ಕೈ.ಕಮಲದ ಮಧ್ಯೆ ಬ್ಯಾನರ್​ ಸಂರ್ಷ

ಘಟನಾ ಸ್ಥಳದಲ್ಲಿ ಜಮಾಯಿಸಿರುವ ಸಾರ್ವಜನಿಕರು.
ಘಟನಾ ಸ್ಥಳದಲ್ಲಿ ಜಮಾಯಿಸಿರುವ ಸಾರ್ವಜನಿಕರು.
Published on
ಕೋಲಾರ: ರಾಜ್ಯದ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಸಂಭವಿಸಿದ್ದ ಬ್ಯಾನರ್​ ಗಲಾಟೆ ಮಾಸುವ ಮುನ್ನವೇ, ಜಿಲ್ಲೆಯ ಮಾಲೂರು ನಗರದಲ್ಲಿ ಭಾನುವಾರ ರಾತ್ರಿ ಇಂತಹದ್ದೆ ಟನೆ ಜರುಗಿದೆ.
ಕರಗ ಹಾಗೂ ಸಿಡಿ ಮಹೋತ್ಸವ ಭಾನುವಾರ ರಾತ್ರಿ ಆಚರಣೆಯಿತ್ತು, ಇದಕ್ಕಾಗಿ ಆಗಮಿಸುವ ಭಕ್ತರಿಗೆ ಸ್ವಾಗತ ಕೋರಿ, ಕಾಂಗ್ರೆಸ್​, ಜೆಡಿಎಸ್​, ಬಿಜೆಪಿ ಸೇರಿದಂತೆ ಹಲವು ಸ್ಥಳಿಯ ಮುಖಂಡರು ಬ್ಯಾನರ್​ಗಳನ್ನು ಅಳವಡಿಸಿದ್ದರು. ರಾಷ್ಟ್ರ, ರಾಜ್ಯ, ಜಿಲ್ಲೆಯ ನಾಯಕರ ಭಾವ ಚಿತ್ರಗಳನ್ನು ಸಹ ಅಳವಡಿಸಿದ್ದರು.
ಬಿಜೆಪಿ ಮುಖಂಡ ಪ್ರದಿಪ್​ ರೆಡ್ಡಿ ಸೇರಿದಂತೆ ಹಲವು ಮಂದಿ ನಗರದ ವಿವಿಧೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್​ ಷಾ ಸೇರಿದಂತೆ ಹಲವು ನಾಯಕರ ಭಾವಚಿತ್ರಗಳುಳ್ಳ ಬ್ಯಾನರ್​ ಅಳವಡಿಸಿದ್ದರು, ಇದನ್ನು ಕಿಡಿಗೇಡಿಗಳು ಹರಿದು ಹಾಕಿ ನೆಲಕ್ಕೆ ಉರುಳಿಸಿದ್ದಾರೆ, ಇದನ್ನು ಕಂಡು ಬಿಜೆಪಿ ಮುಖಂಡರು, ಕಾರ್ಯಕರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಕೃತ್ಯವನ್ನು ಕಾಂಗ್ರೆಸ್​ನವರೇ ಮಾಡಿರೋದು ಎಂದು ಆರೋಪಿಸಿ ಆಕ್ರೋಶವ್ಯಕ್ತಪಡಿಸಿದರು.
