ಬಜೆಟ್​ನಲ್ಲಿ ಜಿಲ್ಲೆಗೆ ದ್ರೋಹ

ಕೋಲಾರ ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜನಪ್ರತಿನಿಧಿಗಳ ಮುಖವಾಡ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಕೋಲಾರ ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಜನಪ್ರತಿನಿಧಿಗಳ ಮುಖವಾಡ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು.
Published on
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಭಾರಿ ದಾಖಲೆ ಬಜೆಟ್​ ಮಂಡಿಸಿದ್ದು, ಇದು ಜಿಲ್ಲೆಯ ಪಾಲಿಗೆ ನಿರಾಶದಾಯಕವಾಗಿದೆ ಎಂದು ವಿರೋಧಿಸಿ ಬಿಜೆಪಿ ಕಾರ್ಯತರ್ಕರು ಜನಪ್ರತಿನಿಧಿಗಳ ಮುಖವಾಡ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಸಚಿವ ಬೈರತಿ ಸುರೇಶ್​ ಸೇರಿದಂತೆ ಶಾಸಕ ಮುಖವಾಡ ಧರಿಸಿ, ಖಾಲಿ ಚೆಂಬು ಹಿಡಿದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಬಜೆಟ್​ಗೂ ಮುಂಚೆ ಜಿಲ್ಲೆಗೆ ಬರಪೂರ ಬಜೆಟ್​ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದರು, ಆದರೆ ಸರ್ಕಾರವು ಜಿಲ್ಲೆಗೆ ದ್ರೋಹ ಬಗೆದಿದೆ ಎಂದು ದೂರಿದರು.
ಜಿಲ್ಲೆಯಲ್ಲಿ ಕೊತ್ತೂರು ಜಿ.ಮಂಜುನಾಥ್​, ರೂಪಕಲಾ, ಎಸ್​.ಎನ್​.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ ಕಾಂಗ್ರೆಸ್​ನಿಂದ ಶಾಸಕರಾಗಿದ್ದಾರೆ. ಎಂಎಲ್ಸಿಗಳಾದ ಅನಿಲ್​ ಕುಮಾರ್​, ನಜೀರ್​ ಅಹಮದ್​ ಇದ್ದು, ನಿರೀತ ಮಟ್ಟದಲ್ಲಿ ಬಜೆಟ್​ ತರುವಲ್ಲಿ ವಿಲವಾಗಿದ್ದಾರೆ. ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆ.ಎಚ್​.ಮುನಿಯಪ್ಪ ಅವರಿಗೆ ಟಿಕೆಟ್​ ನೀಡುವ ವಿಚಾರದಲ್ಲಿ ರಾಜೀನಾಮೆ ನಾಟಕ ಆಡಿದರು. ಬಜೆಟ್​ ದೊರೆಯದೆ ಇರುವುದಕ್ಕೆ ರಾಜೀನಾಮೆ ನೀಡಿ ಮರು ಚುನಾವಣಗೆ ಬರಲಿ ಎಂದು ಸವಾಲು ಹಾಕಿದರು.
ಬಜೆಟ್​ನಲ್ಲಿ ಜಿಲ್ಲೆಗೆ ಖಾಲಿ ಚೊಂಬ್​ ಸಿಕ್ಕಿದೆ, ಎಪಿಎಂಸಿ ಮಾರುಕಟ್ಟೆಗೆ ಜಾಗ, ರಿಂಗ್​ ರಸ್ತೆ, ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಯೋಜನೆಗಳನ್ನು ಕೈಬಿಡುವ ಮೂಲಕ ಜಿಲ್ಲೆಯ ಜನರಿಗೆ ಕಾಂಗ್ರೆಸ್​ ಸರ್ಕಾರ ದ್ರೋಹ ಮಾಡಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಕಳೆದ ವರ್ಷ ಪಿಪಿಪಿ ಮಾದರಿಯಲ್ಲಿ ಮೆಡಿಕಲ್​ ಕಾಲೇಜು ಘೋಷಣೆ ಮಾಡಿದ್ದರು, ಇದಕ್ಕೆ ಯಾರು ಮುಂದೆ ಬಾರದ ಹಿನ್ನಲೆಯಲ್ಲಿ ವಿಸತ ವರದಿ ತಯಾರಿಸಿಮಾಡಿದ ನಂತರ ಸ್ಥಾಪನೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದೆಲ್ಲ ಆಗದ ಕೆಲಸವಾಗಿದ್ದು, ನಿರಾಶದಾಯ ಬಜೆಟ್​ ಸಿಗಬೇಕಾದರೆ ಆಡಳಿತ ರೂಢ ಶಾಕಸರ ವೈಲವ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಮಾವು ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರು, ಆಗ ಕೇಂದ್ರ ಸರ್ಕಾರದ ಮಧ್ಯ ಪ್ರವೇಶದಿಂದ ನೆರವು ನೀಡಿದರು. ಈ ಸಮಸ್ಯೆ ಕುರಿತು ಸರ್ಕಾರದ ಗಮನಕ್ಕೆ ಇದ್ದರು ಸಹ ವಿಚಾರವನ್ನು ಪ್ರಸ್ತಾಪ ಮಾಡದೆ ಇರುವುದು ಸರ್ಕಾರದ ಬಂಡತನ ಪ್ರದರ್ಶನ ಆಗಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ವಿಜಿಕುಮಾರ್​, ಲಕ್ಷಿ$್ಮನಾರಾಯಣ, ಸಮಾ ಅನಿಲ್​, ಓಹಿಲೇಶ್​, ರಾಜೇಶ್​ ಸಿಂಗ್​ ಮತಿತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net