ಕೋಲಾರ: ಇಚೆಗೆ ದೆಹಲಿಯಲ್ಲಿ ನಡೆದ ಎಐ ಕಾರ್ಯಾಗಾರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿರುವುದನ್ನು ಖಂಡಿಸಿ, ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಡೂಂ ಲೈಟ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ರಾಹುಲ್ ಗಾಂಧಿ ವಿರುದ್ಧ ಘೋಷಣೆ ಕೂಗಿದರು.
ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರಂಜಿಕಟ್ಟೆ ಹರೀಶ್ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಮೇಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದೆ. ಭಾರತವನ್ನು ವಿಶ್ವಮಾನವ ಸ್ಥಾನದಲ್ಲಿ ನೋಡುವಂತೆ ಮಾಡಲಾಗಿದೆ ಎಂದು ಹೇಳಿದರು.
ಸುಮಾರು ವರ್ಷಗಳಿಂದ ದೇಶದ ಅಳ್ವಿಕೆ ನಡೆಸಿದ ಕಾಂಗ್ರೆಸ್ ಶತೃ ರಾಷ್ಟ್ರಗಳೊಂದಿಗೆ ಸ್ನೇಹ ಬೆಳೆಸಿದ್ದೇ ಸಾಧನೆ. ಆದರೆ ಮೋದಿ ಅವರು ಸ್ನೇಹ ರಾಷ್ಟ್ರೀಗೊಂದಿಗೆ ಸಮನ್ವಯತೆ ಕಾಯ್ದುಕೊಂಡಿದ್ದಾರೆ. ಜಿಡಿಪಿ ಸಾಧರಣೆಯಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವಂತೆ ಮಾಡಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಕಾಂಗ್ರೆಸ್ನವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರಿಗೆ ದೇಶದ ಯುವಕರೆಲ್ಲ ಸೇರಿ ಪಪು$್ಪ ಎಂದು ಹೆಸರಿಟ್ಟಿದ್ದಾರೆ. ಅವರಿಗೆ ಜ್ಞಾನ ಇದಿದ್ದರೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಸಮಾರಭದಲ್ಲಿ ಗಲಾಟೆ ಮಾಡಿಸುತ್ತಿರಲಿಲ್ಲ. ಜವಾಬ್ದಾರಿ ಸ್ಥಾನದಲ್ಲಿ ಇದ್ದು ಅಭಿವೃದ್ಧಿಗೆ ಸಹಕಾರ ನೀಡಬೇಕು, ಅದು ಬಿಟ್ಟು ಅಧಿಕಾರಕ್ಕಾಗಿ ಜಗಳ ಮಾಡಿಸುವುದು, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ಗಲಭೆ ಸೃಷ್ಟಿಸುವುದು ಸರಿಯಲ್ಲ ಎಂದು ಆರೋಪಿಸಿದರು.
ಕೆಂಬತನಹಳ್ಳಿ ಗ್ರಾ.ಪಂ ಮಾಜಿ ಸದಸ್ಯ ಸುನೀಲ್ ಮಾತನಾಡಿ, ಸಾರ್ವಜನಿಕ ಸಭೆಗಳ ಮೇಲೆ, ಮೆರವಣಿಗೆಗಳ ಮೇಲೆ ಕಲ್ಲು ಎಸೆಯುವುದು ನಮ್ಮ ಸಂಸತಿಯಲ್ಲ, ಅದು ಕಾಂಗ್ರೆಸ್ ಸಂಸತಿ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತಾಕತ್ತಿದ್ದರೆ ಮೋದಿ ಅವರನ್ನು ಭೇಟಿ ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಸತತವಾಗಿ ಮೂರನೇ ಭಾರಿ ಅಧಿಕಾರಕ್ಕೆ ಬಂದಿದೆ ಎಂದರೆ ಅದು ಸುಲಭದ ವಿಷಯವಲ್ಲ. ಜನಪರ ಆಡಳಿತ ನೀಡಿರುವುದಕ್ಕೆ ಜನ ಸತತವಾಗಿ ಆದೇಶ ನೀಡಿದ್ದಾರೆ. ಇಲ್ಲಿ ಕಾಂಗ್ರೆಸನ್ನು ಯಾಕೆ ತಿರಸ್ಕರಿಸಿದ್ದಾರೆ ಎಂಬುದನ್ನು ಆತ್ಮವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
ಪ್ರಧಾನ ಕಾರ್ಯದರ್ಶಿ ಬಿಂದು ಮಾಧವ್, ಉಪಾಧ್ಯಕ್ಷ ದೀನಾ, ನಗರ ಯುವ ಮೋರ್ಚಾ ಅಧ್ಯಕ್ಷ ಸಾಯಿ ಮೌಳಿ, ಬಾಬು, ಶರತ್, ಕಿರಣ್, ರಾಕೇಶ್, ರವಿ, ಬಿಜೆಪಿ ನಗರ ಅಧ್ಯಕ್ಷ ಸಾಮ ಅನಿಲ್ ಬಾಬು, ಓಬಿಸಿ ಅಧ್ಯಕ್ಷ ನಾಮಲ್ ಮಂಜುನಾಥ್, ಮಾಧ್ಯಮ ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.