ಅದೇ ಸಂದರ್ಭದಲ್ಲಿ ಸ್ಥಳದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಇದ್ದುದ್ದರಿಂದ ಕೆಲ ನಿಮಿಷಗಳ ಕಾಲ ಗದ್ದಲ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ರವಿಶಂಕರ್​, ಇತರ ಪೊಲೀಸ್​ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
* ಶಾಸಕರಿಗೆ ಬಂದೋಬಸ್ತ್​
ಬ್ಯಾನರ್​ ವಿಚಾರಕ್ಕೆ ಗಲಾಟೆ ಆದ ಬೆನ್ನಲ್ಲೆ ಘಟನಾ ಸ್ಥಳಕ್ಕೆ ಶಾಸಕ ಕೆ.ವೈ.ನಂಜೇಗೌಡ ಭೇಟಿ ನೀಡಿ, ಮುಖಂಡರು ಹಾಗು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ರವಿಶಂಕರ್​ ಜತೆಗೆ ಮಾತುಕತೆ ನಡೆಸಿದರು
ಗಲಾಟೆ ಯಾರಾದರು ಮಾಡಿಕೊಳ್ಳಲಿ, ಬ್ಯಾನರ್​ಗಳು ಎಲ್ಲಿ ಬೇಕಾದರೂ ಹಾಕಿಕೊಳ್ಳಲಿ, ಯಾರೂ ಗಲಾಟೆ ಮಾಡಿಕೊಳ್ಳುವುದು ಬೇಡ ಎಂದು ಕೈ ಮುಖಂಡರು, ಕಾರ್ಯಕರ್ತರಿಗೆ ಶಾಸಕ ನಂಜೇಗೌಡ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಇನ್ನು ಬಳಿಕ ಹೊಸ ಬಸ್​ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸಿಡಿ ಉತ್ಸವದಲ್ಲಿ ಭಾಗಿಯಾಗಿ ಸ್ಥಳದಿಂದ ಶಾಸಕ ಕೆ.ವೈ.ನಂಜೇಗೌಡ ತೆರಳುವಾಗ, ಪೊಲೀಸ್​ ಸರ್ಕಲ್​ ಇನ್ಸ್​ಪೆಕ್ಟರ್​ ಹಾಗು ಸಬ್​ ಇನ್ಸ್​ಪೆಕ್ಟರ್​ ಪ್ರತ್ಯೇಕ ಜೀಪ್​ಗಳಲ್ಲಿ ಕಾರಿಗೆ ಎಸ್ಕಾರ್ಟ್​ ನೀಡಿದರು. ನಂಜೇಗೌಡ ಅವರು ಪ್ರಯಾಣಿಸುತ್ತಿದ್ದ ಕಾರಿನ ಪುಟ್​ ರೋಸ್ಟ್​ ಮೇಲೆ ಕೆಲ ಕಾರ್ಯಕರ್ತರು, ನಿಂತು ಪ್ರಯಾಣಿಸುವ ಮೂಲಕ ಬಂದೋಬಸ್ತ್​ ನೀಡಿದ್ದು ಕಂಡುಬಂತು.
* ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ನಾವೇನು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಬ್ಯಾನರ್​ ಕಟ್ಟಿಲ್ಲ, ದೇವಾಲಯದ ಗೋಪರಕ್ಕೂ ಸಹ ಕೆವರು ಕಟ್ಟಿದ್ದಾರೆ. ಇಲ್ಲಿ ಭೂಕಂಪ ಆಗುವ ಅಗಿದ್ದರೆ ಸಾರ್ವಜನಿಕರ ಹಿತದೃಷ್ಟಿಯಿಂದ ತೆಗೆಯೋಣ, ಅಸಲು ನಾವು ಬ್ಯಾನರ್​ ಕಟ್ಟಿಕೊಂಡಿರುವ ಜಾಗ ಸ್ವಂತದ್ದು, ಬ್ಯಾನರ್​ನಲ್ಲಿ ಹಾಕಿರುವ ೋಟೊಗೆ ಅಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡುವುದು ಎಷ್ಟು ಮಾತ್ರ ಸರಿ ಎಂದು ಬಿಜೆಪಿ ಕಾರ್ಯರ್ತರು ಪೊಲೀಸರನ್ನು ಪ್ರಶ್ನಿಸಿದರು.
ಅಲ್ಲಿ ಕಟ್ಟಿ, ಇಲ್ಲಿ ಕಟ್ಟಬಾರದು ಎಂದು ಸಣ್ಣ ಕೆಲಸಕ್ಕೆ ನಾವು ಹೋಗುವುದಿಲ್ಲ, ಉದ್ದೇಶ ಪೂರ್ವಕವಾಗಿಯೇ ಕೃತ್ಯ ಎಸಗಿದ್ದಾರೆ, ಕಿಡಿಗೇಡಿಗಳ ವಿರುದ್ಧ ಕ್ರಮಜರುಗಿಸಬೇಕು ಎಂದು ಮುಖಂಡ ಪ್ರದಿಪ್​ರೆಡ್ಡಿ ಒತ್ತಾಯಿಸಿದರು.
* ಹೊಟ್ಟೆ ಉರಿ
ನಾನು, ನನ್ನ ಅಧಿಕಾರಿ ಎಂಬುದನ್ನು ಬಿಡಬೇಕು, ಇದು ರಾಜಕೀಯ ಪ್ರೇರಿತವಲ್ಲ, ಹೊಟ್ಟೆ ಉರಿ ಪ್ರೇರಿತತವಾಗಿ ಕೃತ್ಯ ಮಾಡಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವವರಿಗೆ ಸ್ವಾಗತ ಕೋರಿ ಬ್ಯಾನರ್​ ಹಾಕಿರುವುದರಲ್ಲಿ ತಪ್ಪೇನಿದೆ. ಇಷ್ಟು ಮಾತ್ರಕ್ಕೆ ಪೌರಾಯುಕ್ತರನ್ನು, ಪೊಲೀಸರನ್ನು ಬಳಸಿಕೊಂಡು ತೆರವುಗೊಳಿಸುವುದು ಎಷ್ಟು ಮಾತ್ರ ಸರಿಯಲ್ಲ. ಇನ್ನು ನೂರಾರು ಕೋಟಿ ಬರತಿದೀಯಲ್ಲ, ಹಾಕಿಸಿಕೊಳ್ಳಿ ಬಿಡಿ, ಯಾರು ಅಡ್ಡ ಇದ್ದಾರೆ ಎಂದು ಮಾಜಿ ಶಾಸಕ ಕೆ.ಎಸ್​.ಮಂಜುನಾಥ್​ ಗೌಡ ಕಿಡಿಕಾರಿದರು.
ನನ್ನ, ಅವರ ಮುಖವನ್ನು ಯಾರು ನೋಡಿ ಹೇಳಿ?, ಬ್ಯಾನರ್​ ನೋಡಿ ಜನ ಮತ ಹಾಕಿಬಿಡ್ತರ. ಹೀಗೆ ಆಗುತ್ತಿದ್ದಿದ್ದರೆ ಅಂಬಾನಿ ಪ್ರಧಾನಿ ಆಗುವರು, ಮೋದಿ ಆಗುತ್ತಿರಲಿಲ್ಲ. ದಾವಣಗೆರೆ ಲಿತಾಂಶ ಹೊರ ಬಂದಾಗ ಗೊತ್ತಾಗುತ್ತದೆ ಕಾಂಗ್ರೆಸ್​ನವರ ಆಟ. ಶ್ಯಾಮನೂರು ಶಿವಶಂಕರಪ್ಪ ಅವರಗಿಂತ ಹೆಚ್ಚು ದುಡ್ಡು ನೋಡಲು ಸಾಧ್ಯವೆ, ಜನರ ವಿಶ್ವಾಸಗಳಿಸಬೇಕು, ಬೈ ಲಕ್ಕು, ಬೈ ಚಾನ್ಸ್​ ಆಗುವುದನ್ನು ಹೊಡೆಯಬೇಕು, ಜಾತಿ ಎತ್ತಿಕಟ್ಟುವುದು, ಗಲಾಟೆ ಮಾಡಿಸುವುದು ಅಸಾಯೆ ಆಗುತ್ತಿದೆ, ಪ್ರದಿಪ್​ ರೆಡ್ಡಿ ನಮ್ಮೊಟ್ಟಿಗೆ ಬಂದಿದ್ದೆ ಕೋಪವಾಗಿದೆ ಎಂದು ದೂರಿದರು.
ಇಂತಹದಕ್ಕೆಲ್ಲ ಪೊಲೀಸರು ಪ್ರೋತ್ಸಾಹ ಕೊಡಬಾರದು, ತಮಿಳುನಾಡಿನಲ್ಲಿ ಪೊಲೀಸರು ನ್ಯಾಯದ ವಿರುದ್ಧ ಹೋಗಿದ್ದಕ್ಕೆ 9 ಮಂದಿ ತಲೆದಂಡವಾಗಿದ್ದಾರೆ. ಮಾಡುವ ಗಲೀಜು ನ್ಯಾಯಾಲಯದ ಗಮನಕ್ಕೆ ಬಂದರೆ ಭೀಮಾರಿ ಹಾಕುತ್ತಾರೆ, ಪೊಲೀಸರು ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಸಿದರು.
ಕಾಂಗ್ರೆಸ್​ನ ಮಧುಸೂಧನ್​ ಅವರು ತಲ ತಲಾಂತರಗಳಿಂದ ಪಟಾಲಮ್ಮ ಜಾತ್ರೆ ನಡೆಸಿಕೊಂಡು ಬರುತ್ತಿದ್ದರು, ಇದೀಗ ಹರಾಜು ಹಾಕಿಸಿ ಬೆಂಗಳೂರಿನವರಿಗೆ ಕೊಟ್ಟಿದ್ದಾರೆ. ಈ ರೀತಿ ಮಾಡಬಾರದು, ನಮ್ಮ ಮಾಲೂರು ಅಂತ ಜನಕ್ಕೆ ತೊಂದರೆ ಕೊಡಬಾರದು ಎಂದು ಕಿವಿಮಾತು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net