ನಂಬಿಹಳ್ಳಿಯಲ್ಲಿ ಶೀಘ್ರವೇ ಬಿಎಂಸಿ ಕೇಂದ್ರ ಸ್ಥಾಪನೆ

ಶ್ರೀನಿವಾಸಪುರ ತಾಲೂಕು ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ  ಕೋಮುಲ್​ ನಿರ್ದೇಶಕ ಕೆ.ಕೆ ಮಂಜುನಾಥ್​ ಮಾತನಾಡಿದರು. ಶಿಬಿರದ ಉಪ ವ್ಯವಸ್ಥಾಪಕ ಕೆ. ಎಂ ಮುನಿರಾಜು, ಸಂಘದ ಅಧ್ಯಕ್ಷ ಎನ್​.ಕೆ.ಲಕ್ಷಿ$್ಮನಾರಾಯಣ ಗೌಡ, ಸಿಇಒ ಎಸ್​ ನಾಗರಾಜ್​, ಹಾಲು ಪರೀಕ್ಷಕ ರಾಮಾಂಜಿನಪ್ಪ, ವೆಂಕಟರಮಣಪ್ಪ ಇದ್ದರು.
ಶ್ರೀನಿವಾಸಪುರ ತಾಲೂಕು ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕೋಮುಲ್​ ನಿರ್ದೇಶಕ ಕೆ.ಕೆ ಮಂಜುನಾಥ್​ ಮಾತನಾಡಿದರು. ಶಿಬಿರದ ಉಪ ವ್ಯವಸ್ಥಾಪಕ ಕೆ. ಎಂ ಮುನಿರಾಜು, ಸಂಘದ ಅಧ್ಯಕ್ಷ ಎನ್​.ಕೆ.ಲಕ್ಷಿ$್ಮನಾರಾಯಣ ಗೌಡ, ಸಿಇಒ ಎಸ್​ ನಾಗರಾಜ್​, ಹಾಲು ಪರೀಕ್ಷಕ ರಾಮಾಂಜಿನಪ್ಪ, ವೆಂಕಟರಮಣಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಂಬಿಹಳ್ಳಿಯಲ್ಲಿ ಶೀಘ್ರವೇ ಬಿಎಂಸಿ ಕೇಂದ್ರ ಸ್ಥಾಪನೆ
ನಂಬಿಹಳ್ಳಿಯಲ್ಲಿ ಶೀಘ್ರವೇ ಬಿಎಂಸಿ ಕೇಂದ್ರ ಸ್ಥಾಪನೆ

ಶ್ರೀನಿವಾಸಪುರ:

ಗ್ರಾಮೀಣ ಭಾಗದ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಹೈನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ. ಕೃಷಿಯ ಜತೆಗೆ ಹೈನುಗಾರಿಕೆ ಕೈಗೊಳ್ಳುವುದರಿಂದ ರೈತರಿಗೆ ಪ್ರತಿದಿನವೂ ಆದಾಯದ ಮೂಲ ದೊರೆಯಲಿದ್ದು, ಕುಟುಂಬದ ಆರ್ಥಿಕ ಸ್ಥಿರತೆ ಹೆಚ್ಚಲಿದೆ ಎಂದು ಕೋಮುಲ್​ ನಿರ್ದೇಶಕ ಕೆ.ಕೆ ಮಂಜುನಾಥ್​ ತಿಳಿಸಿದರು.

ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶೀಘ್ರ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಲ್ಕ್​ ಮಿಲ್ಕ್​ ಕೂಲರ್​ (ಬಿಎಂಸಿ) ಕೇಂದ್ರ ಒದಗಿಸಲಾಗುವುದು ಎಂದರು.
ರೈತರಿಗೆ 15 ದಿನದೊಳಗೆ ಬಿಲ್​ ಕೈಸೇರುವುದು ಡೇರಿಯಲ್ಲಿ ಮಾತ್ರ. ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬದಲು ತಿಪ್ಪೆ ಗೊಬ್ಬರ ಉಪಯೋಗಿಸಿ ಎರಡು ಹಸು ಸಾಕಿದರೆ ಗೊಬ್ಬರ ಆಗುತ್ತದೆ. ಜತೆಗೆ ಹಸುಗಳಿಗೆ ಕಡ್ಡಾಯವಾಗಿ ಇನ್ಶೂರೆನ್ಸ್​ ಮಾಡಿಸಬೇಕು. ಹಸು ಮರಣ ಹೊಂದಿದರೆ ರೈತರಿಗೆ ಸೌಲಭ್ಯ ಸಿಗುತ್ತದೆ. ನಾಲ್ಕು ಹಸುಗಳ ಜತೆಗೆ ಒಂದು ಎಮ್ಮೆ ಸಾಕಿದರೆ ಪ್ಯಾಟ್​ ಆಧಾರದಲ್ಲಿ ಹೆಚ್ಚು ಆದಾಯವಾಗುತ್ತದೆ ಎಂದರು.
ಶಿಬಿರದ ಉಪ ವ್ಯವಸ್ಥಾಪಕ ಕೆ. ಎಂ ಮುನಿರಾಜು ಮಾತನಾಡಿ, ನಂಬಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಹಿಂದೆ ಅನೇಕ ಸಮಸ್ಯೆಯಲ್ಲಿತ್ತು. ಪ್ರಸ್ತುತ ಸಂಘವು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಹಿಂದೆ 400 ಲೀ. ಹಾಲು ಉತ್ಪಾದನೆ ಆಗುತ್ತಿದ್ದು, ಈಗ 1,400 ಲೀ. ಹಾಲು ಡೇರಿಗೆ ಬರುತ್ತದೆ. ಇಲ್ಲಿಯೇ ಬಿಎಂಸಿ ಮಾಡಬೇಕೆಂದು ಜಿಲ್ಲಾ ಹಾಲು ಒಕ್ಕೂಟಕ್ಕೆ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ಈ ಸಂಘಕ್ಕೆ ಅನುಕೂಲ ಮಾಡಲಾಗುವುದು ಎಂದರು.
ಸಂಘದ ಅಧ್ಯಕ್ಷ ಎನ್​.ಕೆ.ಲಕ್ಷಿ$್ಮನಾರಾಯಣ ಗೌಡ ಮಾತನಾಡಿ, ನಂಬಿಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಬಿಎಂಸಿ ಕೇಂದ್ರ ಸ್ಥಾಪನೆಯಾದರೆ ರೈತರು ಉತ್ಪಾದಿಸುವ ಹಾಲನ್ನು ಶೀತಲೀಕರಣ ವ್ಯವಸ್ಥೆಯೊಂದಿಗೆ ಸಂಗ್ರಹಿಸಲು ಅನುಕೂಲವಾಗಲಿದೆ. ಇದರಿಂದ ಹಾಲಿನ ಗುಣಮಟ್ಟ ಕಾಪಾಡುವುದರ ಜತೆಗೆ ಹಾಲು ಉತ್ಪಾದಕರಿಗೆ ಸಹಾಯವಾಗಲಿದೆ ಎಂದರು.

ಮುಖಂಡರಾದ ನಾರಾಯಣಸ್ವಾಮಿ, ನಾಗರಾಜ್​, ನರಸಿಂಹಪ್ಪ ಇತರರು ಇದ್ದರು.

14 ಎಸ್​ವಿಪುರ 01
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net