ಕೋಲಾರ ನಗರ ಮಾತ್ರವಲ್ಲದೆ ಶ್ರೀನಿವಾಸಪುರ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಬಸ್ನಿಲ್ದಾಣಕ್ಕೆ ಹತ್ತಿರವಿರುವ ಮದ್ಯದಂಗಡಿ ಸಮೀಪ ಏನೂ ದೊರೆಯದಿದ್ದರೂ ಮದ್ಯದ ಬಾಟಲಿಗಳಂತೂ ಸದಾ ದೊರೆಯುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿಯೂ ದಿನದ 24 ಗಂಟೆ ಮದ್ಯ ಲಭ್ಯವಾಗುತ್ತಿದ್ದು, ಜನರು ಬೆಳಗಿನ ಜಾವವೇ ಕುಡಿತದ ಚಟಕ್ಕೆ ಬಿದ್ದು, ಕೆಲಸ ಕಾರ್ಯ ಮಾಡದೆ ಕುಟುಂಬವನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ.