳದಿಂದ ಅದು ವಿಲವಾಯಿತು ಎಂದರು. 
ಆನಂತರ ದೇವೇಗೌಡರ ಅವಧಿಯಲ್ಲಿ ಮುನ್ನಲೆಗೆ ತಂದು ಮಸೂಧೆ ಜಾರಿಗೆ ಮುಂದಾದರು, ಆಟಲ್​ ಬಿಹಾರಿ ವಾಜಪೇಯಿ ಅವಧಿಯಲ್ಲಿ 4 ಬಾರಿ ವಿಫಲವಾಗಿದೆ, ಇದಕ್ಕೆಲ್ಲ ಕಾಂಗ್ರೆಸ್​ ಕಾರಣವಾಗಿದೆ. ಸಮಾಜದಲ್ಲಿ ಮಹಿಳೆಯರು ಸಮಾನತೆಯಲ್ಲಿದ್ದರೂ ಶೇ.33ರಷ್ಟು ಜಾರಿಗೂ ಹಲವಾರು ಅಡ್ಡಿ ಆತಂಕಗಳು ಎಂದು ಬೇಸರ ವ್ಯಕ್ತಪಡಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಯಾಗುವ ನಿರೀಕ್ಷೆಗಳು ಹುಸಿಯಾದವು, ಆಗಾ ಮಾಡಿದ ಬಿಜೆಪಿ ಹೋರಾಟಗಳಿಗೆ ಮಾನ್ಯತೆ ನೀಡಲಿಲ್ಲ, 2010ರಲ್ಲಿ ಲೋಕಸಭೆಗೆ ಬಂದ ಬಿಲ್​ ರಾಜ್ಯ ಸಭೆಗೆ ಬರಲಿಲ್ಲ ಎಂದು ಮಾಹಿತಿ ನೀಡಿದರು. 
 ಇತ್ತೀಚಿಗೆ ನರೇಂದ್ರ ಮೋದಿಯ ಸರ್ಕಾರದಲ್ಲಿ ರಾಷ್ಟ್ರಪತಿಗಳ ಅಂಕಿತ ಅಗಿತ್ತಾದರೂ ಪ್ರತಿಪಕ್ಷಗಳ ಅಸಹಕಾರದಿಂದ ಯಶಸ್ವಿಯಾಗಲಿಲ್ಲ. ಮುಂದಿನ 2029ರಲ್ಲಿ ಮೋದಿಯವರು ಖಚಿತವಾಗಿ ಜಾರಿ ಮಾಡಲಿರುವ ಭರವಸೆ ನೀಡಿದ್ದಾರೆ. ಇದಕ್ಕೆ ವಿನಾಕಾರಣ ಅಡ್ಡಿ ಪಡಿಸುತ್ತಿರುವ ಕಾಂಗ್ರೆಸ್​ ವಿರುದ್ಧ ಮಂಡಲ್​ ಮಟ್ಟದಿಂದ ಹೋರಾಟಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಮಹಿಳೆಯರನ್ನು ಜಾಗೃತಿಗೊಳಿಸಲಾಗುವುದು ಎಂದು ಹೇಳಿದರು. 
ಧಮಾರ್ದ ಆಧಾರದ ಮೇಲೆ ಮೀಸಲಾತಿಗಳ ಹಂಚಿಕೆ ಮಾಡಲಾಗುವುದು ಎಂಬುವುದಕ್ಕೆ ಸಂವಿಧಾನದಲ್ಲಿ ಅವಕಶವಿಲ್ಲ ಕಾಂಗ್ರೆಸ್​ ಹೇಳುತ್ತಿದೆ. ಈ ಮೊದಲು ಕಾಂಗ್ರೆಸ್​ ಆಡಳಿತಾವಧಿಯಲ್ಲಿ ರಾಜ್ಯಗಳ ಮಟ್ಟದಲ್ಲಿ ಹಲವಾರು ಭಾರಿ ಕ್ಷೇತ್ರ ವಿಂಗಡಣೆಯಾಗಿದೆ. ಅದರೆ ಮೋದಿ ಅವರು ದೇಶದಲ್ಲಿ ಕ್ಷೇತ್ರ ವಿಂಗಡಣೆ ಮಾಡಬಾರದ ಎಂದು ಪ್ರಶ್ನಿಸಿದರು. 
ನಿದ್ದೆ ಮಾಡುವವರನ್ನು ಎಬ್ಬಿಸ ಬಹುದು, ಆದರೆ ನಿದ್ರೆ ಮಾಡುವವರಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಕಾಂಗ್ರೆಸ್​ ಜತೆಗೆ ವಿಪಕ್ಷಗಳು ನಿದ್ರೆ ನಟನೆಯಲ್ಲಿ ತೊಡಗಿಸಿ ಕೊಂಡಿದೆ. ಅದ್ದರಿಂದ ಜನಪರ ಯೋಜನೆಗಳಿಗೆ ಬೆಂಬಲ ನೀಡಲು ಹಿಂದೇಟು ಹಾಕುತ್ತಿವೆ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ದೇಶದಲ್ಲಿ ಮೀಸಲಾತಿ ಜಾರಿ ಮಾಡಬೇಕು ಎಂವುದು ಡಾ.ಬಿ.ಆರ್​.ಅಂಬೇಡ್ಕರ್​ ಅವರು ಆಶಯವಾಗಿತ್ತು, ಸಂಸತ್​ನಲ್ಲಿ ವಿಷಯ ಮಂಡಿಸಿದಾಗ ಕಾಂಗ್ರೆಸ್​ ವಿರೋಧ ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ಮಹಿಳಾ ವಿರೋಧಿಯಾಗಿದೆ ಎಂಬುದನ್ನು ಸಾಭೀತುಪಡಿಸಿಕೊಂಡಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯೆ ಅರುಣಮ್ಮ, ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ.ಮಹೇಶ್​, ಸಮಾ ಅನಿಲ್​ ಬಾಬು, ತಾಲೂಕು ಅಧ್ಯಕ್ಷ ರಾಮಚಂದ್ರ, ಶ್ರೀನಿವಾಸಪುರ ಚಂದ್ರು, ಮಾಧ್ಯಮ ಪ್ರಮುಖ್​ ಪ್ರವಿಣ್​ ಗೌಡ, ಮುಖಂಡರಾದ ತಿಮ್ಮರಾಯಪ್ಪ, ಸುಮಾ, ಕಿರೆಣ್​, ಶ್ರೀಧರ್​, ರಾಜೇಶ್​ ಸಿಂಗ್​, ಕೆಂಬೋಡಿ ನಾರಾಯಣಸ್ವಾಮಿ, ಮಮತಮ್ಮ ಹಾಜರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net