ನಕಲಿ ದಾಖಲೆ ಸೃಷ್ಟಿ 9 ಮಂದಿ ವಿರುದ್ಧ ದೂರು

ಪೌರ ನೌಕರರಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಸಂದಿಂದ ಬೋರ್ಡ್​ ಅಳವಡಿಸಿರುವುದು.
ಪೌರ ನೌಕರರಿಗಾಗಿ ಮೀಸಲಿಟ್ಟಿರುವ ಜಾಗದಲ್ಲಿ ಸಂದಿಂದ ಬೋರ್ಡ್​ ಅಳವಡಿಸಿರುವುದು.
Published on
ಕೋಲಾರ: ಪೌರಕಾರ್ಮಿಕರ ವಸತಿ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಜಾಗ ಸಂಬಂಧ ನಕಲಿ ದಾಖಲೆ ಸೃಷ್ಟಿಸಿಕೊಂಡು ಕಬಳಿಸಲು ಯತ್ನಿಸಿರುವ 9 ಮಂದಿ ವಿರುದ್ಧ, ನಗರ ಗಲ್​ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರದ ಶಾಂತಿನಗರದ ನಿವಾಸಿಗಳಾದ ಲಕ್ಷ$್ಮಮ್ಮ (60), ಶಕುಂತಲ (30), ಶಶಿಧರ್​ (43), ಆನಂದ (53), ನಗರದ ಧರ್ಮರಾಯ ನಗರದ ಹರೀಶ್​ ಕುಮಾರ್​ (46) ಬೆಂಗಳೂರಿನ ಕೆ.ಆರ್​.ಪುರ ನಿವಾಸಗಿಳಾದ ಗಾಯಿತ್ರಿ (36), ಮೋಹನ್​ (46), ಖಾಸಗಿ ಸರ್ವೇಯರ್​ಗಳಾದ ಮಹೇಶ್​ ಬಾಬು, ರಾಮಕೃಷ್ಣಪ್ಪ ವಿರುದ್ಧ ಪೌರ ನೌಕರರ ಗೃಹ ನಿರ್ಮಾಣ ಸಹಕಾರ ಸಂದ ಅಧ್ಯಕ್ಷ ವಿ.ಮೋಹನ್​ ಮಾ.27ರಂದು ಪೊಲೀಸರಿಗೆ ದೂರು ನೀಡಿದ್ದು, ಎ್​ಐಆರ್​ ದಾಖಲಾಗಿದೆ.
ತಾಲೂಕಿನ ಬಾರಂಡಹಳ್ಳಿ ಗ್ರಾಮದ ಸರ್ವೇ ನಂಬರ್​ 6ರ ಪೈಕಿ 3 ಎಕರೆ 29 ಗುಂಟೆ ಹಾಗೂ ಸವೇ ನಂಬರ್​ 5ರ ಪೈಕಿ 1 ಎಕರೆ 17 ಗಂಟೆ ಜಮೀನನ್ನು ಪೌರ ನೌಕರರ ಗೃಹ ನಿರ್ಮಾಣದ ಸಲುವಾಗಿ 2001ರಲ್ಲಿ ಖರೀದಿ ಮಾಡಿ ಸಂದ ಪರವಾಗಿ ಅಂದಿನ ಅಧ್ಯಕ್ಷ ಟಿ.ವೆಂಕಟೇಶ್​ ಅವರಿಗೆ ಹೆಸರಿಗೆ ಕ್ರಯ ಮಾಡಲಾಗಿರುತ್ತದೆ.
ಇದಕ್ಕೆ ಲೆಕ್ಕಪರಿಶೋಧಕರಿಂದ ಆಕ್ಷೇಪ ಬಂದಿದ್ದರಿಂದ ವೆಂಕಟೇಶ್​ ಅವರೇ 227 ಮಂದಿ ಪೌರ ಕಾರ್ಮಿಕರಿಗೆ ಹಕ್ಕು ಪತ್ರಗಳನ್ನು ವಿತರಿಸಿದ್ದರು. 2008ರಲ್ಲಿ ವೆಂಕಟೇಶ್​ ಮೃತಪಟ್ಟಿದ್ದು ತದ ನಂತರ ನಗರಸಭೆ ಕಚೇರಿಯ ಜವಾನ ಆನಂದ ಮತ್ತು, ಮೃತತರ ಪತ್ನಿ ಲಕ್ಷ$್ಮಮ್ಮ ಮತ್ತು ಮಕ್ಕಳು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಖತಾ ಬದಲಾಯಿಸಿಕೊಂಡಿರುತ್ತಾರೆ.
ಸದರಿ ಜಮೀನು ಸಂಬಂಧ 11 (ಎ) ನೆಯನ್ನು ಮಾಡಿಸಿದ್ದು, ಇದಕ್ಕಾಗಿ ಮೃತಪಟ್ಟಿರುವ ವೆಂಕಟೇಶ್​ ಹೆಸರಿನಲ್ಲಿ 2025ರಲ್ಲಿ ಅರ್ಜಿ ಸಲ್ಲಿಸಿ, ಆನಂದ ಅವರ ಮೊಬೈಲ್​ ಸಂಖ್ಯೆಯನ್ನು ನೀಡಲಾಗಿರುತ್ತದೆ. ಈ ಅಕ್ರಮ ಪರಭಾರೆಯನ್ನು ಮನಗಂಡ ಪೌರಕಾರ್ಮಿಕ ನಿರ್ಮಾಣ ಸಂದ ಅಧ್ಯಕ್ಷ ಮೋಹನ್​ ಹಾಗೂ ಇತರರು, ನ್ಯಾಯಾಲಯದಲ್ಲಿ ಧಾವೆ ಹೂಡಿ ತಡೆಯಾಜ್ಞೆ ನೀಡಲು ಕೋರಿದ್ದರು, ಅದರಂತೆ ತಡೆಯಾಜ್ಞೆ ನೀಡುರುವ ನ್ಯಾಯಾಲಯವು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದ್ದರಿಂದ ದೂರು ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net